ಮುಡಾ ನಿವೇಶನ ಹಂಚಿಕೆ ಸಂಬಂಧ ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ
ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.25:
ಮೈಸೂರು ನಗರಾಭಿವೃದ್ಧಿಿ ಪ್ರಾಾಧಿಕಾರದಿಂದ (ಮುಡಾ) ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಾಯಾಲಯವು ಮುಖ್ಯಮಂತ್ರಿಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಾಯಾಲಯದ ನ್ಯಾಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಹೈಕೋರ್ಟ್ ಆದೇಶದ ಬೆನ್ನಲ್ಲಿಯೇ ಬುಧವಾರ ತಮ್ಮ ಆದೇಶವನ್ನು ಸಹ ಪ್ರಕಟಿಸಿದ್ದು, ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡಬೇಕು ಎಂದು ಸೂಚಿಸಿದೆ. ಹೀಗಾಗಿ, ಸಿದ್ದರಾಮಯ್ಯ ಸೇರಿ ಇತರರ ವಿರುದ್ಧ ಎ್ಐಆರ್ ದಾಖಲಾಗುವ ಸಾಧ್ಯತೆ ಇದೆ.
ಮಂಗಳವಾರ ಆದೇಶ ನೀಡಿರುವ ಹೈಕೋರ್ಟ್ ಈ ಪ್ರಕರಣ ದಲ್ಲಿ ಮೇಲ್ನೋೋಟಕ್ಕೆೆ ತನಿಖೆಯ ಆಗತ್ಯವಿದೆ. ಎಂದು ಪ್ರತಿಪಾದಿಸಿರುವುದನ್ನು ಉಲ್ಲೇಖಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಾಯಾಲಯವು ಸಿಆರ್ಪಿಸಿ ಸೆಕ್ಷನ್ 156(3)ರ ಅಡಿ ತನಿಖೆಗೆ ಸೂಚಿಸಲು ಇರುವ ಅಧಿಕಾರ ಬಳಸಿ ನ್ಯಾಾಯಾಲಯ ಈ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ, ರಾಜ್ಯಪಾಲರು ತನಿಖೆಗೆೆ ಅನುಮತಿ ನೀಡಿರುವುದನ್ನು ಎತ್ತಿಿಹಿಡಿದಿರುವ ಕರ್ನಾಟಕ ಹೈಕೋರ್ಟ್ ಆದೇಶದ ಪ್ರತಿಯನ್ನು ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮಿಿ ಐಯ್ಯಂಗಾರ್ ಅವರು ನ್ಯಾಾಯಾಲಯಕ್ಕೆೆ ಸಲ್ಲಿಸಿದರು.
ಮೊದಲಿಗೆ ಪ್ರಕರಣದ ಪ್ರಕ್ರಿಿಯೆ ಸಿಆರ್ಪಿಸಿ ಅಥವಾ ಹೊಸದಾಗಿ ಜಾರಿಯಾದ ಬಿಎನ್ಎಸ್ ಅಡಿ ನಡೆಸಬೇಕೆ ಎಂಬ ಜಿಜ್ಞಾಸೆಯ ಹಿನ್ನೆೆಲೆಯಲ್ಲಿ ಕೆಲಕಾಲ ನ್ಯಾಾಯಾಲಯವು ವಿಚಾರಣೆ ಮುಂದೂಡಿತ್ತಾಾದರೂ ಬಿಎನ್ಎಸ್ ಜಾರಿಯಾಗುವುದಕ್ಕೂ ಮುನ್ನವೇ ಈ ಪ್ರಕರಣ ನಡೆದಿರುವುದರಿಂದ ಸಿಆರ್ಪಿಸಿ ಅಡಿ ತನಿಖೆ ನಡೆಸಲು ಆದೇಶಿಸಿತು.
ಪ್ರಕರಣ ಸಂಬಂಧ ಮೇಲ್ನೋೋಟಕ್ಕೆೆ ತನಿಖೆ ಅಗತ್ಯವೆಂದು ಹೈಕೋರ್ಟ್ ಕೂಡಾ ಅಭಿಪ್ರಾಾಯಪಟ್ಟಿಿದೆ. ಹೀಗಾಗಿ ತನಿಖೆಗೆ ಮುಖ್ಯಮಂತ್ರಿಿ ಹಿಂಜರಿಯಬಾರದೆಂಬ ಹೈಕೋರ್ಟ್ ತೀರ್ಪಿನ ಅಂಶವನ್ನು ವಿಶೇಷ ನ್ಯಾಾಯಾಲಯ ಉಲ್ಲೇಖಿಸಿದೆ.
ಐವರು ಆರೋಪಿಗಳು: ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಮುಖ್ಯಮಂತ್ರಿಿ ಸಿದ್ದಾರಾಮಯ್ಯ, ಅವರ ಪತ್ನಿಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಾಮಿ, ಜೆ ದೇವರಾಜು ಹಾಗೂ ಇತರೆ ಹೆಸರಿನಡಿ ಐವರನ್ನು ಆರೋಪಿಗಳನ್ನಾಾಗಿಸಲಾಗಿದೆ. ಸಿದ್ದರಾಮಯ್ಯ ಮತ್ತು ಇತರೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 120ಬಿ, 166, 403, 406, 420, 426, 465, 468, 340, 351 ಗಳ ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಕೋರಲಾಗಿದೆ.