ಸುದ್ದಿಮೂಲ ವಾರ್ತೆ ತೆಕ್ಕಲಕೋಟೆ, ೆ.10:
ಸಿರುಗುಪ್ಪದ ತೆಕ್ಕಲಕೋಟೆಯ ಪಶ್ಚಿಿಮ-ನೈರುತ್ಯ ಭಾಗದಲ್ಲಿರುವ ‘ಗೌಡ್ರ ಮೂಲೆಯ ಬೆಟ್ಟ’ದಲ್ಲಿ ಉತ್ಖನನವು ಮುಂದುವರೆದಿದ್ದು ಎರಡನೇ ಅಸ್ತಿಿಪಂಜರ ಸಿಕ್ಕಿಿದೆ. ಈ ಪ್ರದೇಶದಲ್ಲಿ ನಡೆಯುತ್ತಿಿರುವ ಉತ್ಖನನವು ಸಾರ್ವಜನಿಕರಲ್ಲೂ ಕುತೂಹಲ ಮೂಡಿಸಿದ್ದು, ವಿದ್ಯಾಾರ್ಥಿಗಳು – ಸಾರ್ವಜನಿಕರು ಈ ಪ್ರದೇಶಕ್ಕೆೆ ಗುಂಪು ಗುಂಪಾಗಿ ಬರುತ್ತಿಿದ್ದಾಾರೆ.
ಈಗಾಗಲೇ ಪತ್ತೆೆಯಾಗಿದ್ದ ಮಾನವನ ಪಳೆಯುಳಿಕೆಯ ಪಕ್ಕದಲ್ಲೇ ಮತ್ತೊೊಂದು ಅಸ್ಥಿಿಪಂಜರ ಪತ್ತೆೆಯಾಗಿದೆ. ಅಮೆರಿಕದ ಹಾರ್ಟ್ವಿಕ್ ವಿಶ್ವವಿದ್ಯಾಾಲಯದ ಪ್ರಾಾಧ್ಯಾಾಪಕಿ ಹಾಗೂ ಉತ್ಪನನ ಕಾರ್ಯದ ಸಹ ನಿರ್ದೇಶಕಿ ಡಾ. ನಮಿತಾ ಎಸ್. ಸುಗಂಧಿ ಅವರು, ‘ಎದೆಯ ಭಾಗದ ಮೇಲೆ ದೊಡ್ಡ ಗಾತ್ರದ ಕಲ್ಲು ಇರುವುದರಿಂದ ಅದನ್ನು ಸರಿಸಿದರೆ ಮೊದಲನೇ ಪಳೆಯುಳಿಕೆಗೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಅದನ್ನು ಹಾಗೆಯೇ ಉಳಿಸಲಾಗಿದೆ’ ಎಂದರು.
ಉತ್ಖನನದ ಸ್ಥಳದಲ್ಲಿ ಸಿಕ್ಕಿಿರುವ ಪಳೆಯುಳಿಕೆಗಳ ಕುರಿತು, ಸಂಶೋಧಕರ ತಂಡದ ಸದಸ್ಯರು, ವಿದ್ಯಾಾರ್ಥಿಗಳು – ಸಾರ್ವಜನಿಕರಿಗೆ, ಪುರಾತನ ಮಾನವ ಜೀವನ, ಶವ ಸಂಸ್ಕಾಾರ ಪದ್ಧತಿ, ಹಾಗೂ ಪಳೆಯುಳಿಕೆಗಳ ವೈಜ್ಞಾಾನಿಕ ಮಹತ್ವ, ಉತ್ಖನನ ಮತ್ತು ಇನ್ನಿಿತರೆಗಳ ಕುರಿತು ವಿವರಣೆ ನೀಡುತ್ತಿಿದ್ದಾಾರೆ.
ತೆಕ್ಕಲಕೋಟೆಯ ‘ಗೌಡ್ರಮೂಲೆಯ ಬೆಟ್ಟ’ವು ಎತ್ತರದಲ್ಲಿ ವಿಶಾಲವಾಗಿವೆ. ಈ ಪ್ರದೇಶದಲ್ಲಿ ಸೂಕ್ಷ್ಮ ಶಿಲಾಯುಗದ ಚಿಕ್ಕ ಗಾತ್ರದ ಕಲ್ಲಿನ ಆಯುಧಗಳು ಪತ್ತೆೆಯಾಗಿವೆ. ಇವುಗಳನ್ನು ಬೇಟೆ, ಚರ್ಮ ಸುಲಿಯುವುದು ಹಾಗೂ ಮಾಂಸ ಸಂಸ್ಕರಣೆಗೆ ಬಳಸಿರಬಹುದೆಂದು ಸಂಶೋಧಕರು ಅಂದಾಜಿಸಿದ್ದಾಾರೆ. ಈ ಪ್ರದೇಶದಲ್ಲಿ ಕಲ್ಲುಗಳ ರಾಶಿಗಳಿವೆ. ಮಾನವರು ವಾಸವಿದ್ದ ಕುರುಹುಗಳಿವೆ. ಚಿಕ್ಕ ಹಾಗೂ ದೊಡ್ಡ ಗಾತ್ರದ ಮಡಕೆಗಳು ಪತ್ತೆೆಯಾಗಿವೆ ಎಂದು ಡಾ. ನಮಿತಾ ಎಸ್. ಸುಗಂಧಿ ಅವರು ಹೇಳುತ್ತಾಾರೆ.

