ಸುದ್ದಿಮೂಲವಾರ್ತೆ
ಗಂಗಾವತಿ,ಏ.೯- ಹಿಂದು-ಮುಸಲ್ಮಾನರ ಮಧ್ಯೆ ಸಾಮರಸ್ಯಕ್ಕೆ ಹೆಸರಾಗಿದ್ದ, ಶಾಂತಿಯ ತೋಟದಂತಿದ್ದ ಗಂಗಾವತಿಯಲ್ಲಿ ಧರ್ಮ ದಂಗಲ್ ನಿರ್ಮಾಣ ಮಾಡಿದ್ದೇ ಇಕ್ಬಾಲ್ ಅನ್ಸಾರಿ ಅವರ ರಾಜಕೀಯದ ಬಹುದೊಡ್ಡ ಸಾಧನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಆರೋಪಿಸಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಗಾಲಿ ಜನಾರ್ಧನ ರೆಡ್ಡಿ ಅವರ ಬಗ್ಗೆ ಇಕ್ಬಾಲ್ ಅನ್ಸಾರಿ ಇತ್ತೀಚೆಗೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭೀಮಾಶಂಕರ್ ಪಾಟೀಲ್, ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಅಭಿವೃದ್ಧಿ ವಿಚಾರಗಳನ್ನು ಬಿಟ್ಟು ಜನಾರ್ಧನ ರೆಡ್ಡಿ ಅವರ ಬಗ್ಗೆ ವೈಯಕ್ತಿಕ ತೇಜೋವಧೆ ಮಾಡುತ್ತಿರುವುದು ಗಮನಿಸಿದರೆ ಗಂಗಾವತಿಯ ಅಖಾಡದಲ್ಲಿ ಇಕ್ಬಾಲ್ ಅನ್ಸಾರಿ ಯುದ್ದಕ್ಕೂ ಮುನ್ನ ಶಸ್ತçತ್ಯಾಗ ಮಾಡಿ ಸೋಲೋಪ್ಪಿಕೊಂಡAತೆ ಭಾಸವಾಗುತ್ತಿದೆ.
ಹಿಂದು-ಮುಸಲ್ಮಾನನರ ಭಾವೈಕ್ಯತೆ ಕೇಂದ್ರವಾಗಿದ್ದ ಗಂಗಾವತಿಯಲ್ಲಿ ಕೋಮು ದಳ್ಳೂರಿಗಳನ್ನು ನಿರ್ಮಾಣ ಮಾಡಿದ್ದೇ ಅನ್ಸಾರಿ ಅವರ ರಾಜಕೀಯದ ಬಹುದೊಡ್ಡ ಸಾಧನೆ. ಕಳೆದ ೨೦ ವರ್ಷದ ಹಿಂದೆ ಅನ್ಸಾರಿ ಹಚ್ಚಿದ್ದ ಕೋಮಿನ ಕಿಚ್ಚು ಈಗಲೂ ಉರಿಯುತ್ತಿದೆ. ಆದರೆ ಭಾವೈಕ್ಯತೆ ಬೆಸುಗೆಯಂತೆ ಕೆಲಸ ಮಾಡಲು ಹೊರಟಿರುವ ಜನಾರ್ಧನ ರೆಡ್ಡಿ ಅವರನ್ನು ಕ್ಷೇತ್ರದಲ್ಲಿ ಜನ ಸ್ವಾಗತಿಸುತ್ತಿರುವ ಪರಿಯಿಂದ ಬೆಚ್ಚಿ ಬಿದ್ದಿರುವ ಅನ್ಸಾರಿ, ಮುಸಲ್ಮಾನರ ಓಟ್ ಬ್ಯಾಂಕ್ ಕೈ ತಪ್ಪುವ ಭೀತಿಯಿಂದ ರೆಡ್ಡಿ ಅವರ ಬಗ್ಗೆ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ತೇಜೋವಧೆ ಮಾಡುತ್ತಿದ್ದಾರೆ.
ವಾಸ್ತವವಾಗಿ ಒಂದು ಧರ್ಮ, ಒಂದು ವರ್ಗವನ್ನು ಮಾತ್ರ ಓಲೈಸುವ ಅನ್ಸಾರಿ, ಜನಾರ್ಧನ ರೆಡ್ಡಿಯವರ ವಿರುದ್ಧ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಗಂಗಾವತಿಯ ಮತದಾರರು ಅದರಲ್ಲೂ ಯುವ ಮತದಾರರು ಸಾಕಷ್ಟು ಪ್ರಬುದ್ಧರಾಗಿದ್ದಾರೆ.
ಧರ್ಮ ಮತ್ತು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಜನರ ದಾರಿ ತಪ್ಪಿಸಲು ಯತ್ನಿಸುತ್ತಿರುವ ಅನ್ಸಾರಿ ಅವರಿಗೆ ಈ ಬಾರಿ ಗಂಗಾವತಿ ಕ್ಷೇತ್ರದ ಜನ ಸರಿಯಾದ ಪಾಠ ಕಲಿಸಲಿದ್ದಾರೆ.
ಜನಾರ್ಧನ ರೆಡ್ಡಿ ಅವರು ಸಚಿವರಾಗಿದ್ದಾಗ ಬಳ್ಳಾರಿ ಜಿಲ್ಲೆ ಸೇರಿದಂತೆ ಕರ್ನಾಟಕದಲ್ಲಿ ಮಾಡಿರುವ ಕೆಲಸಗಳನ್ನು ಜನ ಇಂದಿಗೂ ಹೃದಯ ಮಂದಿರದಲ್ಲಿಟ್ಟು ಸ್ಮರಿಸುತ್ತಾರೆ. ಇಕ್ಬಾಲ್ ಅವರು ನೋಡುತ್ತೇನೆ ಎಂದರೆ ನಾವು ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗಿ ತೋರಿಸಿಕೊಂಡು ಬರಲು ಸಿದ್ಧರಿದ್ದೇವೆ. ಬಿರಿಯಾನಿ ತಿನ್ನಿಸುವುದೇ ಅಭಿವೃದ್ಧಿ ಎನ್ನುವ ನಿಮ್ಮಂಥ ಮೂರ್ಖರಿಗೆ ಗಂಗಾವತಿಯ ಜನ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ,
ಎದೆಯಲ್ಲಿ ದಮ್ಮ, ತೊಡೆಯಲಿ ತಾಕತ್ತು ಇದ್ದವರು ಮಾತ್ರ ಫುಟ್ಬಾಲ್ ಆಡುತ್ತಾರೆ, ನಿಮ್ಮಂಥಹ ರಣಹೇಡಿಗಳಿಂದ ಅದು ಸಾಧ್ಯವೇ ಇಲ್ಲ ಈ ಧಮ್ಮ ತಾಕತ್ತು ಗಂಗಾವತಿಯ ನಮ್ಮ ಕೆಆರ್ಪಿಪಿಯ ಕಾರ್ಯಕತರಲ್ಲಿ ಇದೆ, ಮೇ ೧೫ ರಂದು ಯಾರು ಯಾರಿಗೆ ಫುಟ್ಬಾಲ್ ಆಡುತ್ತಾರೆ ಎಂದು ಗೊತ್ತಾಗುತ್ತದೆ.
ಎಂದು ಭೀಮಾಶಂಕರ್ ಪಾಟೀಲ್ ಹೇಳಿದ್ದಾರೆ.