ಸುದ್ದಿಮೂಲ ವಾರ್ತೆ :
ರಾಯಚೂರು ಏ.೦೪ :ಶಾಸಕ ಡಾ.ಶಿವರಾಜ ಪಾಟೀಲ ಅವರದ್ದೆೆ ಆಡಿಯೋ ಎನ್ನುವ ಪ್ರಕರಣ ಅವರ ವಿರೋಧಿ ಪಾಳಯ ಒಂದಾಗುವಂತೆ ಮಾಡಿದ್ದು ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟು ವರಿಷ್ಟರ ಬೆನ್ನು ಬಿದ್ದು ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾಾರೆ.
ರಾಜ್ಯದ, ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಇತ್ತೀಚೆಗೆ ರಾಯಚೂರು ನಗರ ಕ್ಷೇತ್ರದ ಶಾಸಕರದ್ದೇ ಧ್ವನಿ ಎನ್ನಲಾದ ಆಡಿಯೋದಲ್ಲಿ ಸಂಘಟನೆಯೊಬ್ಬರ ಜೊತೆ ಪಕ್ಷದ ವರಿಷ್ಟರ, ನಾಯಕರ ಹಾಗೂ ಪ್ರಧಾನಿ ಮೋದಿ ಬಗ್ಗೆೆ ಹಗುರವಾಗಿ ಮಾತನಾಡಿದ್ದೇ ಡಾ.ಶಿವರಾಜ ಪಾಟೀಲಗೆ ಮುಳುವಾಗಿದೆ ಎಂದೇ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಆರಂಭವಾಗಿದೆ.
ಬೆಂಬಲಿಗರು, ಲಾಭ ಉಂಡವರು ಶಾಸಕರ ಪರ ಅದೇಷ್ಟೆೆ ಬೆಂಬಲಿಸಿ ಸಮರ್ಥಿಸಿಕೊಂಡು ಮಾತನಾಡಿ ವಿಡಿಯೋಗಳ ಹರಿಬಿಟ್ಟರೂ ಅದನ್ನು ಯಾರೂ ಒಪ್ಪುುತ್ತಿಿಲ್ಲಘಿ. ಅತ್ತ ಗಲಿಬಿಲಿಗೊಂಡಿರುವ ಶಾಸಕ ಡಾ.ಶಿವರಾಜ ಪಾಟೀಲ ಬೆಂಗಳೂರಿನಲ್ಲಿ ತಮ್ಮ ನಾಯಕರ ಬೆನ್ನಿಿಗೆ ಬಿದ್ದು ಟಿಕೆಟ್ ತಪ್ಪದಂತೆ ನೋಡಿಕೊಳ್ಳಲು ಒತ್ತಡ ಹಾಕುತ್ತಿಿದ್ದು ಎಲ್ಲ ನಾಯಕರಿಗೆ ಕ್ಷಮೆಯಾಚಿಸಿದ್ದಾಾರೆ ಎಂದು ಪಕ್ಷದೊಳಗೆ ಮಾತನಾಡಿಕೊಳ್ಳುತ್ತಿಿದ್ದಾಾರೆ.
ಇತ್ತೀಚೆಗೆ ನಡೆದ ಜಿಲ್ಲಾಾವಾರು ಸಮಿತಿ ಸಭೆಯಲ್ಲಿ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಿಯವರು ಒಂದು ಹಂತದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ ವಿರುದ್ಧ ತೀವ್ರ ಗರಂ ಆದರು ಎಂದು ಗೊತ್ತಾಾಗಿದೆ.ಇಷ್ಟೊೊಂದು ಸೊಕ್ಕುಘಿ, ಅಹಂಕಾರದ ಮಾತು ಅಗತ್ಯವಿರಲಿಲ್ಲಘಿ. ಇಡೀ ವಿಶ್ವ ಒಪ್ಪಿಿದ ನಾಯಕರ ಬಗ್ಗೆೆ ಸೊಕ್ಕಿಿನ ಮಾತು ಆಡಿದ್ದಕ್ಕೆೆ ತರಾಟೆಗೆ ತೆಗೆದುಕೊಂಡಾಗ ಅದು ನನ್ನ ಧ್ವನಿ ಅಲ್ಲ ಎನ್ನುವ ಸಬೂಬು ಹೇಳಿ ವಿರೋಧಿಗಳ ಕುತಂತ್ರವಿದು ಎಂದು ಶಾಸಕರು ಹೇಳಲು ಮುಂದಾದಗ ಇದೆಲ್ಲ ಕಥೆ ಹೇಳಬೇಡಿ ಹಳೆಯದ್ದೊೊಘಿ, ಹೊಸದ್ದೊೊ ಮಾತನಾಡಿದ್ದು ಹುಂಬುತನವಲ್ಲವೇ ಎಂದು ಆಕ್ರೋೋಶಗೊಂಡು ಸಭೆಯಿಂದ ಹೊರಗಿರುವಂತೆಯೂ ಸೂಚಿಸಿದ್ದರು ಎಂದು ಪಕ್ಷದಲ್ಲಿ ಕಳೆದ ಎರಡು ದಿನಗಳಿಂದ ಬಿಸಿಬಿಸಿ ಚರ್ಚೆಯಾಗುತ್ತಿಿದೆ.
ಈ ಸುಳಿವು ಪಡೆದ ಬಿಜೆಪಿ ಟಿಕೆಟ್ ಬಯಸಿದ ವಿರೋಧಿ ಪಾಳಯದ ನಾಯಕರು ಒಂದಾಗಿ ಬೆಂಗಳೂರಿನ ಖಾಸಗಿ ಹೋಟೇಲ್ನಲ್ಲ ಬೀಡು ಬಿಟ್ಟಿಿದ್ದಾಾರೆ. ಅಲ್ಲದೆ, ಅವರಿಗೆ ಮಾಜಿ ಶಾಸಕರೊಬ್ಬರು ಕೈಜೋಡಿಸಿದ್ದು ತಮಗೆ ಗೊತ್ತಿಿರುವ ವರಿಷ್ಠರ ಬಳಿಗೆ ಕರೆದೊಯ್ಯುವ ಸಾಹಸ ಆರಂಭಿಸಿದ್ದಾಾರೆ.
ಆಕಾಂಕ್ಷಿಿಗಳಾಗಿರುವ ಡಾ.ಪಿ.ಬಸನಗೌಡ ಪಾಟೀಲ, ಗುಡ್ಸಿಿ ನರಸರೆಡ್ಡಿಿಘಿ, ನರಸಪ್ಪ ಯಕ್ಲಾಾಸಪೂರು ಒಂದೇ ಹೋಟೇಲ್ನಲ್ಲಿದ್ದು ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಿದ್ದಾಾದರೆ ಮೂವರಲ್ಲಿ ಯಾರಿಗೊಬ್ಬರಿಗೆ ಟಿಕೆಟ್ ನೀಡಿದರೂ ಉಳಿದಿಬ್ಬರೂ ಪರಸ್ಪರ ಸಹಕಾರ ಮಾಡಬೇಕು ಎನ್ನುವ ಅಲಿಖಿತ ಒಪ್ಪಂದಕ್ಕೆೆ ಬಂದಿದ್ದಾಾರೆ ಎಂದು ಗೊತ್ತಾಾಗಿದೆ.
ಭಾನುವಾರದಿಂದ ಬೆಂಗಳೂರಿನ ಸಚಿವರ, ತಮಗೆ ಗೊತ್ತಿಿರುವ ಪ್ರಭಾವಿ ಮುಖಂಡರ ಮನೆ, ಕಚೇರಿ ಭೇಟಿಗೆ ಕಾದು ನಿಂತಿದ್ದು ಹಾಲಿ ಶಾಸಕ ಡಾ.ಶಿವರಾಜ ಪಾಟೀಲಗೆ ಮತ್ತೊೊಂದು ತಲೆ ನೋವು ಶುರುವಾಗಿದೆ.ಈ ಬಗ್ಗೆೆ ಸುದ್ದಿಮೂಲ ಬಿಜೆಪಿ ಮುಖಂಡರೊಬ್ಬರ ವಿಚಾರಿಸಿದಾಗ ಹಾಗೇನಿಲ್ಲ ಸುಮ್ಮನೆ ಬಂದಿದ್ದೇವೆ. ಟಿಕೆಟ್ ಕೇಳಬಾರದೇ ನಾವು ನಮ್ಮ ಪ್ರಯತ್ನ ಮುಂದುವರಿದಿದೆ. ಒಬ್ಬೊೊಬ್ಬರು ಒಂದೊಂದು ಕೆಲಸದ ನಿಮಿತ್ತ ಬಂದು ಅಚಾನಕ್ಕಾಾಗಿ ಸೇರಿದ್ದೇವಷ್ಟೆೆ ಅದಕ್ಕೆೆ ರಾಜಕೀಯ ವಿಶೇಷತೆ ಇಲ್ಲ ಎಂದು ಹೇಳಿದರು. ಆದರೆ, ಟಿಕೆಟ್ ಕೇಳುತ್ತಿಿದ್ದೀರಂತೆ, ಒಂದಾಗಿದ್ದೀರಂತೆ, ಮಾಜಿ ಶಾಸಕರೊಬ್ಬರು ಜೊತೆಯಲ್ಲಿದ್ದಾಾರಂತೆ ಎಂದು ಕೇಳಿದಾಗ ಅದೆಲ್ಲ ಈಗ ಬೇಡ ರಾಯಚೂರಿಗೆ ಬಂದ ಮೇಲೆ ಗೊತ್ತಾಾಗಲಿದೆ ಬಿಡಿ ಎಂದು ಹೆಚ್ಚು ಮಾತನಾಡಲು ಇಷ್ಟ ಪಡಲಿಲ್ಲ .