ಸುದ್ದಿಮೂಲ ವಾರ್ತೆ
ಬೆಂಗಳೂರು,ನ.11 : ಬೆಂಗಳೂರು ವಿವಿಯ ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ವಿದ್ಯುನ್ಮಾನ ಮಾಧ್ಯಮ ವಿಭಾಗ, ಮಹಿಳಾ ಅಧ್ಯಯನ ವಿಭಾಗ ಮತ್ತು ಸೌಥ್ ಕೊರಿಯಾದ ಇಂಟರ್ ನ್ಯಾಷನಲ್ ಪೀಸ್ ಯುತ್ ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ‘ವಿಕ್ಟಿಮ್ಸ್ ನೋ ವಿನ್ನರ್’ ಎಂಬ ಘೋಷವಾಕ್ಯದಡಿ ಯುದ್ಧ ವಿರೋಧಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಎಚ್ಡಬ್ಲೂಪಿಎಲ್ ಇಂಟರ್ ನ್ಯಾಷನಲ್ ಲಾ ವಿಭಾಗದ ಸಂಯೋಜಕ ಜಾಡೆನ್ ಲೀ, ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಂಯೋಜಕ ಡಾ.ಎಂ.ಸಿದ್ದಪ್ಪ, ಸಮಾಜ ಶಾಸ್ತ್ರ ವಿಭಾಗದ ಚೇರ್ಮನ್ ಡಾ.ಆರ್.ರಾಜೇಶ್, ಅರ್ಥಶಾಸ್ತ್ರ ವಿಭಾಗದ ಡಾ.ಎಸ್.ಆರ್.ಕೇಶವ್, ವಿದ್ಯುನ್ಮಾನ ಮಾಧ್ಯಮ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಆರ್.ರಾಜೇಶ್ವರಿ, ಸಹ ಪ್ರಾಧ್ಯಾಪಕರಾದ ಡಾ.ವಾಹಿನಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಟಿ.ಶ್ರೀಪತಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.