ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ. 17 : ಬಶೆಟ್ಟಹಳ್ಳಿಯ ಶ್ರೀ ಗಂಗಾಭವಾನಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಆಡಳಿತ ಮಂಡಳಿಯು ಶಾಸಕ ಬಿ. ಎನ್ ರವಿಕುಮಾರ್ ರವರನ್ನು ಭೇಟಿ ಮಾಡಿ ಸಂಸ್ಥೆಯ ಮಳಿಗೆ ಮತ್ತು ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಮನವಿ ಸಲ್ಲಿಸಿದರು.
ರೈತರನ್ನು ಸ್ವಾವಲಂಭಿಗಳನ್ನಾಗಿಸಲು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮತ್ತು ರೈತರು ತಾವು ಬೆಳೆದ ಬೆಳೆಗಳನ್ನು ಬ್ರಾಂಡ್ ಮಾಡಿ ಸ್ವತಃ ತಾವೇ ಮಾರಾಟ ಮಾಡಿ ಅಧಿಕ ಲಾಭ ಗಳಿಸಬೇಕೆಂಬ ಸದ್ದುದೇಶದಿಂದ ಕೇಂದ್ರ ಸರ್ಕಾರ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಾ ಬಂದಿದೆ.
ಎಫ್ಪಿಒ ಗಳ ಪ್ರಸ್ತುತ ಸ್ಥಿತಿಗತಿಗಳು ಮತ್ತು ಅವುಗಳ ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಎಫ್ಪಿಓ ಅಧ್ಯಕ್ಷರಾದ ವಿಜಯ ಬಾವರೆಡ್ಡಿ, ಉಪಾಧ್ಯಕ್ಷ ಟಿ.ಎಸ್ ಆಂಜನೇಯರೆಡ್ಡಿ, ನಿರ್ದೇಶಕ ಜಿ.ಎನ್ ರವಿಕುಮಾರ್, ಬಿ.ಎನ್ ಮಂಜುನಾಥ್,
ಲಕ್ಕೇನಹಳ್ಳಿ ವೆಂಕಟೇಶ್, ಸಿಇಒ ಮಧು, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶಪ್ಪ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ ನಾರಾಯಣಸ್ವಾಮಿ, ಗಂಜಿಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ಶಿವಕುಮಾರ್. ಬಿ, ಆನೆಮಡಗು ದೇವರಾಜ್ ಉಪಸ್ಥಿತರಿದ್ದರು.