ಸುದ್ದಿಮೂಲ ವಾರ್ತೆ ಮಾನ್ವಿ, ೆ.03:
ಮಾನ್ವಿಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಸರ್ವೆ ಕಾರ್ಯ ಮಾಡಿದ ಗಣತಿದಾರಿಗೆ ಹಾಗೂ ಮೇಲ್ವಿಿಚಾರಕರಿಗೆ ಗಳಿಕೆ ರಜೆಯ (ಇ.ಎಲ್) ಹಾಜರಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಾಯಿಸಿ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಸೀಲ್ದಾಾರ್ ಅವರಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ಸುರೇಶ ಕುರ್ಡಿ ಮಾತನಾಡಿ ಜಿಲ್ಲೆಯ ಇತರ ತಾಲೂಕುಗಳಲ್ಲಿ ಒಳ ಮೀಸಲಾತಿ ಸರ್ವೆ ಕಾರ್ಯ ಮಾಡಿದ ಗಣತಿದಾರರಿಗೆ ಹಾಗೂ ಮೇಲ್ವಿಿಚಾರಕರಿಗೆ ಗಳಿಕೆ ರಜೆಯ ಹಾಜರಾತಿ ಪ್ರಮಾಣ ಪತ್ರವನ್ನು ನೀಡಿ ನೌಕರರಿಗೆ ಅನುಕೂಲ ಮಾಡಿಕೊಟ್ಟಿಿದ್ದಾರೆ. ಆದರೆ ಮಾನ್ವಿಿ ತಾಲೂಕಿನಲ್ಲಿ ಹಾಜರಾತಿ ಪ್ರಮಾಣ ಪತ್ರ ನೀಡಿಲ್ಲ. ಕಾರಣ ತಾವುಗಳು ಕೂಡಲೇ ನಮ್ಮ ತಾಲೂಕಿನಲ್ಲಿ ಸಹ ಹಾಜರಾತಿ ಪ್ರಮಾಣ ಪತ್ರ ನೀಡಿ ಸರಕಾರಿ ನೌಕರರಿಗೆ ಅನುಕೂಲ ನೀಡಬೇಕೆಂದು ಒತ್ತಾಾಯಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಕಾರ್ಯದರ್ಶಿ ಹಂಪಣ್ಣ ಚಂಡೂರು. ಖಜಾಂಚಿ ಭಾಗಯ್ಯ ನಾಯಕ, ಜಿಲ್ಲಾ ಉಪಾಧ್ಯಕ್ಷ ಸಿ.ಎಂ.ನರಸಿಂಹ, ಸಹ ಕಾರ್ಯದರ್ಶಿಗಳಾದ ಜಾಕೀರ್ ಪಾಷಾ, ಮಹೇಶ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಈಶಪ್ಪ ಮುಂತಾದವರು ಉಪಸ್ಥಿಿತರಿದ್ದರು.
ಒಳ ಮೀಸಲಾತಿ ಸರ್ವೆ ಮಾಡಿದ ಗಣತಿದಾರರ ಮನವಿ ಗಳಿಕೆ ರಜೆಯ ಹಾಜರಾತಿ ಪ್ರಮಾಣ ಪತ್ರ ನೀಡಲು ನೌಕರರ ಸಂಘ ಒತ್ತಾಯ

