ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.12: ಚುನಾವಣೆ ನೀತಿ ಸಂಹಿತಿ ಮಧ್ಯೆಯೂ ಎಲ್ಲಾ ಕಡೆ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸುವಂತೆ ಸೂಕ್ತ ಸೂಚನೆ ನೀಡಲಾಗುವುದು ಎಂದು ಇಲ್ಲಿನ ತಹಶೀಲ್ದಾರ್ ಬಿ.ಎನ್. ಸ್ವಾಮಿ ಹೇಳಿದರು.
ಚುನಾವಣಾ ನೀತಿಸಂಹಿತೆಯ ನೆಪ ನೀಡದೆ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಪ್ರಗತಿಪರ ಸಂಘಟನೆಗಳು ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನವನ್ನು ರಚಿಸಿರುವಂತಹ ಮಹನೀಯರ ಜಯಂತಿ ಆಚರಿಸುವುದು ಕಡ್ಡಾಯ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸ್ವೀಪ್ ಸಮಿತಿಯನ್ನು ಒಳಗೊಂಡು ಯಾವ ರೀತಿ ಆಚರಿಸಬೇಕೆಂದು ನಿರ್ಧರಿಸಲಾಗುವುದು ಎಂದು ಬಿ.ಎನ್ ಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಜಿ.ಎನ್ ವಿ ಬಾಬುಣ್ಣ, ಈ ಧರೆ ಸಮತಾ ಸೇನೆ ಸಂಸ್ಥಾಪಕ ಈ ಧರೆ ಪ್ರಕಾಶ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಉಪಾಧ್ಯಕ್ಷ ದೊಡ್ಡತೇಕಹಳ್ಳಿ ಆಂಜಿನಪ್ಪ, ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ ಶೆಟ್ಟಹಳ್ಳಿ ರವಿಪ್ರಕಾಶ್, ಈ ಧರೆ ಸಮತಾ ಸೇನೆ ತಾಲ್ಲೂಕು ಅಧ್ಯಕ್ಷ ಮಳ್ಳೂರು ವೆಂಕಟರಮಣಪ್ಪ, ತಾಲ್ಲೂಕು ಅಧ್ಯಕ್ಷ ಅತ್ತಿಗಾನಹಳ್ಳಿ ಎನ್ ಮುನೇಗೌಡ, ಮಳ್ಳೂರು ವೆಂಕಟರಮಣಪ್ಪ, ಎ. ಹುಣಸೇನಹಳ್ಳಿ ಮುನಿಯಪ್ಪ, ದೊಗರನಾಯಕನಹಳ್ಳಿ ನಾರಾಯಣಸ್ವಾಮಿ, ಅತ್ತಿಗಾನಹಳ್ಳಿ ನವೀನ್ ಕುಮಾರ್, ತುಮ್ಮನಹಳ್ಳಿ ನರಸಿಂಹಪ್ಪ, ಗಂಬೀರನಹಳ್ಳಿ ನಾರಾಯಣಸ್ವಾಮಿ, ರೈತ ಸಂಘ ಜಿಲ್ಲಾ ಉಪಾಧ್ಯಕ್ಷೆ ಚಿಕ್ಕಬಳ್ಳಾಪುರ ವಸಂತಮ್ಮ, ತಾಲ್ಲೂಕು ಅಧ್ಯಕ್ಷೆ ವಹಿದಾ ಹಾಗೂ ಮುಂತಾದವರು ಭಾಗವಹಿಸಿದ್ದರು.