ಸುದ್ದಿಮೂಲ ವಾರ್ತೆ ಸಿರವಾರ, ಡಿ.11:
ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ನೀಡುವ ಗ್ರಾಾಮ ಸ್ವರಾಜ್ಯ ಗಾಂಧಿ ಪುರಸ್ಕಾಾರ ಪ್ರಶಸ್ತಿಿಗೆ ಅರ್ಜಿ ಹಾಕಿರುವ ತಾಲೂಕಿನ ನವಲಕಲ್ ಗ್ರಾಾಮ ಪಂಚಾಯತಿಗೆ ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಛವ್ಹಾಾಣ ಅವರು ಬುಧವಾರ ಗ್ರಾಾ.ಪಂ.ಗೆ ಭೇಟಿ ನೀಡಿಲಾಗಿದೆ ಎಂದು ಸುದ್ದಿಮೂಲಕ್ಕೆೆ ಮಾಹಿತಿ ಹಂಚಿಕೊಂಡರು. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳು ಸಮರ್ಪಕ ಬಳಕೆ, ಗ್ರಾಾಮಸ್ಥರಿಗೆ ಅನುಕೂಲ, ಶಿಕ್ಷಣ, ಆರೋಗ್ಯ, ಸ್ವಚ್ಚತಾ ಕಾರ್ಯ ಕೈಗೊಂಡ ಬಗ್ಗೆೆ ಪರಿಶೀಲನೆ ಮಾಡಿದರು.
ರಾಜ್ಯ ಸರ್ಕಾರ ಪ್ರತಿ ವರ್ಷ ಗಾಂಧಿ ಗ್ರಾಾಮ ಪುರಸ್ಕಾಾರ ಪ್ರಶಸ್ತಿಿ ನೀಡಲಿದೆ. ಸಿರವಾರ ತಾಲ್ಲೂಕಿ ನಿಂದ ಮಾಡಗಿರಿ, ಗಣದಿನ್ನಿಿ, ನವಲಕಲ್ ಗ್ರಾಾಮ ಪಂಚಾಯತಿಗಳು ಅರ್ಜಿ ಸಲ್ಲಿಸಿವೆ. ಮೂರು ಗ್ರಾಾ.ಪಂ. ಪರಿಶೀಲಿಸಿ, ಈ ಬಗ್ಗೆೆ ವರದಿ ನೀಡಲು ಜಿ.ಪಂ. ಸಿಇಓ ಅವರ ಆದೇಶದ ಮೇರೆಗೆ ಭೇಟಿ ನೀಡಿ ವರದಿ ಸಲ್ಲಿಸಲಾಗುವುದು, ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಸರಕಾರದ ಯೋಜನೆ ತಲುಪಿಸಬೇಕು ಎಂದರು. ಗ್ರಾಾಮ ಪಂಚಾಯತಿ ಡಿಜಿಟಲ್ ಗ್ರಂಥಾಲಯ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಶಿಧರಸ್ವಾಾಮಿ ಮಠದ್, ಸಹಾಯಕ ನಿರ್ದೇಶಕ ಮಂಜುನಾಥ ಜಾವೂರ, ಪಿಡಿಓ ವಿಜಯಕುಮಾರ, ಮಲ್ಲಪ್ಪ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.
ಗಾಂಧಿ ಪುರಸ್ಕಾರ ಪ್ರಶಸ್ತಿಗೆ ಅರ್ಜಿ, ನೋಡಲ್ ಅಧಿಕಾರಿ ಜೆಡಿ ಭೇಟಿ

