ಸುದ್ದಿಮೂಲ ವಾರ್ತೆ
ಕೊಪ್ಪಳ, ಮೇ 31 : ಮುನಿರಾಬಾದ್ನ ಕೊಪ್ಪಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ 2023-24ನೇ ಸಾಲಿನ ಡಿ.ಇ.ಎಲ್.ಇಡಿ ಕೋರ್ಸಿನ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಸಲ್ಲಿಸಲು ಬಯಸುವ ಅಭ್ಯರ್ಥಿಗಳು ವೆಬ್ಸೈಟ್ www.schooleducation.kar.nic.in ಮೂಲಕ ಅರ್ಜಿ ಪಡೆದು ಜೂನ್ 26 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳು 50 ರೂ.ಗಳ ಡಿ.ಡಿಯನ್ನು ಮತ್ತು ಇತರೆ ಅಭ್ಯರ್ಥಿಗಳು 150 ರೂ.ಗಳ ಡಿ.ಡಿಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ)ನಲ್ಲಿ ಸ್ಪೇಷಲ್ ಆಫೀಸರ್ ಕಾಕ್ ಬೆಂಗಳೂರು ಇವರ ಹೆಸರಲ್ಲಿ ಡಿ.ಡಿ ಪಡೆದು, ತಮ್ಮ ವಿದ್ಯಾರ್ಹತೆ ದಾಖಲೆಗಳು & ಆಫ್ಲೈನ್ ಅರ್ಜಿಯೊಂದಿಗೆ ಪ್ರಾಚಾರ್ಯರು ಡಯಟ್ ಮುನಿರಾಬಾದ್ ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.ಸ: 9113264259, 9743697680 ಗೆ ಸಂಪರ್ಕಿಸಬಹುದು ಎಂದು ಮುನಿರಾಬಾದ್ನ ಕೊಪ್ಪಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.