ಸುದ್ದಿಮೂಲ ವಾರ್ತೆ
ಕೊಪ್ಪಳ,ಮೇ 31 : ಕುಕನೂರು ತಾಲೂಕಿನ ಮಂಗಳೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಮೆರಿಟ್ ಕಂ ರಿಜರ್ವೇಷನ್ ಆಧಾರದ ಮೇಲೆ ಆಗಸ್ಟ್ 2023ನೇ ಸಾಲಿನ ಐಟಿಐ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ಕೋರ್ಸ್ಗಳು ಅನುಷ್ಠಾನಗೊಂಡಿದ್ದು, ಪ್ರತಿ ಕೋರ್ಸಿನಲ್ಲಿ 16 ಸ್ಥಾನಗಳು ಲಭ್ಯವಿರುತ್ತವೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಖುದ್ದಾಗಿ ಸಂಸ್ಥೆಗೆ ಭೇಟಿನೀಡಿ ಮಾಹಿತಿ ತಿಳಿದು ಅಥವಾ ಇಂಟರ್ನೆಟ್ ಸೆಂಟರ್ಗಳಲ್ಲಿ ಜೂನ್ 07ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಮಂಗಳೂರು ಐಟಿಐ ಸಂಸ್ಥೆಯ ತರಬೇತಿ ಅಧಿಕಾರಿಗಳಾದ ವೇಷಗಾರ ಶರಣಪ್ಪ ಅವರು ತಿಳಿಸಿದ್ದಾರೆ.