ಸುದ್ದಿ ಮೂಲ ವಾರ್ತೆ
ಚಿಕ್ಕಬಳ್ಳಾಪುರ,ಆ.೩:2023-24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಾದ ಪ್ರದೇಶ ವಿಸ್ತರಣೆ ಮಾವು, ಸೀಬೆ, ಗುಲಾಬಿ, ಸುಗಂಧರಾಜ, ಇತರೆಹೂ, ಹೈಬ್ರೀಡ್ತರಕಾರಿ, ಮಾವುಪುನಶ್ಚತನ, ಪ್ಲಾಸ್ಟಿಕ್ಹೊದಿಕೆ, ಕೃಷಿಹೊಂಡ, ಸಮುದಾಯ ಕೃಷಿಹೊಂಡ, ಪ್ಯಾಕ್ಹೌಸ್, ಈರುಳ್ಳಿ ಶೇಖರಣಾ ಘಟಕ, ಪಾಲಿಹೌಸ್, Primary / Mobile / Minimal Processing Unit ಮತ್ತುAntibird Net/Insect/Anti hail nets ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ದಿನಾಂಕ:19-08-2023 ರೊಳಗಾಗಿ ಈ ಕಛೇರಿಗೆ ಅರ್ಜಿಸಲ್ಲಿ ಸಬಹುದಾಗಿದೆ. ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತಗೊಂಡಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಗೌರಿಬಿದನೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು–7204462308, ಸಹಾಯಕ ತೋಟಗಾರಿಕೆ ನಿರ್ದೇಶಕರು– 9880500089, ಹೊಸೂರು- 7411915693, ಮಂಚೇನಹಳ್ಳಿ, – 6360343500, ಕಸಬಾ -8548897615, ತೊಂಡೇಬಾವಿ, -8088154983, ಡಿ.ಪಾಳ್ಯ, ನಗರಗೆರೆ, -9632857642 ಗೆ ಸಂಪರ್ಕಿಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.