ಸುದ್ದಿಮೂಲವಾರ್ತೆ
ಕೊಪ್ಪಳ,ಆ.7: ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಮಹಮ್ಮದ ಜಿಲಾನ್ ಕಿಲ್ಲೇದಾರ ( ಮೈ ಲೈಕ್ ) ನೇಮಕಗೊಂಡಿದ್ದಾರೆ.
ಅಗಸ್ಟ್ 6 ರವಿವಾರ ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ನಡೆದ ಸಭೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಅವರು ಮಹಮ್ಮದ್ ಜಿಲಾನ್ ಕಿಲ್ಲೇದಾರ ಅವರಿಗೆ ನೇಮಕ ಆದೇಶ ನೀಡಿದರು.
ಈ ಸಭೆಯಲ್ಲಿ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಜಾಕ್ ತಟಗಾರ್ , ಕಿತ್ತೂರು ಕರ್ನಾಟಕ ಭಾಗದ ಸಂಚಾಲಕ , ಬಾಗಲಕೋಟೆ ಜಿಲ್ಲಾ ವಕ್ಫ ಅಧ್ಯಕ್ಷರಾದ ಮೆಹಬೂಬ ಸರ್ಕಾವಸ್, ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಅಲ್ತಾಫ್ ಕಲಬುರ್ಗಿ , ಕೊಪ್ಪಳ ಅಂಜುಮನ್ ಖಿದ್ಮತ್ -ಎ- ಮುಸ್ಲಮೀನ್ ಕಮಿಟಿ ಅಧ್ಯಕ್ಷರಾದ ಆಸೀಫ್ ಕರ್ಕಿಹಳ್ಳಿ , ಅಬ್ದುಲ್ ಅಜೀಜ್ ಮಾನ್ವಿಕರ್, ಅಬ್ದುಲ್ ಗಫಾರ್, ಕುಷ್ಟಗಿಯ ಫಾರುಖ್ ಚೌಧರಿ ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆಯು ಮುಸ್ಲಿಂ ಸಮುದಾಯದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ, ಶೈಕ್ಷಣಿಕ ಮತ್ತು ಸರಕಾರಿ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಧ್ವನಿ ಎತ್ತುವುದು, ಸಮಾಜಗಳ ಮಧ್ಯೆ ಸೌಹಾರ್ದತೆ ಸ್ಥಾಪಿಸುವ ಉದ್ದೇಶ ಹೊಂದಿದ್ದು ಶೀಘ್ರ ಕೊಪ್ಪಳ ಜಿಲ್ಲೆ ಹಾಗೂ ತಾಲೂಕುಗಳ ಪದಾಧಿಕಾರಿಗಳನ್ನು ನೇಮಿಸಿ ಸಂಘಟನೆಗೆ ಚಾಲನೆ ಕೊಡಲಾಗುವುದು ಎಂದು ನೂತನ ಅಧ್ಯಕ್ಷರಾದ ಮಹಮ್ಮದ್ ಜಿಲಾನ್ ಕಿಲ್ಲೇದಾರ ತಿಳಿಸಿದ್ದಾರೆ.