ಸಭಾಪತಿ ವರ್ತನೆಗೆ, ಜಿಲ್ಲಾ ವೀರಶೈವ ಯುವ ಘಟಕ ಖಂಡನೆ
ಸುದ್ದಿಮೂಲವಾರ್ತೆ ಸಿರವಾರ: ಫೆ.೧೬ ವಿಧಾನ ಸಭೆಯ ಕಲಾಪದ ವೇಳೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಲ್ಕಿಜಪ ಶಾಸಕ ಹಾಗೂ ಅಖಲಿ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆಯ ಬಗ್ಗೆ ಲಘುವಾಗಿ ಮಾತನಾಡಿರುವದು ಅವರ ವರ್ತನೆಯ ಸರಿಯಲ್ಲಾ ಎಂದು ಅಖಲಿ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಯಚೂರು ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷರಾದ ಶಿವಶರಣರ ಸಾಹುಕಾರ್ ಅರಕೇರಿ ಖಂಡಿಸಿದ್ದಾರೆ.
ಸಭಾಪತಿ ಉನ್ನತಿ ಸ್ಥಾನ ಎಲ್ಲರಿಗೂ ಗೌರವದಿಂದ ನಡೆದುಕೊಳ್ಳಬೇಕು ಸಭಾಪತಿಗಳು ಒಂದು ಪಕ್ಷಕ್ಕೆ ಒತ್ತಿಬಿಳ್ಳಬಾರದು, ಆ ಸ್ಥಾನಕ್ಕೆ ಗೌರವವನ್ನು ಕಾಪಾಡಬೇಕು, ಇಲ್ಲಾ ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಸದನದಲ್ಲಿ ಈಶ್ವರ ಖಂಡ್ರಯ ಬಗ್ಗೆ ಮಾತನಾಡಿದ್ದು ಖಂಡಿಸಿ ಪ್ರತಿಭಟನೆ ಮಾಡಬೇಕಾಗುವುದು ಎಂದು ಎಚ್ಚರಿಸಿದರು.