ಸುದ್ದಿಮೂಲ ವಾರ್ತೆ ಬೀದರ್, ಡಿ.07:
ಸಾರ್ವಜನಿಕ ಆರೋಗ್ಯ ಸೇವೆಗಳ ವಿಸ್ತರಣೆ ಮತ್ತು ಗುಣಮಟ್ಟದ ಚಿಕಿತ್ಸೆೆಯನ್ನು ಜನರಿಗೆ ಸುಲಭವಾಗಿ ಲಭ್ಯವಾ ಗುವಂತೆ ಮಾಡುವುದು ಈ ಆಸ್ಪತ್ರೆೆಯ ಪ್ರಮುಖ ಉದ್ದೇಶವಾಗಿದೆ. ಪ್ರತಿ ಕುಟುಂಬಕ್ಕೂ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಈ ಆಸ್ಪತ್ರೆೆ ಆದರ್ಶ ಆರೋಗ್ಯ ಕೇಂದ್ರವಾಗಲಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಾಳೆ ತಿಳಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಸಿರಕಟನಳ್ಳಿಿ ಗ್ರಾಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆೆ ವಿಶೇಷ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮೊದಲ ಆದ್ಯತೆಯಾಗಿದ್ದು, ಜನರ ವಿಶ್ವಾಾಸಕ್ಕೆೆ ತಕ್ಕ ರೀತಿಯಲ್ಲಿ ಇನ್ನಷ್ಟು ಅಭಿವೃದ್ಧಿಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು.
ಗ್ರಾಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಿಗೆ ಮೂಲ ಸೌಕರ್ಯ ವಿಸ್ತರಣೆ ಅತ್ಯಂತ ಅಗತ್ಯವಾಗಿದೆ. ಹೀಗಾಗಿ ರಸ್ತೆೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ಆರೋಗ್ಯ ಕೇಂದ್ರಗಳು, ಶಿಕ್ಷಣ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಮೂಲ ಸೌಕರ್ಯಗಳ ಸುಧಾರಣೆಗಾಗಿ ಹೆಚ್ಚಿಿನ ಒತ್ತು ನೀಡಲಾಗುತ್ತಿಿದೆ ಎಂದರು.
ಗ್ರಾಾಮಗಳಲ್ಲಿ ಆಸ್ಪತ್ರೆೆಗಳ ಅಗತ್ಯವು ಅತಿ ಮುಖ್ಯವಾಗಿದ್ದು, ಇದು ಸ್ಥಳೀಯರಿಗೆ ತಾಯಿ-ಮಗು ಆರೈಕೆ, ಲಸಿಕೆ, ಸಾಮಾನ್ಯ ಹಾಗೂ ತುರ್ತು ಚಿಕಿತ್ಸಾಾ ಸೇವೆಗಳನ್ನು ಸ್ಥಳದಲ್ಲೇ ಒದಗಿಸುತ್ತದೆ, ದೂರದ ನಗರಗಳಿಗೆ ಪ್ರಯಾಣದ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ, ಮತ್ತು ಮೂಲಸೌಕರ್ಯಗಳಾದ ಉತ್ತಮ ಸಂವಹನ, ಡಿಜಿಟಲ್ ಸಂಪರ್ಕದೊಅದಿಗೆ ಆರೋಗ್ಯ ವ್ಯವಸ್ಥೆೆಯನ್ನು ಬಲಪಡಿಸುತ್ತದೆ. ಈ ಆಸ್ಪತ್ರೆೆಗಳು ಗ್ರಾಾಮೀಣ ಆರೋಗ್ಯದ ಅವಿಭಾಜ್ಯ ಅಂಗವಾಗಿದ್ದು, ಒಟ್ಟಾಾರೆ ಯೋಗಕ್ಷೇಮಕ್ಕೆೆ ಕೊಡುಗೆ ನೀಡುತ್ತವೆ, ಆದರೆ ವೈದ್ಯರ ಕೊರತೆ, ಅಗತ್ಯ ಸೌಲಭ್ಯಗಳ ಕೊರತೆಯಂತಹ ಸವಾಲುಗಳನ್ನು ಎದುರಿಸುತ್ತಿಿವೆ ಸರ್ಕಾರ ಈ ಕುರಿತು ಗಮನ ಹರಿಸಬೇಕಾಗಿದೆ ಎಂದರು.
ಗ್ರಾಾಮ ಪಂಚಾಯತ ಅಧ್ಯಕ್ಷೆ ಸರಸ್ವತಿ ಗುರುಲಿಂಗಪ್ಪ ಚಟ್ನಳ್ಳಿಿ, ಉಪಾಧ್ಯಕ್ಷ ಪಾಂಡುರಂಗ ಕೋಲಿ ಸದಸ್ಯರಾದ ಜಗನ್ನಾಾಥ್ ಪೊಲೀಸ್ ಪಾಟೀಲ್, ಪೀರಪ್ಪ ಹೂಗಾರ್, ಜಯಶೀಲ ಕಾಶಿನಾಥ್, ಮುಖಂಡರಾದ ಗುರುನಾಥ ರಾಜಗೀರಾ, ರಾಜು ವಡ್ಡಿಿ, ರವಿ ಬಾಲೆಬಾಯಿ, ರಾಜು ಪಾಂಚಾಳ, ಸಂತೋಷ ಶಂಭು, ಸಂತೋಷಿ ನಿಡವಂಚಾ, ತಾಜೋದ್ದೀನ್ ಹವಾಲದಾರ, ಜಗನ್ನಾಾಥ್ ಕಮಲಾಪುರ ಮೊದಲಾದವರು ಇದ್ದರು.
ಆರೋಗ್ಯ ಕ್ಷೇಮ ಕೇಂದ್ರ ಲೋಕಾರ್ಪಣೆ ಸರ್ವರಿಗೂ ಆರೋಗ್ಯ ಸೇವೆಗೆ ಆದ್ಯತೆ : ಬೆಲ್ದಾಳೆ

