ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.08:
ಅನ್ನಭಾಗ್ಯ ಅಕ್ಕಿಿ ಅಕ್ರಮ ಸಾಗಣೆ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆೆ (ಎಸ್ಐಟಿ) ವಹಿಸುವಂತೆ ಅಗ್ರಹಿಸಿ ಪ್ರತಿಪಕ್ಷ ಬಿಜೆಪಿ ಆಗ್ರಹಕ್ಕೆೆ ವಿಧಾನಪರಿಷತ್ತಿಿನಲ್ಲಿ ಕೆಲಕಾಲ ಗದ್ದಲದ ವಾತಾವರಣ ಉಂಟಾಯಿತು.
ಬಿಪಿಎಲ್ ಪಡಿತರದಾರರಿಗೆ ವಿತರಿಸುವ ಅಕ್ಕಿಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿಿದೆ. ಅಲ್ಲದೆ ಇದೇ ಅಕ್ಕಿಿಯನ್ನು ಪಾಲಿಶ್ ಮಾಡಿ ದುಬೈ ಮತ್ತು ಸಿಂಗಾಪುರ ದೇಶಗಳಿಗೆ ಮಾರಾಟವಾಗುತ್ತಿಿದ್ದರೂ ಸಹ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಿಲ್ಲ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಸದನದಲ್ಲಿ ಪ್ರಶ್ನೋೋತ್ತರ ವೇಳೆಯಲ್ಲಿ ಸರ್ಕಾರವನ್ನು ಪ್ರಶ್ನಿಿಸಿದರು.
570 ಜನರ ಬಂಧನ
ಇದಕ್ಕೆೆ ಉತ್ತರಿಸಿದ ಅಹಾರ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆೆ ಸಂಬಂಧಿಸಿದಂತೆ ರಾಜ್ಯಾಾದ್ಯಂತ 570 ಜನರನ್ನು ಬಂಧಿಸಲಾಗಿದೆ. ಅಕ್ಕಿಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆೆ ಸಂಬಂಧಿಸಿದಂತೆ ಒಟ್ಟು 29,603 ಕ್ವಿಿಂಟಾಲ್ ಅಕ್ಕಿಿಯನ್ನು ವಶಪಡಿಸಿಕೊಂಡಿದ್ದು, 314 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಿದ್ದ ಅನ್ಯ ಇಲಾಖೆಯ ಅಧಿಕಾರಿಗಳನ್ನು ಇಲಾಖೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕೆ.ಎ್.ಸಿ.ಎಸ್.ಸಿ. ಗೋದಾಮು ಅಮಾನತ್ತುಗೊಳಿಸಲಾಗಿದೆ. ಅಕ್ರಮವಾಗಿ ಪಡಿತರ ಅಕ್ಕಿಿ ಸಂಗ್ರಹಣೆ ಮತ್ತು ಮಾರಾಟಕ್ಕೆೆ ಕಡಿವಾಣ ಹಾಕಲು ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆೆ ಮೇಲ್ವಿಿಚಾರಣೆ ಮಾಡುವಂತೆ ನಿರ್ದೇಶನ ನೀಡಿ ಅಗತ್ಯ ವಸ್ತುಗಳ ಕಾಯ್ದೆೆ 1955 ರಡಿ ಕ್ರಿಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.
ಪಡಿತರ ಚೀಟಿದಾರರು ಪಡಿತರ ಅಕ್ಕಿಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ಕಂಡುಬಂದಲ್ಲಿ ಸದರಿ ಪಡಿತರ ಚೀಟಿಗಳನ್ನು ರದ್ದುಪಡಿಸಿ ಅಂತವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ಪರಿಷತ್ನಲ್ಲಿ ತಿಳಿಸಿದ ಸಚಿವ ಮುನಿಯಪ್ಪ ಅವರು ನ್ಯಾಾಯಬೆಲೆ ಅಂಗಡಿ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಿ ಪಡಿತರ ವಿತರಣೆ ಪರಿಶೀಲಿಸಲಾಗುತ್ತಿಿದೆ ಎಂದರು.
ಪ್ರತಿ ತಿಂಗಳು ನ್ಯಾಾಯಬೆಲೆ ಅಂಗಡಿ ಮಟ್ಟದಲ್ಲಿ ಆಹಾರ ಅದಾಲತ್ಗಳನ್ನು ನಡೆಸಿ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಬಗ್ಗೆೆ ಜಾಗೃತಿ ಮೂಡಿಸಲಾಗುತ್ತಿಿದೆ. ರಾಜ್ಯ ಮಟ್ಟದಲ್ಲಿ ಆಹಾರ ಜಾಗೃತ ದಳ ರಚಿಸಿ ಅಕ್ರಮಗಳ ಬಗ್ಗೆೆ ನಿಯಮಾನುಸಾರ ಕ್ರಮವಹಿಸಲಾಗುತ್ತಿಿದೆ ಎಂದು ಹೇಳಿದರು.
ರಾಜ್ಯದ ಉದ್ದಗಲಕ್ಕೂ ಅಕ್ರಮ :
ಆದರೆ, ಇದಕ್ಕೆೆ ತೃಪ್ತರಾಗದ ಸಿ.ಟಿ.ರವಿ, ಇದು ರಾಜ್ಯದ ಉದ್ದಗಲಕ್ಕೂ ವ್ಯಾಾಪಿಸಿರುವ ಅಕ್ರಮ. ಪ್ರತಿ ಜಿಲ್ಲೆಯಲ್ಲಿಯೂ ಹತ್ತಾಾರು ಎ್ಐಆರ್ ದಾಖಲಾಗಿವೆ. ಅನೇಕ ದೊಡ್ಡ ಕುಳಗಳೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಇದು ಸಮಗ್ರವಾಗಿ ತನಿಖೆಯಾಗಬೇಕು. ಹೀಗಾಗಿ ಈ ಪ್ರಕರಣವನ್ನು ಎಸ್ಐಟಿಗೆ ವಹಿಸಬೇಕು ಎಂದು ಪಟ್ಟು ಹಿಡಿದರು.
ಆಗ ಮಧ್ಯಪ್ರವೇಶಿಸಿದ ಗ್ರಾಾಮೀಣಾಭಿವೃದ್ದಿ ಸಚಿವ ಪ್ರಿಿಯಾಂಕ್ ಖರ್ಗೆ, ಯಾದಗಿರಿಯಲ್ಲಿ ಅಕ್ರಮ ಅಕ್ಕಿಿ ಮಾರಾಟ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ಈ ಪ್ರಕರಣದಲ್ಲಿ ಬಿಜೆಪಿಯವರೇ ಇದ್ದಾರೆ. ಎ1, ಎ2, ಎ3 ಯಾರು ಯಾರು ಇದ್ದಾರೆ ಎಂದು ಒಮ್ಮೆೆ ಗಮನಿಸಿ ಎಂದು ಹೇಳಿದರು.
ಸಚಿವರ ಈ ಮಾತಿಗೆ ತಿರುಗಿಬಿದ್ದ ಬಿಜೆಪಿ ಶಾಸಕರು, ಪಡಿತರ ಅಕ್ಕಿಿ ಅಕ್ರಮ ಮಾರಾಟದಲ್ಲಿ ಬಿಜೆಪಿಯವರು ಇದ್ದಾರೆ ಎಂದು ಹೇಳುವುದು ತಪ್ಪುು. ಯಾರಾದರೂ ಅಕ್ರಮ ಮಾಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿಿ. ಇದರಲ್ಲಿ ಬಿಜೆಪಿ ಹೆಸರು ತರುವುದು ಏಕೆ ಎಂದು ಕಿಡಿಕಾರಿದರು.
ಅಕ್ರಮ ಅಕ್ಕಿಿ ಮಾರಾಟ ಪ್ರಕರಣಗಳು ನಡೆದು ಕೆಲವು ಕಡೆ ಎರಡು ವರ್ಷಗಳೇ ಕಳೆದಿವೆ. ಆದರೆ, ಅವರ ವಿರುದ್ದ ಇದುವರೆಗೂ ಶಿಕ್ಷೆಯಾಗಿಲ್ಲ. ಸರ್ಕಾರ ಕೈಕಟ್ಟಿಿ ಕುಳಿತಿದೆಯೇ ಎಂದು ಟೀಕಾಪ್ರಹಾರ ನಡೆಸಿದರು.
ಇಂದಿರಾ ಕಿಟ್ :
ಅಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಪ್ರತಿ ಕಾರ್ಡ್ದಾರರಿಗೆ 10 ಕೆ.ಜಿ. ಅಕ್ಕಿಿ ಸಿಗುತ್ತಿಿದ್ದರಿಂದ ಕೆಲವರು ಅಷ್ಟು ಅಕ್ಕಿಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೆ ಅದನ್ನು ಅಕ್ರಮವಾಗಿ ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಿಿದ್ದವು. ಹೀಗಾಗಿ ಇನ್ನು ಮುಂದೆ ಐದು ಕೆ.ಜಿ. ಅಕ್ಕಿಿ ಮತ್ತು ಇಂದಿರಾ ಪೌಷ್ಠಿಿಕ ಕಿಟ್ ನೀಡಲಾಗುವುದು. ಇದರಲ್ಲಿ ಬೇಳೆ, ಎಣ್ಣೆೆ, ಸಕ್ಕರೆ, ಉಪ್ಪುು ಇರುತ್ತದೆ. ಹೀಗಾಗಿ ಇದನ್ನು ಜನರು ಸದ್ಭಳಕೆ ಮಾಡಕೊಳ್ಳುತ್ತಾಾರೆ. ಮುಂದಿನ ಜನವರಿಯಿಂದ ಪಡಿತರ ಚೀಟಿದಾರರಿಗೆ ಇಂದಿರಾ ಕಿಟ್ ವಿತರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಈಗಾಗಲೇ ನಮ್ಮ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಬದ್ಧತೆಯಿಂದ ಕಾರ್ಯನಿರ್ವಹಿಸಿರುವುದರಿಂದಲೇ 570 ಜನರನ್ನು ಬಂಧಿಸಲು ಸಾಧ್ಯವಾಗಿದೆ. ರಾಜ್ಯಾಾದ್ಯಂತ ಎಲ್ಲಾ ಹಂತಗಳಲ್ಲಿಯೂ ತೀವ್ರ ನಿಗಾ ಇರಿಸಲಾಗಿದೆ. ಇಂದಿರಾ ಕಿಟ್ ಜಾರಿಯಾದ ಬಳಿಕ ಅಕ್ರಮ ಅಕ್ಕಿಿ ಮಾರಾಟ ನಿಲ್ಲುತ್ತದೆ. ಹೀಗಾಗಿ ಈ ಪ್ರಕರಣವನ್ನು ಎಸ್ಐಟಿಗೆ ವಹಿಸುವ ಅಗತ್ಯವಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.

