ಸುದ್ದಿಮೂಲ ವಾರ್ತೆ
ಮೈಸೂರು, ಅ.24: ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಮೈಸೂರು- ಬೆಂಗಳೂರು ರಸ್ತೆಯಲ್ಲಿ ಮಂಗಳವಾರ ರಸ್ತೆ ತಡೆಗೆ ಯತ್ನಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹಾಗೂ ನೂರಾರು ರೈತರನ್ನು ಪೊಲೀಸರು ಬಂಧಿಸಿದರು.
ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಸರ್ಕಲ್ನಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಪ್ರತಿಭಟನೆ ನಡೆಸಲು ಜಮವಾಣೆ ಆದಾಗ ಪೊಲೀಸ್ ಮುಖ್ಯಸ್ಥ ತಳವಾರ್ ಆಗಮಿಸಿ ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೆ ಮುಂದಾದರು. ಆಗ ಮಾತಿನ ವಾಗ್ವಾದ ನಡೆಯಿತು, ರೈತರು ಬಂಧನವನ್ನು ವಿರೋಧಿಸಿದರು, ಪೊಲೀಸರು ನಿರ್ಲಕ್ಷಿಸಿ ಬಲತ್ಕಾರವಾಗಿ ರೈತರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಸಿ.ಎ.ಆರ್ ಪೆರೆಂಡ್ ಗ್ರೌಂಡ್ಗೆ ಕರೆದೊಯ್ದರು.
ರಾಜ್ಯದಲ್ಲಿ ಈಗಾಗಲೇ ಬರ ಘೋಷಣೆ ಆಗಿದೆ ವಿದ್ಯುತ್ ಇಲ್ಲದೆ ರೈತರು ಕಗತ್ತಲಲ್ಲಿದ್ದಾರೆ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರೈತರ ಬಲಿಪಡೆದು ಸರಳ ದಸರಾ ಹೆಸರಿನಲ್ಲಿ ಅದ್ದೂರಿ ಮತ್ತು ಮೋಜಿನ ದಸರಾ ಮಾಡಲು ಹೊರಟಿದೆ ಕಬ್ಬಿನ ದರ ನಿಗದಿ ಮಾಡದೆ ಹಳೆ ಬಾಕಿ ಕೊಡಿಸದೆ ಸರ್ಕಾರ ನಿರ್ಲಕ್ಷತನ ಮಾಡುತ್ತಿದೆ. ಒಂದು ವಾರ ಮೊದಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ, ಮೈಸೂರಿನಲ್ಲಿ 20 ಮಂತ್ರಿಗಳಿದ್ದರೂ ಮೋಜು ಮಾಡಲು ಬಂದಿದ್ದರು. ನಮ್ಮ ಹೋರಾಟದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲದಾಗಿದೆ ಎಂದು ಖಂಡಿಸಿದರು.
ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ರೈತರಿಗೆ 10 ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಕೈಗಾರಿಕೆಗಳಿಗೆ ನಿರಂತರವಾಗಿ 24 ಗಂಟೆಗಳ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ, ರೈತರನ್ನ ಕಗ್ಗತ್ತಲು ಇಟ್ಟಿದ್ದಾರೆ. ಇಂಥ ಇಬ್ಬಂದಿ ನೀತಿ ವಿರುದ್ಧ ನಮ್ಮ ಹೋರಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರನ್ನು ಬಂಧಿಸಿ ಸಿ.ಎ.ಆರ್ ಪೇರೆಡ್ ಗ್ರೌಂಡ್ಗೆ ಕರೆತಂದಾಗ ಅಲ್ಲೆ ಸರ್ಕಾರದ ವಿರುದ್ಧ ಮತ್ತು ಜಿಲ್ಲಾಡಾಳಿತದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆಯನ್ನು ನಡೆಸಿದರು.
ರೈತ ಮುಖಂಡರಾ ಪಿ. ಸೋಮಶೇಖರ್, ಅತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕುರುಬೂರು ಸಿದ್ದೇಶ್, ಹಂಪಾಪುರ ರಾಜೇಶ್, ಕೋಟೆ ಸುನೀಲ್ ಕುಮಾರ್, ಮಾರ್ಬಳ್ಳಿ ನೀಲಕಂಠಪ್ಪ, ಅಂಬಳೆ ಮಂಜುನಾಥ್, ಪಟೇಲ್ ಶಿವಮೂರ್ತಿ, ಕಿರಗಸೂರು ಪ್ರಸಾದ್ ನಾಯ್ಕ್, ಕಮಲಮ್ಮ, ಕುರುಬೂರು ಪ್ರದೀಪ್, ಸಿದ್ದರಾಮು, ಹಾಡ್ಯ ರವಿ, ಹೆಗ್ಗೂರು ರಂಗರಾಜು, ಸಾತಗಳ್ಳಿ ಬಸವರಾಜು, ವರಕೋಡು ನಾಗೇಶ್, ಉಡಿಗಾಲ ಸುಂದ್ರಪ್ಪ, ರೇವಣ್ಣ, ಗುರುಪ್ರಸಾದ್, ಹನುಮನಾಳು ಸಿದ್ದರಾಜು, ಲೋಕೇಶ್, ಶಬರೀಶ್, ಶ್ರೀನಿವಾಸ್, ಸಿದ್ಧಯ್ಯ, ವಿಕಾಶ್, ಸತೀಶ್, ಶಿವಕುಮಾರ್, ಶಿವಲಿಂಗಪ್ಪ, ನಾಗೇಶ್, ಮಹಾಲಿಂಗ ನಾಯ್ಕ, ಶಂಕರ, ಮಲ್ಲೇಶ, ನಾಗೇಂದ್ರ ಪ್ರಸಾದ್, ಕುಳ್ಳೇಗೌಡ, ಸಿದ್ದು, ರಾಜಣ್ಣ, ಚಂದ್ರಶೇಖರ್ ಸೇರಿದಂತೆ ನೂರಾರು ರೈತರು ಬಂಧಿತರಾದರು,
ಬಂಧಿತ ರೈತರು ಮನೆಗಳಿಗೆ ಹೋಗುವುದಿಲ್ಲ ನಮ್ಮನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಅಥವಾ ನಮ್ಮನ್ನು ಬಂಧಿಸಲು ಕಾರಣವೇನು ಎಂದು ತಿಳಿಸಿ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಪೊಲೀಸ್ ಅಧಿಕಾರಿಗಳು ಹರ ಸಾಹಸ ಪಟ್ಟರು ಕದಲುತ್ತಿಲ್ಲ ಈ ಇನ್ನುಸಹ ಪೊಲೀಸ್ ಮೈದಾನದಲ್ಲಿಯೇ ಇದ್ದರು.