ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಮೇ 20: ಹೋಬಳಿಯ ಯನಗುಂಟೆ ಗ್ರಾಮದ ದಲಿತ ಕಾಲೋನಿಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವ ಘಟನೆಯನ್ನು ಶೀಘ್ರವಾಗಿ ತನಿಖೆ ಮಾಡಿ ಕಿಡಿಗೇಡಿಗಳನ್ನು
ಬಂಧಿಸುವಂತೆ ಭೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಒತ್ತಾಯಿಸಿದ್ದಾರೆ. ಸೂಲಿಬೆಲೆ ಪೋಲಿಸ್ ಠಾಣೆಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್
ಪುತ್ಥಳಿಗೆ ಅವಮಾನ ಮಾಡುವುದು ದಲಿತ ಕಾಲೋನಿಗಳಲ್ಲಿ ದೌರ್ಜನ್ಯ ಎಸಗುವುದು ಹೆಚ್ಚಾಗುತ್ತಿರುವುದು ವಿಷಾಧನೀಯ ಸಂಗತಿ. ಈ ಹಿನ್ನಲೆಯಲ್ಲಿ ಪೋಲಿಸರು ದಲಿತ ಕಾಲೋನಿಗಳ ಜನತೆಗೆ ಹೆಚ್ಚಿನ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.
ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂದಿಸಿ ಗಡಿಪಾಡು ಮಾಡಬೇಕಾಗಿ ಒತ್ತಾಯ ಮಾಡಿದ್ದಾರೆ.
ಹೊಸಕೋಟೆ ಡಿವೈಎಸ್ಪಿ ಪಾಟೀಲ್, ಸೂಲಿಬೆಲೆ ಠಾಣಾ ಇನ್ಸ್ಪೆಕ್ಟರ್ ರವಿ ಬೀಮ್ ಸೇವಾ ಸಮಿತಿಯ ಮನವಿಪತ್ರವನ್ನು ಸ್ವೀಕರಿಸಿ ಘಟನೆಯ ತನಿಖೆ ಚುರುಕುಗೊಳಿಸಿ ಕಿಡಿಗೇಡಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನಿರಾಜು, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಮಧುಚಕ್ರವರ್ತಿ, ಕಾರ್ಮಿಕ ಘಟಕ ಉಪಾಧ್ಯಕ್ಷ ಸುಮನ್, ಹೊಸಕೋಟೆ ತಾ.ಯುವ ಘಟಕ ಅಧ್ಯಕ್ಷ ಜೊಯಲ್, ಯುವ ಘಟಕ ಉಪಾಧ್ಯಕ್ಷ ಜಯರಾಜ್ ಇತರರು ಇದ್ದರು.