ಸುದ್ದಿಮೂಲ ವಾರ್ತೆ ರಾಯಚೂರು , ಡಿ.08:
ಬೀದಿ ಬದಿ ವ್ಯಾಾಪಾರಿಗಳನ್ನು ದೌರ್ಜನ್ಯದಿಂದ ತೆರವು ಖಂಡಿಸಿ ಪ್ರಶ್ನಿಿಸಿದ ಭಾರತೀಯ ಸೇವಾ ಸಮಿತಿ ಸಂಸ್ಥಾಾಪಕ ರಾಜ್ಯಾಧ್ಯಕ್ಷ ಡಾ. ರಾಮಚಂದ್ರ ಚಿನ್ನಿಿ ಹೂಡಿ ಅವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ವಾರದಲ್ಲಿ ಬಂಧಿಸದೆ ಹೋದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ಹನುಮಂತಪ್ಪ ಮನ್ನಾಾಪೂರು ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಬೆಂಗಳೂರಿನ ಮಹಾದೇವಪುರ ಕ್ಷೇತ್ರ ವ್ಯಾಾಪ್ತಿಿಗೆ ಬರುವ ಐಟಿಪಿಎಲ್ ವೈಟ್ಫೀಲ್ಡ್ ಸರ್ಕಲ್ ಐ-ಗೇಟ್ ಇರುವ ವ್ಯಾಾಪಾರಿಗಳ ತೆರವುಗೊಳಿಸಿದ ಮಾಹಿತಿ ಪಡೆದು ಸ್ಥಳಕ್ಕೆೆ ಬಂದು ಪ್ರಶ್ನಿಿಸಿದ್ದಕ್ಕೆೆ ಈ ಘಟನೆ ನಡೆದಿದೆ.
ಬೀದಿ ಬದಿ ವ್ಯಾಾಪಾರಿಗಳ ಜೀವನೋಪಾಯಕ್ಕೆೆ ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಏಕಾಏಕಿ ಬೀದಿ ವ್ಯಾಾಪಾರಿಗಳ ತೆರವು ತಡೆಯುವುದು ತಪ್ಪುು ಎಂಬಂತೆ ಬಿಂಬಿಸಿ ರಮೇಶರೆಡ್ಡಿಿ, ತ್ರಿಿಶೋಧ ಎನ್ನುವವರು ಉಮಾಶಂಕರ ಪ್ರಚೋದನೆ ನೀಡಿ ಹಲ್ಲೆೆ ಮಾಡಿಸಿದ್ದಾಾರೆ.ಈ ಬಗ್ಗೆೆ ಮಹದೇವಪುರ ಕ್ಷೇತ್ರದ ಅರವಿಂದ ಲಿಂಬಾವಳಿ ಅವರ ವೌನ ಸಹಿಸಲಾಗದು ದೌರ್ಜನ್ಯ, ದಬ್ಬಾಾಳಿಕೆ, ನಡೆದಾಗ ಹೆಚ್ಚಿಿನ ಕಾಳಜಿ ವಹಿಸಿ ಅವರಿಗೆ ಬದುಕಲು ಅನುವು ಮಾಡಿಕೊಡಬೇಕಾಗಿತ್ತು ಎಂದು ಆಗ್ರಹಿಸಿದರು.
ಕಿಡಿಗೇಡಿಗಳು ರಾಜ್ಯಾಧ್ಯಕ್ಷರಿಗೆ ಜೀವ ಬೆದರಿಕೆ ಹಾಕಿದರೂ ಪೊಲೀಸರು ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ನಿರ್ಲಕ್ಷ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿ ಕಿಡಿಗೇಡಿಗಳ ಬಂಧಿಸದೆ ಹೋದರೆ ಪ್ರತಿಭಟನೆ ಹಮ್ಮಿಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಿಯಲ್ಲಿ ತಿಮ್ಮಪ್ಪಘಿ, ರಂಜಿತ್, ವೀರೇಶ, ಕೃಷ್ಣ ಆಸ್ಕಿಿಹಾಳ, ಚಂದ್ರಶೇಖರ ಇತರರಿದ್ದರು.
‘ರಾಮಚಂದ್ರ ಚಿನ್ನಿ ಮೇಲೆ ಹಲ್ಲೆ ಕೋರರ ವಾರದೊಳಗೆ ಬಂಧಿಸಿ’

