ಸುದ್ದಿಮೂಲ ವಾರ್ತೆ ಸಿಂಧನೂರು, ಜ.14:
2025-26ನೇ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನಲ್ಲಿ ಸಿಂಧನೂರು ತಾಲೂಕಿನಲ್ಲಿ 19 ಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಎಲ್ಲಾಾ ಕೇಂದ್ರಗಳಲ್ಲಿ ಬುಧವಾರದಿಂದಲೇ ನೋಂದಣಿ ಕಾರ್ಯ ಆರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಹಶೀಲ್ದಾಾರ ಅರುಣ್ ಹೆಚ್.ದೇಸಾಯಿ ಮನವಿ ಮಾಡಿದ್ದಾಾರೆ.
ರಾಜ್ಯಾಾದ್ಯಂತ 3 ಲಕ್ಷ ಮೆಟ್ರಿಿಕ್ ಟನ್ ಬಿಳಿಜೋಳ ಖರೀದಿ ಗುರಿ ನಿಗದಿಸಲಾಗಿದೆ. ಮುಂಗಾರಿನಲ್ಲಿ 0.88 ಮೆಟ್ರಿಿಕ್ ಟನ್, ಹಿಂಗಾರಿನಲ್ಲಿ 2.12 ಮೆಟ್ರಿಿಕ್ ಟನ್ ಖರೀದಿ ಮಾಡಲಾಗುವುದು. ಒಬ್ಬ ರೈತ ಯಾವುದಾದರೂ ಒಂದು ಋತುವಿನಲ್ಲಿ ನೋಂದಣಿ ಮಾಡಿಸಲು ಅವಕಾಶವಿದೆ. ಪ್ರತಿ ಎಕರೆಗೆ 15 ಕ್ವಿಿಂಟಾಲ್ನಂತೆ ಗರಿಷ್ಟ 150 ಕ್ವಿಿಂಟಾಲ್ ಖರೀದಿ ಮಾಡಲಾಗುವುದು. ಖರೀದಿ ಕೇಂದ್ರಗಳಲ್ಲಿ ್ರೂಟ್ಸ್ ಐಡಿ ಮೂಲಕ ರೈತರು ನೋಂದಣಿ ಮಾಡಿಸಬಹುದಾಗಿದೆ ಎಂದು ತಿಳಿಸಿದ್ದಾಾರೆ.
ತಾಲೂಕಿನ ರೌಡಕುಂದಾ, ದಿದ್ದಿಗಿ, ಹಂಚಿನಾಳಕ್ಯಾಾಂಪ್, ಸಾಲಗುಂದಾ, ಬಾದರ್ಲಿ, ಬೂದಿವಾಳ, ಗೋನವಾರ, ಉಮಲೂಟಿ, ಜವಳಗೇರಾ, ವಲ್ಕಂದಿನ್ನಿಿ, ಸಿಂಧನೂರು, ಅಲಬನೂರು, ಮಲ್ಲಾಾಪುರ, ಆರ್.ಹೆಚ್.ಕ್ಯಾಾಂಪ್, ತುರ್ವಿಹಾಳ, ಹುಡಾ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರಿ ಸಂಘಗಳು, ಸಿಂಧನೂರಿನ ಟಿಎಪಿಸಿಎಂಎಸ್, ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರಿ ಸಂಘದ ಅಲಬನೂರಿನ ಉಪಕೇಂದ್ರ ಬೆಳಗುರ್ಕಿ, ಬೂದಿವಾಳ ಸೊಸೈಟಿಯ ಉಪಕೇಂದ್ರ ಮಾಡಶಿರವಾರ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾಾರೆ.
ಜೋಳ ಖರೀದಿಗೆ ನೋಂದಣಿ ಆರಂಭ : ಅರುಣ ದೇಸಾಯಿ

