ಸುದ್ದಿಮೂಲ ವಾರ್ತೆ
ಹೊಸಕೋಟೆ ನ. 04 : ಗ್ರಾಮೀಣ ಬಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹಗಳು ಹೆಚ್ಚುತಿದ್ದು ಇದನ್ನು ತಡೆಯಲು ಪ್ರತಿಯೊಬ್ಬರೂ ಪಣ ತೊಡಗುವುದರ ಮೂಲಕ ಸಮಾಜದಲ್ಲಿನ ಮೌಡ್ಯತೆ ತೊಳೆದುಹಾಕಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶ ಅರುಣ್ ಕುಮಾರ್ ಜಿ. ತಿಳಿಸಿದರು.
ಹೊಸಕೋಟೆ ನಗರದ ಸರ್ಕಾರಿ ಬಾಲಕಿಯರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ನಿರ್ಮಾಣ ಕಾರ್ಯಕ್ರಮದಡಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಆವರು ಬಾಲ್ಯ ವಿವಾಹದಿಂದ ಹೆಣ್ಣು ಮಗುಗೆಗೆ ತೀವ್ರ ತರಹದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತದೆ. ಹೆಣ್ಣು ಮಕ್ಕಳಲ್ಲಿ ಮದುವೆಯ ವಯಸ್ಸು 18 ವಯಸ್ಸಿಗೂ ಮೊದಲು ಮದುವೆಯಾದಲ್ಲಿ ಸೂಕ್ತ ಬೆಳವಣಿಗೆ ಆಗದೆ ಇರುವುದು, ದೇಶದಲ್ಲಿ ಅಪೌಷ್ಟಿಕತೆ ಸಮಸ್ಯೆ, ಹುಟ್ಟುವ ಮಗುವಿಗೆ ವಿಕಲಾಂಗತೆ ಸಮಸ್ಯೆಗಳು ಹೆಚ್ಚಾಗಿ ಬರುವ ಕಾರಣ ಪುರುಷರಿಗೆ ಕನಿಷ್ಟ 21 ವರ್ಷ ಹಾಗೂ ಮಹಿಳೆಯರಿಗೆ ಕನಿಷ್ಟ 18 ವರ್ಷದ ನಂತರವಷ್ಟೇ ಮದುವೆ ಮಾಡಬೇಕು ಎಂದರು.
ಮಾಲೀಕರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಹಿರಿಯರ ಒತ್ತಡಕ್ಕೆ ಅಥವ ಬಡತನಕ್ಕೆ ಒಳಗಾಗಿ ಹೆಣ್ಣು ಮಕ್ಕಳು ಬಾಲ್ಯ ವಿವಾಹ ಮಾಡಿಕೊಳ್ಳಬಾರದು, ಇಂತ ವಿಚಾರಗಳನ್ನು ದೈರ್ಯದಿಂದ ಎದುರಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ ಹಾಗೂ ನಿಮ್ಮ ನೆರೆ ಹೊರೆಗಳಲ್ಲಿ ಇಂತಹ ಪ್ರಕರಣ ನಡೆಯುತಿದ್ದರೆ ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ಸಂಭವಿಸಬಹುದಾದ ಅನಾಹುತಗಳನ್ನು ಧೈರ್ಯದಿಂದ ತಡೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾದೀಶ ಬಸವರಾಜ್ ಜಿ ಸನದಿ, ಹೆಚ್ಚುವರಿ ಸಿವಿಲ್ ನ್ಯಾಯಾದೀಶೆ ಚೈತ್ರ ವಿ ಕುಲಕರ್ಣಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿಧ್ಯಾ ವಸ್ತçದ್,ಪ್ರಾಂಶುಪಾಲ ಚಂದ್ರ ಮರ್ಕಲ್, ವಕೀಲರ ಸಂಘದ ಉಪಾಧ್ಯಕ್ಷ ಕೆ ನಾಗರಾಜ್,ಪ್ರಧಾನ ಕಾರ್ಯದರ್ಶಿ ಎಂ.ವಿ ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಟಿಕೆ ಮುನಿರಾಜ್,ಖಜಾಂಚಿ ಕೆ ಎಂ ರವಿಕುಮಾರ್ ಹಾಗೂ ಸಂಪನ್ಮೂಲ ವ್ಯಕ್ತಿಬಿ ಎಂ ಅನಂತ್ ಪ್ರಭಾಕರ್ ಮೊದಲಾದವರು ಹಾಜರಿದ್ದರು.