ಸುದ್ದಿಮೂಲ ವಾರ್ತೆ ರಾಯಚೂರು, ಅ.19:
ರಾಯಚೂರಿನ ಶ್ರೀ ರಾಮನಗರ ಕಾಲೋನಿಯ ಶ್ರೀ ಕೋದಂಡ ರಾಮ ದೇವಸ್ಥಾಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಶಿವರಾಜ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಇಂದು ದೇವಸ್ಥಾಾನದ ಆವರಣದಲ್ಲಿ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಅವರು ಬಡಾವಣೆಯ ಮುಖಂಡರೊಂದಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿ, 50 ಲಕ್ಷ ರೂ ಅನುದಾನದಲ್ಲಿ ಬಡಾವಣೆಯ ಜನರ ಉಪಯೋಗಕ್ಕಾಾಗಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದರು.
ಕಳೆದ ಅವಧಿಯಲ್ಲಿಯೇ ಅನುದಾನ ನೀಡಲಾಗಿತ್ತು ಈಗ ಪೂಜೆ ನೆರವೇರಿಸಿದ್ದು ಶೀಘ್ರವೆ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ರಾಮನಗರ ಗೃಹ ನಿರ್ಮಾಣ ಸಂಘದ ಅಧ್ಯಕ್ಷರು, ಸದಸ್ಯರು ಪದಾಧಿಕಾರಿಗಳು, ಭಜನಾ ಮಂಡಳಿಯ ಮಹಿಳೆಯರು ಸೇರಿದಂತೆ ಹಲವರು ಭಾಗವಹಿಸಿದ್ದರು .