ಸುದ್ದಿಮೂಲ ವಾರ್ತೆ ದಾವಣಗೆರೆ, ಡಿ.15:
ವಯೋಸಹಜ ಅನಾರೋಗ್ಯದಿಂದ ಭಾನುವಾರ ರಾತ್ರಿಿ ನಿಧನರಾದ ಕಾಂಗ್ರೆೆಸ್ ಹಿರಿಯ ಶಾಸಕ, ರಾಜಕೀಯ ಮುತ್ಸದ್ದಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಿಯೆ ಕಲ್ಲೇಶ್ವರ ಮಿಲ್ನ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಸಂಜೆ ನೆರವೇರಿತು.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕುಟುಂಬಸ್ಥರು, ಗಣ್ಯರು, ಸಾರ್ವಜನಿಕರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು. ಕ್ರಿಿಯಾ ಸಮಾಧಿ ಮಾಡಿ ಐಕ್ಯ ಮಂಟಪದಲ್ಲಿ ವಿಭೂತಿ ಗಟ್ಟಿಿಗಳೊಂದಿಗೆ ಅವರ ಅಂತ್ಯ ಸಂಸ್ಕಾಾರ ನಡೆಯಿತು.
ಸಿರಿಗೆರೆ ಶ್ರೀಗಳು, ವಚನಾನಂದ ಸ್ವಾಾಮೀಜಿ, ಪಂಚಪೀಠದ ಜಗದ್ಗುರುಗಳು ಸೇರಿದಂತೆ ಹಲವು ಮಠಾಧೀಶರ ಸಮ್ಮುಖದಲ್ಲಿ ಈ ಅಂತ್ಯ ಸಂಸ್ಕಾಾರ ನಡೆಯಿತು. ಶಾಮನೂರು ಶಿವಶಂಕರಪ್ಪ ಅವರ ಹಿರಿಯ ಪುತ್ರ ಬಕ್ಕೇಶ್ ಅವರು ಅಂತ್ಯಸಂಸ್ಕಾಾರದ ವಿಧಿವಿಧಾನ ಪೂರೈಸಿದರು. ಪೂಜೆ ವೇಳೆ ಸಹೋದರನಿಗೆ ಕಿರಿಯ ಸಹೋದರರಾದ ಎಸ್ ಎಸ್ ಮಲ್ಲಿಕಾರ್ಜುನ್, ಎಸ್ ಎಸ್ ಗಣೇಶ್ ಕೈಜೋಡಿಸಿದರು.
ಸೊಸೆಯಂದಿರು, ಪುತ್ರಿಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಭಾವುಕರಾದರು. ತಾತನ ಅಂತ್ಯಸಂಸ್ಕಾಾರದ ಸ್ಥಳದಲ್ಲೇ ನಿಂತು ವಿಭೂತಿ ಅರ್ಪಿಸಿ ಪೂಜೆ ಮಾಡಿ ಮೊಮ್ಮಕ್ಕಳು ಕಳುಹಿಸಿ ಕೊಟ್ಟರು. ಅರ್ಚಕರು ವಿಧಿವಿಧಾನ ನೆರವೇರಿಸಿದರು. ಕುಣಿಯಲ್ಲಿ ಇಳಿದು ಪುತ್ರರು ಹಾಗೂ ಕುಟುಂಬಸ್ಥರು, ಬಂಧುಮಿತ್ರರು ವಿಧಿವಿಧಾನ ನೆರವೇರಿಸಿದರು. ಇವರೆಲ್ಲರ ಸಮ್ಮುಖದಲ್ಲೇ ಅಂತ್ಯಸಂಸ್ಕಾಾರ ಮಾಡಲಾಯಿತು.
ಇದಕ್ಕೂ ಮುನ್ನ ರಂಭಾಪುರಿ ಜಗದ್ಗುರುಗಳು ಶಾಮನೂರು ಶಿವಶಂಕರಪ್ಪನವರ ಬಗ್ಗೆೆ ಹಿತವಚನ ನೆರವೇರಿಸಿದರು. ಈ ವೇಳೆ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರಕ್ಕೆೆ ಚರ್ಚ್ ಾಧರ್ಗಳು ಪುಷ್ಪ ಮಾಲೆ ಅರ್ಪಿಸಿದರು. ಧರ್ಮಾತೀತವಾಗಿ ಗೌರವ ಸೂಚಿಸಿದ ಬಳಿಕ ಅಂತಿಮ ದರ್ಶನಕ್ಕೆೆ ಕಲ್ಪಿಿಸಲಾಯಿತು. ಅಂತ್ಯಸಂಸ್ಕಾಾರದ ಸ್ಥಳಕ್ಕೆೆ ಆಗಮಿಸಿದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ದರ್ಶನ ಪಡೆದರು. ಪತ್ನಿಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಸಮಾಧಿ ನಿರ್ಮಿಸಲಾಗಿದೆ.
ನೂಕು ನುಗ್ಗಲು: ಶಾಮನೂರು ಶಿವಶಂಕರಪ್ಪ ಅವರಿಗೆ ಸರ್ಕಾರಿ ಗೌರವ ಹಾನರ್ ನೀಡಲು ಕೂಡ ಸಾಧ್ಯವಾಗದ ರೀತಿ ಜನ-ಅಭಿಮಾನಿಗಳ ಮಧ್ಯೆೆ ನೂಕು ನುಗ್ಗಲು ಏರ್ಪಟ್ಟಿಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಏಕಾಕಾಲಕ್ಕೆೆ ಬರುತ್ತಿಿದ್ದಂತೆ ನೂಕು ನುಗ್ಗಲು ಹೆಚ್ಚಾಾಯಿತು. ಗಣ್ಯರು ಆಗಮಿದ ಬಳಿಕ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರಕ್ಕೆೆ ತ್ರಿಿವರ್ಣ ಧ್ವಜ ಹೊದಿಸಿ ಪೊಲೀಸರು ಗೌರವ ಸೂಚಿಸಿ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಿದರು.
ಸಚಿವರಾದ ಕೆಜೆ ಜಾರ್ಜ್, ಎಂಬಿ ಪಾಟೀಲ್, ಆರ್. ವಿ .ದೇಶಪಾಂಡೆ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಾಮಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಮಿತ್ರರು ಆಗಮಿಸಿ ಅಂತಿಮ ದರ್ಶನ ಪಡೆದು. ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರಿಗೆ ಧೈರ್ಯ ತುಂಬಿದರು. ಸಚಿವ ಎಂ.ಬಿ ಪಾಟೀಲ್, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ಶಾಮನೂರು ಶಿವಶಂಕರಪ್ಪ ಅವರು ಅಂತ್ಯಕ್ರಿಿಯೆ ಕೊನೆವರೆಗೂ ಇದ್ದರು.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕುಟುಂಬಸ್ಥರಿಂದ ಅಂತ್ಯಸಂಸ್ಕಾಾರ, ಸಿಎಂ ಸೇರಿ ಗಣ್ಯರು ಭಾಗಿ ಸರ್ಕಾರಿ ಗೌರವದೊಂದಿಗೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ

