ಕೆ.ಆರ್.ಪಿ. ಪಿ ಪಕ್ಷದ ಅಭ್ಯರ್ಥಿಯಾಗಿ ಅಶೋಕ ಸಾಹುಕಾರ ಗೋಗಿ
ಏ.5ರಂದು ಗಾಲಿ ಜನಾರ್ದನ್ ರೆಡ್ಡಿ ಜೇವರ್ಗಿಗೆ ಆಗಮನ : ಅಶೋಕ ಸಾಹುಕಾರ
ಜೇವರ್ಗಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜೇವರ್ಗಿ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದು ಈ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದು ಅಶೋಕ ಸಾಹುಕಾರ ಗೋಗಿ ಎಂದು ಅಭಿಪ್ರಾಯಪಟ್ಟರು.
ಪಟ್ಟಣದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಿಂದುಳಿದ ಹಾಗೂ ನಿರಾಶಿತರ ಹಕ್ಕುಗಳ ಸಲುವಾಗಿಯೇ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು ಜೇವರ್ಗಿ ತಾಲೂಕಿನ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಗಾಲಿ ಜನಾರ್ದನ್ ರೆಡ್ಡಿ ಅವರು ಸ್ಥಾಪಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜೇವರ್ಗಿ ಮತಕ್ಷೇತ್ರದ ಅಭ್ಯರ್ಥಿಯಾಗಿ ಸಿಂಧನೂರಿನ ಸಮಾವೇಶದಲ್ಲಿ ಘೋಷಣೆ ಮಾಡಿದ್ದಾರೆ.
ಆದಕಾರಣ ಏಪ್ರಿಲ್ 5 ರಂದು ಬೃಹತ್ ಮಟ್ಟದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಜೇವರ್ಗಿ ಕ್ಷೇತ್ರಕ್ಕೆ ಆಗಮಿಸಲಿದ್ದು ಬೃಹತ್ ಸಮಾವೇಶ ಜರುಗಲಿದೆ ಎಂದು ಹೇಳಿದರು. ಆದಕಾರಣ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಜೇವರ್ಗಿ ಕ್ಷೇತ್ರದಲ್ಲಿ ಮೂರು ಪಕ್ಷಗಳು ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಕ್ಕೆ ಜನರು ಬೇಸತ್ತಿದ್ದಾರೆ ಯಾವುದೇ ಪ್ರಗತಿ ಕಾಣದ ತಾಲೂಕ ಹೊಸ ಪಕ್ಷಕ್ಕೆ ಮಣಿ ಹಾಕುತ್ತಾರೆ ಎನ್ನುವ ಭರವಸೆ ಮೇಲೆ ಗಾಲಿ ಜನಾರ್ದನ್ ರೆಡ್ಡಿ ಅವರು ನನಗೆ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ.ಪ್ರಶಾಂತ ಆಂದೋಲಾ, ಶಬ್ಬಿರ ಎಮ್ ಹಿಪ್ಪರಗಿ, ದೇವಿಂದ್ರಪ್ಪಗೌಡ ಪಾಟೀಲ್, ಶರಣಗೌಡ ವಸ್ತಾರಿ, ಶಾಬುದಿನ ಪಟೇಲ್, ಯಾಳವಾರ, ಕುರುಬ ಸಮಾಜ ಜಿಲ್ಲಾ ಉಪಾಧ್ಯಕ್ಷ ಕರೆಪ್ಪ ಗೌಡ ಬಿ. ಕಾಳಗಿ, ಯಡ್ರಾಮಿ ತಳವಾರ ಸಮಾಜದ ಅಧ್ಯಕ್ಷ ರೇವಣ್ಣಸಿದಪ್ಪ ಸುಂಬುಡ, ವಿಷ್ಣುಕಾಂತ ಬಿರಾದಾರ ರೇವನೂರು, ಶಿವಲಿಂಗಪ್ಪ ಸಾಹು ಬಳ್ಳುoಡಗಿ ಮಾಂತಗೌಡ ಬಿ ಮಾಲಿಪಾಟೀಲ್, ಬಲವಂತರಾಯ ಎಮ್ ಯರಗಲ, ಮಲ್ಲಿಕಾರ್ಜುನ್ ಕಾರಗಾರ ಯೆಂನಗುಂಟ್ಟಿ, ಮಾಂತಗೌಡ ಹಳ್ಳಿ ಆಂದೋಲ, ವೆಂಕಟೇಶ್ ಗುತ್ತೇದಾರ ಇಜೇರಿ, ಮಲ್ಲಿಕಾರ್ಜುನ್ ಸಾಹು ಹುಗ್ಗಿ, ಬಂಗವಂತರಾಯ ವಸ್ತಾರೀ ಯಳಸಂಗಿ ಸೇರಿದಂತೆ ಇತರರು ಇದ್ದರು.