ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.23:
ಭೋವಿ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ತೀರಾ ಹಿಂದುಳಿದ್ದು, ಭೋವಿ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆ ಆರಂಭಿಸಲು ಪ್ರಾಾಮಾಣಿಕ ಪ್ರಯತ್ನ ಮಾಡುವುದಾಗಿ ಸಮಾಜದ ನೂತನ ಅಧ್ಯಕ್ಷ ಅಶೋಕ ಉಮಲೂಟಿ ಘೋಷಣೆ ಮಾಡಿದರು.
ನಗರದ ಸರ್ಕ್ಯೂಟ್ಹೌಸ್ನಲ್ಲಿ ಭೋವಿ ಸಮಾಜದ ಹಿರಿಯ, ಎಪಿಎಂಸಿ ಮಾಜಿ ಸದಸ್ಯ ಕೆ.ರಾಮಣ್ಣ ಗೋರೇಬಾಳ ಅಧ್ಯಕ್ಷತೆಯಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆೆಯಾದ ನಂತರ ಅವರು ಮಾತನಾಡಿದರು.
ಹಣ್ಣಿಿನ ಮಾರುಕಟ್ಟೆೆ ಹತ್ತಿಿರ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮೂರ್ತಿ ಪ್ರತಿಷ್ಠಾಾಪನೆಗೆ ಎಲ್ಲರ ಸಹಕಾರದಿಂದ ಪ್ರಯತ್ನ ಮಾಡುವೆ. ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೋಯ್ದು, ಸಂಘಟನೆ, ಹೋರಾಟದ ಮೂಲಕ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಪಡೆಯಲು ಶ್ರಮಿಸುವೆ ಎಂದರು.
ಇದೇ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷರನ್ನಾಾಗಿ ಪ್ರಕಾಶ ಸೋಮಲಾಪುರ ಅವರನ್ನು ಆಯ್ಕೆೆ ಮಾಡಲಾಯಿತು. ಸೀತರಾಮಣ್ಣ ಸೀಮಲಾಪುರ, ಹುಸೇನಪ್ಪ ಮಲ್ಕಾಾಪುರ, ಹಂಸರಾಜ ಮಾಡಶಿರವಾರ, ಗೋವಿಂದರಾಜ ಸೋಮಲಾಪುರ, ದುರುಗಪ್ಪ ಮಲ್ಲದಗುಡ್ಡ, ಎಂ.ದುರುಗಪ್ಪ ಉಮಲೂಟಿ, ತಿಮ್ಮಾಾರೆಡ್ಡಿಿ ಬೂದಿವಾಳ, ವೆಂಕಟಸ್ವಾಾಮಿ ಮಾಡಶಿರವಾರ, ಗೋವಿಂದರಾಜ ರೌಡಕುಂದಾ, ವಿ.ಜನಾರ್ಧನ ಗುತ್ತೇದಾರ, ಶ್ರೀನಿವಾಸ ಜಂಗಮರಹಟ್ಟಿಿ, ನಾಗಪ್ಪ ಶಿಕ್ಷಕರು, ವಿ.ಕಾಶಪ್ಪ, ಹನುಮೇಶ, ರಾಮುಲು, ಅಡಿವೆಪ್ಪ ಕೆಂಗಲ್, ಹುಸೇನಪ್ಪ ಸಾಲಗುಂದಾ, ಶಿಕ್ಷಕ ಯಲ್ಲಪ್ಪ, ವಿರುಪಣ್ಣ ಚನ್ನಳ್ಳಿಿ, ಹನುಮಂತಪ್ಪ ಸಾಲಗುಂದಾ, ರಾಜಶೇಖರ ಉಪ್ಪಳ, ರಂಗನಾಥ ಭೋವಿ, ಪಂಪಾಪತಿ ಸೋಮಲಾಪುರ ಸೇರಿದಂತೆ ಅನೇಕರು ಇದ್ದರು.
ಭೋವಿ ಸಮಾಜದ ಮಕ್ಕಳಿಗೆ ವಸತಿ ಶಾಲೆ – ಅಶೋಕ ಉಮಲೂಟಿ

