ಸುದ್ದಿಮೂಲ ವಾರ್ತೆ ಸಿರವಾರ, ಜ.15:
ರಾಯಚೂರು ಜಿಲ್ಲಾ ಉತ್ಸವ ಹಲವಾರು ವರ್ಷಗಳ ನಂತರ ಅದ್ದೂರಿಯಾಗಿ ನಡೆಯಲಿದೆ ಇದರಲ್ಲಿ ಎಲ್ಲರೂ ಭಾಗವಹಿಸಿ ಎಂದು ತಹಶಿಲ್ದಾಾರರ ಅಶೋಕ ಪವಾರ ಹೇಳಿದರು.
ಅವರು ಬುಧವಾರ ಪಟ್ಟಣದ ತಹಶಿಲ್ದಾಾರರ ಕಚೇರಿಯಲ್ಲಿ ಗಣರಾಜ್ಯೋೋತ್ಸವ ಹಾಗೂ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಮಕ್ಕಳು, ಯುವಕರಿಗೆ, ಮಹಿಳೆಯರಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ಸೇರಿದಂತೆ ಎಲ್ಲಾ ಕಲೆಗಳ ಪ್ರದರ್ಶನ ವೇದಿಕೆಯ 3ದಿನಗಳ ಕಾಲ ರಾಯಚೂರು ಜಿಲ್ಲಾ ಉತ್ಸವ ಜ.29ರಿಂದ 31ರ ವರೆಗೆ ತುಂಬಾ ಅದ್ದೂರಿಯಾಗಿ ಜರುಗಲಿದೆ.
ಇಲ್ಲಿ ಊಟ, ಸಾರಿಗೆ, ಸಂಗೀತ, ನೃತ್ಯ, ನಾಟಕ, ಮನೋರಂಜನಾ ಕಾರ್ಯಕ್ರಮಗಳು,ಸಾಹಸ ಪ್ರದರ್ಶನ, ಸೇರಿದಂತೆ ಹಲವಾರು ಸಾಧನೆಯ ಪ್ರಸ್ತುತ ಪಡೆಸಲಿದ್ದಾ. ಹೆಲಿಕ್ಯಾಾಪ್ಟರ್ ಮೂಲಕ ರಾಯಚೂರು ವೀಕ್ಷಣೆ ಕಡಿಮೆ ದರದಲ್ಲಿ ಲಭ್ಯವಿದೆ. ಜ.26ರಂದು ಗಣರಾಜ್ಯೋೋತ್ಸವ ಪ್ರತಿವರ್ಷದಂತೆ ಈ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದರು.
ಸಭೆಯಲ್ಲಿ ತಾ.ಪಂ.ಇಓ ಶಶಿಧರಸ್ವಾಾಮಿ ಮಠದ್, ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ, ನೌಕರರ ಸಂಘದ ಅಧ್ಯಕ್ಷರಾದ ಆರ್ೀ ಮಿಯ್ಯಾಾ, ಎಸಿಡಿಪಿಓ ಮಂಜುಳಾ, ಉಪ ಖಜಾನೆಯ ಅಧಿಕಾರಿ ಶಂಕ್ರಮ್ಮ, ಎಇಇ ವಿಜಯಲಕ್ಷ್ಮಿಿ ಸೇರಿದಂತೆ ಅನೇಕರು ಇದ್ದರು.
ರಾಯಚೂರು ಉತ್ಸವದಲ್ಲಿ ಎಲ್ಲರೂ ಭಾಗವಹಿಸಿ- ಅಶೋಕ

