ಸುದ್ದಿಮೂಲ ವಾರ್ತೆ
ಮೈಸೂರು, ನ.12: ವಿಧಾನಸಭೆಯಲ್ಲಿ 66 ಬಿಜೆಪಿಯ ಜನ ಶಾಸಕರಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ, ಮಲ್ಲೇಶ್ವರ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಆಗಿದೆ. ಜೆಡಿಎಸ್ ಜೊತೆ ಮೈತ್ರಿ ಆಗಿರಬಹುದು. ಅಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಬೇಕು ಅಂತಾ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕ ಮಾಡಿರುವುದನನ್ನು ನಾನು ಹೃದಯ ತುಂಬಿ ಸ್ವಾಗತಿಸುವೆ. ಯುವಕ ಇದ್ದಾರೆ. ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಾರೆ. ಸಾಕಷ್ಟು ಜನ ಆಕಾಂಕ್ಷಿಗಳಿದ್ದರು, ಅದರಲ್ಲಿ ಹಿರಿಯರು ಇದ್ದರು. ಆದರೆ ಕಿರಿಯರಿಗೆ ಕೊಡಬಾರದು ಅಂತೇನಿಲ್ಲ.
ವಿ ಸೋಮಣ್ಣ ಪ್ರಭಾವಿ ನಾಯಕರು. ಅವರಿಗೆ ಎಲ್ಲಾ ರೀತಿಯ ಅರ್ಹತೆ ಇತ್ತು.ಸಿ ಟಿ ರವಿಯವರಿಗೂ ಪಕ್ಷ ಅನೇಕ ಹುದ್ದೆಗಳನ್ನು ನೀಡಿದೆ. ಒಂದೇ ಹುದ್ದೆಯನ್ನು ಎಲ್ಲರಿಗೂ ಕೊಡಲಿಕ್ಕೆ ಆಗಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ನವರಿಂದಲೇ ಪತನ
ಲೋಕಸಭಾ ಚುನಾವಣೆ ಬಳಿಕ ನಾವೇನು ಸರ್ಕಾರ ಪತನ ಮಾಡಲ್ಲ.ಅವರ ಪಕ್ಷದವರಿಂದಲೇ ಸರ್ಕಾರ ಬೀಳಲಿದೆ. ಅವರ ಪಕ್ಷದಲ್ಲೇ ಸಾಕಷ್ಟು ಒಡಕುಗಳಿವೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ದಂಡೆ ಇದೆ. ನಾನೂ ಸಿಎಂ ಆಗ್ತೀನಿ ಅಂತ ಎಲ್ಲರು ಹೇಳ್ತಿದಾರೆ. ಅವರ ಪಕ್ಷದಲ್ಲಿ ಅಸಮಾಧಾನಿತರು ಇದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ಎಲ್ಲರು ಸೇರಿ ಉಡೀಸ್ ಮಾಡ್ತಿದ್ದಾರೆ. ಅವರೇ ಆಯ್ಕೆ ಮಾಡಿಕೊಂಡ ಮಂತ್ರಿಗಳು ಅವರ ಮಾತನ್ನೇ ಕೇಳುತ್ತಿಲ್ಲ. ಅಂತವರನ್ನು ಸಚಿವ ಸಂಪುಟದಿಂದ ಆಚೆ ಹಾಕಿದರೆ ಒಳಿತು ಎಂದು ಸಿಎಂ ಸಿದ್ದರಾಮಯ್ಯರಿಗೆ ಸಲಹೆ ನೀಡಿದರು.