ಸುದ್ದಿಮೂಲವಾರ್ತೆ
ಕೊಪ್ಪಳ ಮೇ 23: ಕರೆಂಟ್ ಬಿಲ್ ಬಾಕಿ ಕಟ್ಟದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೋದ ಜೆಸ್ಕಾಂನ ಇಬ್ಬರು ಲೈನ್ ಮ್ಯಾನ್ ಗಳ ಮೇಲೆ ಹಲ್ಲೆ ಮಾಡಿದ ಘಟನೆ ಕೂಕನಪಳ್ಳಿಯಲ್ಲಿ ಮಂಗಳವಾರ ಜರುಗಿದೆ.
ಹಲ್ಲೆ ಮಾಡಿದ ಚಂದ್ರಶೇಖರಯ್ಯ ಹಿರೇಮಠ. ಹಲ್ಲೆಗೈದ ಆರೋಪಿಯನ್ನು ಮುನಿರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಜೆಸ್ಕಾಂ ಮುನಿರಾಬಾದ ಉಪವಿಭಾಗಕ್ಕೆ ಒಳಪಡುವ ಕೂಕನಪಳ್ಳಿ ಗ್ರಾಮದಲ್ಲಿ ಚಂದ್ರಶೇಖರಯ್ಯ ಹಿರೇಮಠ ಅವರ ವಿದ್ಯುತ್ ಬಾಕಿ 9990 ರೂ. ಬಾಕಿ ಇತ್ತು.ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೋದ ಲೈನ್ ಮ್ಯಾನ್ ಮಂಜುನಾಥ ಹಾಗೂ ಶಾಮೀದ್ ಅಲಿ ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೈದು ಚಪ್ಪಲಿ ಒಗೆದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.
ಘಟನೆ ಖಂಡಿಸಿ ಮುನಿರಾಬಾದ್ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಹರ್, ತಿರುಮಲೈ, ಹಾಗೂ ಸಂತೋಷ್ ಕುಮಾರ್ , ಮುನಿರಾಬಾದ್ ಉಪ ವಿಭಾಗದ AEE ಹಾಗೂ ನೌಕರರು ಮುನಿರಾಬಾದ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.