ಸುದ್ದಿಮೂಲ ವಾರ್ತೆ
ಮಾಲೂರು, ಜು 24 : ಅಕ್ರಮ ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳ ಬಳಕೆ ಕಾನೂನು ಬಾಹಿರದ ಜತೆಗೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅಬಕಾರಿ ಉಪ ಅಧೀಕ್ಷಕರಾದ ಶೈಲಾ ಅವಜಿ ತಿಳಿಸಿದರು.
ಅಬಕಾರಿ ಜಿಲ್ಲಾ ಉಪ ಆಯುಕ್ತರಾದ ರಮೇಶ್ ಕುಮಾರ್ ರವರ ಆದೇಶದಂತೆ ಮಾಲೂರು ವಲಯದ ವ್ಯಾಪ್ತಿಯ ಮಾಲೂರು ಪಟ್ಟಣದ ಗಾಂಧಿವೃತ್ತ ಹಾಗೂ ಅಂಬೇಡ್ಕರ್ ಕಾಲೋನಿ, ಸೇರಿದಂತೆ ಹಲವು ಕಡೆ ಕಾಲೋನಿ ಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳಿಂದಾಗಿ ದುಷ್ಟ ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಾನೂನು ರೀತಿ ಅಪರಾಧವಾಗುತ್ತದೆ. ಮಾದಕ ವಸ್ತುಗಳನ್ನು ಸೇವೆನೆ ಮಾಡುವುದರಿಂದ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಅನಾರೋಗ್ಯದಿಂದ ಸಾವು ಸಂಭವಿಸುತ್ತದೆ. ಈ ತರಹದ ಘಟನೆಗಳಿಂದ ತಮ್ಮನ್ನೇ ನಂಬಿರುವ ಕುಟುಂಬಸ್ಥರು ಬೀದಿಗೆ ಬರುವ ಪರಿಸ್ಥಿತಿ ಸಂಭವಿಸುತ್ತದೆ. ಆದ್ದರಿಂದ, ಮಾದಕ ವಸ್ತುಗಳಿಂದ ಆದಷ್ಟು ದೂರವಿರಿ ತಮ್ಮ ಮಕ್ಕಳನ್ನು ಇಂತಹ ಚಟಗಳ ಬಗ್ಗೆ ಜಾಗೃತಿಯಿಂದ ಇರುವಂತೆ ಹೇಳಿದರು.
ಅಕ್ರಮ ಮಧ್ಯ ಮಾರಾಟ ಹಾಗೂ ಮಾದಕ ವಸ್ತುಗಳ ಬಳಕೆ ಕಾನೂನು ಭಾಹಿರವಾಗಿದ್ದು, ಇಂತಹ ಅಕ್ರಮಗಳ ಮೇಲೆ ಅಬಕಾರಿ ಇಲಾಖೆಯಿಂದ ದಾಳಿ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಲೂರು ವಲಯ ಅಬಕಾರಿ ನೀರಿಕ್ಷಕಿ ಪಿ ಕೆ ಶಶಿಕಲಾ, ಉಪನೀರಿಕ್ಷಕರಾದ ಜಿ ಎಸ್ ಭರತ್, ಕಾನ್ಸಸ್ಟೆಬಲ್ ವಿ ಗಜೇಂದ್ರಕುಮಾರ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.