ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ.22:ರೈತರ ಪಂಪ್ಸೆಟ್ಗಳಿಗೆ ಐದು ಗಂಟೆ ನಿರಂತರವಾಗಿ ವಿದ್ಯುತ್ ಕೊಡುತ್ತಿರುವುದನ್ನು ಹಗಲು ಮತ್ತು ರಾತ್ರಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಬೆಸ್ಕಾಂ ಕಾರ್ಯಪಾಲಕ ಎಂಜೀನಿಯರ್ ಪ್ರಭು ಅವರಿಗೆ ಮನವಿ ಸಲ್ಲಿಸಿದರು.
ನಗರದ ಬೆಸ್ಕಾಂ ಇಲಾಖೆಯ ಕಚೇರಿಯಲ್ಲಿ ಗ್ರಾಹರ ಕುಂದು ಕೊರತೆ ಸಂವಾದ ಸಭೆ ಹಾಗೂ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈಗಾಗಲೇ ಅಂತರ್ಜಲ ಕುಸಿದಿರುವ ಪರಿಣಾಮ ಬಹುತೇಕ ರೈತರ ಕೊಳವೆ ಬಾವಿಗಳಿಂದ ಒಂದರಿಂದ ಮೂರು ಗಂಟೆ ನೀರು ಹೊರತೆಗೆಯಬಹುದಾಗಿದೆ. ನಿರಂತರ ವಿದ್ಯುತ್ ನೀಡುವ ಬದಲಿಗೆ ಎರಡು ಪಾಲಿಗಳಲ್ಲಿ ವಿದ್ಯುತ್ ನೀಡಿದ್ದಲ್ಲಿ ರೈತರಿಗೆ ಉಪಯುಕ್ತವಾಗುತ್ತದೆ. ರಾತ್ರಿ ವೇಳೆ ನಿರಂತರ ವಿದ್ಯುತ್ ನೀಡುವುದರಿಂದ ತಾಂತ್ರಿಕ ಸಮಸ್ಯೆ ತಲೆದೋರಿದರೆ ಅದನ್ನು ಸರಿಪಡಿಸುವ ಮೆಕ್ಯಾನಿಕ್ಗಳು ರಾತ್ರಿ ವೇಳೆ ಬರುವುದಿಲ್ಲ. ಹಗಲಿನಲ್ಲಿ ವಿದ್ಯುತ್ ನೀಡುವಲ್ಲಿ ರಾತ್ರಿ ವೇಳೆ ಕಳ್ಳತನಗಳು ಹೆಚ್ಚಾಗಿವೆ.
ರೈತರಿಗೆ ಏಳು ಗಂಟೆ ವಿದ್ಯುತ್ ನೀಡಬೇಕು ಮತ್ತು ಅದನ್ನು ಎರಡು ಪಾಳಿಯಲ್ಲಿ ನೀಡಬೇಕು. ಪಾಲಿ ಹೌಸ್ಗಳಲ್ಲಿ ಹಗಲಿನಲ್ಲಿ ಶಾಖ ಹೆಚ್ಚಿರುವುದರಿಂದ, ಹಗಲಿನಲ್ಲಿಯೂ ಕೆಲ ಗಂಟೆಗಳು ವಿದ್ಯುತ್ ಅಗತ್ಯವಿದೆ ಎಂದು ರೈತರು ವಿವರಿಸಿದ್ದಾರೆ.
ಶಿಡ್ಲಘಟ್ಟ ಬೆಸ್ಕಾಂ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರು ಹಾಗೂ ಸದಸ್ಯರು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಭು ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಶ್ವತ್, ಮುನಿನಂಜಪ್ಪ,ಕೆಂಪಣ್ಣ, ದೇವರಾಜ್,ಮುನೇಗೌಡ, ಬಸಪ, ಕೃಷ್ಣಪ್ಪ ಇನ್ನು ಮುಂತಾದವರು ಹಾಜರಿದ್ದರು