ಸುದ್ದಿಮೂಲ ವಾರ್ತೆ
ಆನೇಕಲ್,ಜು.29: ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರಿಗೆ ನೆಚ್ಚಿನ ತಾಣ. ಅದರಲ್ಲೂ ಪ್ರಾಣಿಪ್ರಿಯರು ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಾರೆ. ಅದು ಮಾತ್ರವಲ್ಲದೆ ಮನುಷ್ಯನಂತೆ ಪ್ರಾಣಿಗಳಲ್ಲಿ ಸಹ ಜೀವನಶೈಲಿಯ ಒಂದು ಕೌತುಕ ಸಾಮಾನ್ಯ ಕಾಡು ವಾಸ ಮಾಡುವ ಮೃಗಗಳು ಹುಲಿ ಸಿಂಹ ಅವುಗಳ ಜೀವನಶೈಲಿ ಹೇಗೆ ಎಂಬುದರ ಬಗ್ಗೆ ಇಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು.
ಒಂದೆಡೆ ಮಕ್ಕಳಿಗೆ ಹುಲಿ ವೇಷಭೂಷಣ, ಮುಖಕ್ಕೆ ಪೇಂಟಿಂಗ್. ಇನ್ನೊಂದು ಕಡೆ ಟೈಗರ್ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಕೂಗುಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ.
ಅಂತರಾಷ್ಟ್ರೀಯ ಹುಲಿ ದಿನಚರಣೆ ಅಂಗವಾಗಿ ಎಸ್.ಓ.ಎಸ್. ಮತ್ತು ಲಯನ್ಸ್ ಕ್ಲಬ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಹುಲಿಗಳ ಜೀವನಶೈಲಿಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಇನ್ನು ಕಾಡಿನಲ್ಲಿ ಮತ್ತು ನಾಡಿನಲ್ಲಿ ಹುಲಿಗಳನ್ನ ಪತ್ತೆಹಚ್ಚವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ತಿಳಿಸಲಾಯಿತು.
ಪ್ರಮುಖವಾಗಿ ಹುಲಿಗಳನ್ನು ಪತ್ತೆ ಹಚ್ಚಲು ಪ್ರಮುಖವಾಗಿ ಹೆಜ್ಜೆ ಗುರುತು ಲದ್ದಿ ಕ್ಯಾಮೆರಾ ಟ್ರಾಫಿಂಗ್ ಮೂಲಕ ಹುಲಿಗಳನ್ನು ಪತ್ತೆ ಹಚ್ಚುವಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗಳು ಮಾಹಿತಿ ಹಂಚಿಕೊಂಡರು. ಇನ್ನು ಕಾಡಿನ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ಹುಲಿಗಳು ಮಹತ್ತರ ಪಾತ್ರವನ್ನು ವಹಿಸುತ್ತಿವೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ನ ಸೌಮ್ಯಾ ಮಾತನಾಡಿ, ದೇಶದ್ಯಾಂತ ಹುಲಿಗಳ ಸಂಖ್ಯೆ 3000 ಇದ್ದು ಅದರಲ್ಲೂ ಕರ್ನಾಟಕದ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮಿಥನ್ ಮತ್ತು ಅನುಷ್ಕಾ ಎಂಬ ಎರಡು ಹುಲಿಗಳು ವಾಸ ಮಾಡುತ್ತಿವೆ.. ಇನ್ನು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ಪ್ರಾಣಿಗಳಲ್ಲೂ ಸಹ ಭಯ ಇಲ್ಲದೆ ಸಹಜೀವಿಯಾಗಿ ನೋಡ್ಕೋಬೇಕು. ಅವುಗಳ ಪೀಳಿಗೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.