ಸುದ್ದಿಮೂಲ ವಾರ್ತೆ ಮಾನ್ವಿ, ಡಿ.1:
ಲೊಯೋಲಾ ಆರೋಗ್ಯ ಕೇಂದ್ರ ಜಾಗೀರ ಪನ್ನೂರು, ಲೊಯೋಲಾ ಸಮಾಜ ಕೇಂದ್ರ ಮಾನ್ವಿಿ, ಲೊಯೋಲಾ ಶಿಕ್ಷಣ ಸಂಸ್ಥೆೆಗಳು ಮಾನ್ವಿಿ ಹಾಗೂ ತಾಲೂಕು ಆಸ್ಪತ್ರೆೆ ಮಾನ್ವಿಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಮಾನ್ವಿಿ ಪಟ್ಟಣದ ಬಸ್ ನಿಲ್ದಾಾಣದಲ್ಲಿ ಸಾರ್ವಜನಿಕರಿಗೆ ಏಡ್ಸ್ ಜಾಗೃತಿ ಮೂಡಿಸಲಾಯಿತು.
ಐಸಿಟಿಸಿ ಕೌನ್ಸಿಿಲರ್ ರಾಜೇಶ್ವರಿ ಮಾನ್ವಿಿ ಮತ್ತು ಸಿ.ಲೀನಾ ಾಯಸ್ ಜಾಗೀರಪನ್ನೂರು ಅವರು ಮಾತನಾಡಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಗೌರವದಿಂದ ಜೀವನ ನಡೆಸುವ ಹಕ್ಕು ಇದೆ. ಅದರಂತೆ ಏಡ್ಸ್ ಪೀಡಿತರಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿಿದೆ. ಏಡ್ಸ್ ಪೀಡಿತರ ಬಗ್ಗೆೆ ಜಾಗೃತಿ ಮತ್ತು ಅವರನ್ನು ಕತ್ತಲೆಯಿಂದ ಬೆಳಕಿಗೆ ತರುವ ಕಾರ್ಯಕ್ರಮವಾಗಬೇಕು. ಸಮಾಜ ಅವರಿಗೆ ಬೆಲೆ ಕೊಡಬೇಕು ಯಾವುದೇ ಕಾರಣಕ್ಕೂ ಅವರನ್ನು ತುಚ್ಚವಾಗಿ ಮತ್ತು ಅಸಹ್ಯವಾಗಿ ನೋಡಬಾರದು ಅವರು ನಮ್ಮಂತೆ ಎಂಬ ದೃಷ್ಟಿಿಯಿಂದ ಸಮಾನತೆ, ಸಭ್ಯತೆಯಿಂದ ನಡೆದುಕೊಳ್ಳಬೇಕು. ಏಡ್ಸ್ ಅಥವಾ ಹೆಚ್.ಐ.ವಿ ಜೀವನದಿಂದ ಮೃತ್ಯು ಬರುತ್ತದೆ ಎಂಬ ಭಯವನ್ನು ಯಾರೂ ಮೂಡಿಸಬಾರದು.
ಈ ರೋಗಕ್ಕೆೆ ತುತ್ತಾಾದವರಿಗೆ ಸಮರ್ಪಕವಾಗಿ ಆರೋಗ್ಯ ತಪಾಸಣೆ ಮಾಡಿ ಸಕಾಲಕ್ಕೆೆ ಚಿಕಿತ್ಸೆೆ ನೀಡಿದರೆ ಅವರು ಸಹ ಬಹಳ ವರ್ಷಗಳ ಕಾಲ ಬದುಕಲು ಅವಕಾಶವಿದೆ. ಹೆಚ್.ಐ.ವಿ ಪೀಡಿತ ರೋಗಿಗಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇವರಿಗೆ ಸರ್ಕಾರ ಏಡ್ಸ್ ರೋಗ ನಿಯಂತ್ರಣ ಮಾಡುವಲ್ಲಿ ಹೆಚ್ಚಿಿನ ಆಸಕ್ತಿಿಯನ್ನು ವಹಿಸಿ ಅವರಲ್ಲಿ ಜಾಗೃತಿ ಮೂಡಿಸುತ್ತಿಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಚಿನ್ನಿಿ ಬಾಬು, ಲೊಯೋಲಾ ಸಮಾಜ ಸೇವಾ ಕೇಂದ್ರದ ಸಹಾಯಕ ನಿರ್ದೇಶಕರಾದ ಾ.ಜಾರ್ಜ್ ಪಿಂಟೋ, ಆರೋಗ್ಯ ಕೇಂದ್ರದ ಜಾಗೀರ ಪನ್ನೂರಿನ ಸಿಸ್ಟರ್ ಲೀನಾ ಾಯಸ್, ಐಸಿಟಿಸಿ ಲ್ಯಾಾಬ್ ಟೆಕ್ನಿಿಷಿಯನ್ ಗಿರೀಶ್ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಲೊಯೋಲಾ ಸೇವಾ ಕೇಂದ್ರದಿಂದ ಜಾಗೃತಿ

