ಸುದ್ದಿಮೂಲ ವಾರ್ತೆ
ಆನೇಕಲ್, ಆ.6 : ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಸ್ಮಶಾನ ಎಂದರೆ ಅಲ್ಲಿ ಭೂತ ಪ್ರೇತಾತ್ಮ ಭಯ ಕಾಡುತ್ತಿರುತ್ತದೆ. ಅಂತಹ ಮೂಢನಂಬಿಕೆ ಮತ್ತು ಮೌಢ್ಯಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಮಶಾನದಲ್ಲಿ ಬಾಡೂಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆನೇಕಲ್ ತಾಲೂಕಿನ ದೊಡ್ಡ ಹಾಗಡೆ ಕೃಷ್ಣಪ್ಪ ಎಂಬವರು ಶ್ಮಸಾನಣದಲ್ಲಿ ಬಾಡೂಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಸ್ಮಶಾನದಲ್ಲಿ ಬಾಬಾ ಸಾಹೇಬರ ಫೋಟೋ ಇಟ್ಟು ಪೂಜೆ ಸಲ್ಲಿಸಿ, ಸ್ಮಶಾನದಲ್ಲಿ ಬಾಡೂಟವನ್ನು ಸವಿದರು. ಕೃಷ್ಣಪ್ಪ ಹೊಸ ಕಾರು ಖರೀದಿ ಮಾಡಿದ್ದಕ್ಕೆ ಮೌಡ್ಯವನ್ನು ಧಿಕ್ಕರಿಸುವ ಕಾರಣಕ್ಕಾಗಿ ಸ್ಮಶಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮನುಷ್ಯ ಎಷ್ಟೇ ಕೋಟ್ಯಾಧಿಪತಿಯಾಗಿದ್ದರು, ಕಡೆಗೆ ಸ್ಮಶಾನ ಸೇರುವುದು. ಅದನ್ನು ಧಿಕ್ಕರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಮೌಢ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನಾನು ಮಾಡುತ್ತಿದ್ದೀನಿ ಎಂದು ಕೃಷ್ಣಪ್ಪ ತಿಳಿಸಿದರು.
ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಾವಣ ಮಾತನಾಡಿ, ಮೌಡ್ಯದಿಂದ ಹಿಡಿದು ವಿಜ್ಞಾನದ ಕಡೆಗೆ ಸಾಗಬೇಕು. ಅದನ್ನು ಮೊಟ್ಟಮೊದಲಿಗೆ ಸಾರಿದವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ. ಅದರ ಮುಂದುವರಿದ ಭಾಗವಾಗಿ ಮೂಢನಂಬಿಕೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಕಾರ್ಯಕ್ರಮದ ಅಂಗವಾಗಿ ಬಂದ ಅಥಿತಿಗಳಿಗೆ ಸ್ಮಶಾನದಲ್ಲಿಯೇ ಮಾಂಸಹಾರಿ ಉಪಹಾರವನ್ನು ನೀಡಿ ಉಪಚಾರ ಮಾಡಲಾಯಿತು.