ಸುದ್ದಿಮೂಲ ವಾರ್ತೆ ರಾಯಚೂರು, ಡಿ.05:
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿಿರುವ ಹಿನ್ನೆೆಲೆಯಲ್ಲಿ ಜಾಗೃತಿ ಕಾರ್ಯಾಕ್ರಮಗಳು ಪ್ರತಿಯೊಬ್ಬರಿಗೂ ತಲುಪುವಂತಾಗುವ ದಿಸೆಯಲ್ಲಿ ಕಾರ್ಯಗಾರ ಆಯೋಜಿಸಲಾಗಿದೆ. ಸೈಬರ್ ಅಪರಾಧ ತಡೆಯಲು ಮುನ್ನೆೆಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ಡಿಸೆಂಬರ್ 05 ಶುಕ್ರವಾರ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ ಜಗಜ್ಯೋೋತಿ ಬಸವೇಶ್ವರ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ-ಕಾಲೇಜುಗಳ ಪ್ರಾಾಂಶುಪಾಲರು ಮತ್ತು ಶಿಕ್ಷಕರಲ್ಲಿ ಸೈಬರ್ ಅಪರಾಧಗಳ ಬಗ್ಗೆೆ ಜಾಗೃತಿ ಕಾರ್ಯಾಗಾರಕ್ಕೆೆ ಚಾಲನೆ ನೀಡಿ ಅವರು ಮಾತನಾಡಿದರು.
ಟೆಕ್ನಾಾಲಜಿ ಎಷ್ಟೇ ಬೆಳೆದಿದ್ದರೂ ಅಪರಾಧಗಳ ಸಂಖ್ಯೆೆಯು ಹೆಚ್ಚಾಾಗುತ್ತಲೇ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರು ಕನಿಷ್ಟ 10 ಸೈಬರ್ಅಪರಾಧಗಳ ಬಗ್ಗೆೆ ಜನಕ್ಕೆೆ ಮನವರಿಕೆ ಮಾಡಿದಲ್ಲಿ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆೆ ಕಡಿಮೆ ಮಾಡಬಹುದಾಗಿದೆ ಎಂದು ಸಲಹೆ ಮಾಡಿದರು.
ಈ ವೇಳೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಮಾತನಾಡಿ, 21ನೇ ಶತಮಾನವು ಟೆಕ್ನಾಾಲಜಿಗೆ ಹೆಸರಾಗಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾಣುತ್ತಿಿದೆ. ಆದಾಗ್ಯೂ ಅಪರಾಧಗಳ ಸಂಖ್ಯೆೆಯು ಹೆಚ್ಚುತ್ತಿಿವೆ.
ಸೈಬರ್ ಕ್ರೈಂಗೆ ಹಿರಿಯ ನಾಗರಿಕರನ್ನು ಹೆಚ್ಚಾಾಗಿ ಗುರಿಯಾಗಿಸಲಾಗುತ್ತದೆ ಎಂದು ತಿಳಿಸಿದರು.
ಶಾಲಾ-ಕಾಲೇಜು ಹಾಗೂ ಹಾಸ್ಟೆೆಲ್ ವಿದ್ಯಾಾರ್ಥಿಗಳು ಎಚ್ಚರದಿಂದ ಮೊಬೈಲ್ ಬಳಕೆ ಮಾಡಬೇಕು. ಸೈಬರ್ ಕ್ರೈಂ ಬಗ್ಗೆೆ ವಿದ್ಯಾಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಾಮ ಪಂಚಾಯತ್ ವ್ಯಾಾಪ್ತಿಿಯಲ್ಲಿ ಪಂಚಾಯತ್ ಅಭಿವೃದ್ಧಿಿ ಅಧಿಕಾರಿಗಳ ಮೂಲಕ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ರಾಯಚೂರು ಕಂದಾಯ ವಿಭಾಗದ ಸಹಾಯಕ ಆಯುಕ್ತ ಗಜಾನನ ಬಾಳೆ ಮಾತನಾಡಿ, ಕೆಲ ವ್ಯಕ್ತಿಿಗಳು ಬೇರೊಬ್ಬರ ಅಸಾಹಕತೆಯನ್ನೇ ದುರ್ಬಳಕೆ ಮಾಡಿಕೊಂಡು ಸೈಬರ್ ಕ್ರೈಂಗೆ ಗುರಿಪಡಿಸುತ್ತಾಾರೆ. ಯಾರೇ ಆಗಲಿ ಆಸೆ-ಆಕಾಂಕ್ಷೆೆಗಳಿಗೆ ಒಳಗಾಗಬಾರದು ಎಂದು ತಿಳಿಸಿದರು.
ಸೈರ್ಬ ಕ್ರೈಂಗೆ ನಿವೃತ್ತ ಹಂತದ ಅಧಿಕಾರಿಗಳು ಹಾಗೂ ನಿವೃತ್ತಿಿ ಹೊಂದಿದ ಅಧಿಕಾರಿಗಳು ಹೆಚ್ಚಾಾಗಿ ಬಲಿಯಾಗುತ್ತಾಾರೆ ಎಂಬ ಕಟುವಾಸ್ತವವನ್ನು ಸಾರ್ವಜನಿಕರು ಅರಿಯಬೇಕು ಎಂದು ತಿಳಿಸಿದರು.
ಟೆಲಿಪೋನ್ ಎಂದು, ಪಾರ್ಸಲ್, ಕೋರಿಯರ್ ಹೆಸರಿನಲ್ಲಿ ಕರೆಮಾಡಿ ಕೆಲವರು ವಂಚನೆ ಮಾಡುತ್ತಿಿದ್ದು, ಎಚ್ಚರದಿಂದಿರಬೇಕು.
ಕಾನೂನು ಬಾಹಿರ ವಸ್ತುಗಳನ್ನು ಹೊರದೇಶಕ್ಕೆೆ ರವಾನೆ ಮಾಡಿದ್ದೀರಿ. ಅದಕ್ಕಾಾಗಿ ನಿಮಗೆ ವಿಡಿಯೊ ಕಾಲ್ ಮೂಲಕ ವಿಚಾರಣೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ಪಡೆದುಕೊಂಡು ವಂಚನೆ ಮಾಡುವವರ ಬಗ್ಗೆೆ ಸಹ ಎಚ್ಚರವಾಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ರಿಮ್ಸ್ ನಿರ್ದೇಶಕರಾದ ಡಾ.ರಮೇಶ ಬಿ.ಕೆ., ಕೃಷಿ ವಿವಿಯ ವಿಸ್ತರಣಾಧಿಕಾರಿ ಡಾ.ಎ.ಆರ್.ಕುರಬರ್, ನಿವೃತ್ತ ಅಧಿಕಾರಿಗಳಾದ ಪರಮವೀರ್, ಮಹಾದೇವಪ್ಪ ಹಾಗೂ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕಾಲೇಜ್ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾಾರ್ಥಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಸೈಬರ್ ಅಪರಾಧ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಜಿಲ್ಲಾ ಎಸ್ಪಿ ಎಂ.ಪುಟ್ಟಮಾದಯ್ಯ ಸಲಹೆ

