ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ.20 : ತಾಲೂಕಿನ ದೂಡ್ಡಗಟ್ಟಿಗನಬ್ಬಿ ಗ್ರಾಮ ಪಂಚಾಯ್ತಿಯಲ್ಲಿ ಆಯುಧ ಪೂಜೆಯನ್ನು ಅಧ್ಯಕ್ಷ ಸುರೇಶ್ ಮತ್ತು ಉಪಾಧ್ಯಕ್ಷೆ ರೂಪ ನೆರವೇರಿಸಿದರು.
ಅಧ್ಯಕ್ಷ ಸುರೇಶ್ ಮಾತನಾಡಿ, ಈ ವರ್ಷ ಮುಂದಿನ ದಿನಗಳಲ್ಲಾದರೂ ಮಳೆಯಾಗಿ ಉತ್ತಮ ಬೆಳೆಯಾಗಲಿ. ತಾಲೂಕಿನ ಜನತೆ ನೆಮ್ಮದಿಯಿಂದ ಇರಲಿ, ನಾಡಿನ ಜನತೆಗೆ ದುರ್ಗಾ ಮಾತೆ ಸಕಲ ರೀತಿಯಲ್ಲಿ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿಗೆ ಪ್ಯಾಂಟು ಷರ್ಟ್, ಮಹಿಳೆಯರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಿ ಸ್ವೀಟ್ ಹಂಚಿದರು.
ಪಿಡಿಓ ಪ್ರಸಾದ್ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರುಗಳು ಸಿಬ್ಬಂದಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.