ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಡಿ.20:
ಪಟ್ಟಣದ ರಾಯಚೂರು ರಸ್ತೆೆಯಲ್ಲಿರುವ ಲಕ್ಷ್ಮೀದೇವಿ ದೇವಸ್ಧಾಾನ ಬಳಿ ಶ್ರೀ ಅಯ್ಯಪ್ಪಸ್ವಾಾಮಿ ದೇವಸ್ಥಾಾನದಲ್ಲಿ ಚಾರಿಟೇಬಲ್ ಟ್ರಸ್ಟ ಹಾಗೂ ಶ್ರೀ ಅಯ್ಯಪ್ಪ ಸ್ವಾಾಮಿ ಭಕ್ತ ಮಂಡಳಿಯಿಂದ ಮಹಾ ಗಣಪತಿ ಹೋಮ ಮಂಡಲ ಪೂಜೆ, ಉತ್ಸವ ಮೂರ್ತಿ ಮೆರವಣಿಗೆ ಸೇರಿ ವಿವಿಧ ಧಾರ್ಮಿಕ ಸೇವೆಗಳು ಡಿ,23ರಂದು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಮನೋಹರರೆಡ್ಡಿಿ ಮುನ್ನೂರು ಹೇಳಿದರು.
ಪಟ್ಟಣದ ಪತ್ರಿಿಕಾ ಭವನದ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು ಡಿ,23 ರಂದು ಕೇರಳ ರಾಜ್ಯದ ಶ್ರೀ ತಂತ್ರಿಿ ರತ್ನ ವೇದ ಭೂಷಣ ಪ್ರಶಾಂತ ನಂಬೂದರಿ ಶಬರಿಮಲೈ ಅವರಿಂದ ದೇವಸ್ಥಾಾನದಲ್ಲಿ ಎಲ್ಲಾಾ ದೇವರುಗಳಿಗೆ ವಿಶೇಷ ಹೋಮ ಪೂಜೆ ಕಾರ್ಯಕ್ರಮ ಪ್ರತಿವರ್ಷದಂತೆ ಮಂಡಲ ಪೂಜೆ, ಬೆಳಿಗ್ಗೆೆ 6ಗಂಟೆಯಿಂದ 1 ಗಂಟೆಯವರೆಗೆ ಹೋಮ ಹವನ, ನಂತರ ಈಶ್ವರ ದೇವಸ್ಥಾಾನದಿಂದ ಶ್ರೀಅಯ್ಯಪ್ಪಸ್ವಾಾಮಿ ದೇವಸ್ಥಾಾನದವರೆಗೆ ಅಯ್ಯಪ್ಪಸ್ವಾಾಮಿ ದೇವಸ್ಥಾಾನದವರೆಗೆ ಉತ್ಸವಮೂರ್ತಿ ಭಾವಚಿತ್ರ ಮೆರವಣಿಗೆ ಮಧ್ಯಾಾಹ್ನ 1ರಿಂದ 3ಗಂಟೆವರೆಗೆ ಅನ್ನಸಂತ ರ್ಪಣೆ, ಸಾಯಕಾಂಲ 6ಗಂಟೆಗೆ ದೀಪೋತ್ಸವ ಮತ್ತು ಶ್ರೀಅಯ್ಯಪ್ಪ ಸ್ವಾಾಮಿ ಮಾಲೆಧಾರಿಗಳಿಂದ 18 ಮೆಟ್ಟಿಿಲು ಪಡಿಪೂಜೆ ಹಮ್ಮಿಿಕೊಳ್ಳಲಾಗಿದೆ. ಡಿ,8ರಂದು ಗುರುಸ್ವಾಾಮಿಗಳಿಂದ ಅಯ್ಯಪ್ಪ ಸ್ವಾಾಮಿ ಮಾಲೆಧಾ ರಿಗಳಿಗೆ ತುಪ್ಪದಕಾಯಿ ಇರುಮುಡಿ ಕಟ್ಟುತ್ತಾಾರೆ. ಅದೇ ದಿನ ಸಾಯಂಕಾಲ ಕೇರಳ ರಾಜ್ಯದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಾಮಿಗೆ ತೆರಳುತ್ತಾಾರೆ ಭಕ್ತಾಾದಿಗಳು ಸಾರ್ವ ಜನಿಕರು ದೇವಸ್ಥಾಾನಕ್ಕೆೆ ಆಗಮಸಿ ಅಯ್ಯಪ್ಪ ಸ್ವಾಾಮಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ವೇಳೆ ಈರಣ್ಣ ಗುರುಸ್ವಾಾಮಿ, ಸಿದ್ರಾಾಮು, ಗುರುಸ್ವಾಾಮಿ ನಗರಗುಂಡ, ದೇವಸ್ಥಾಾನದ ವ್ಯವಸ್ಥಾಾಪಕ ರಾಜೇಶ್ ಮಾಣಿಕ್ ಇದ್ದರು.

