ಸುದ್ದಿಮೂಲ ವಾರ್ತೆ
ತಿಪಟೂರು, ಜು 19 : ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಗ್ರಾ.ಪಂನ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜಿಲ್ಲಾ ಜಯಕರ್ನಾಟಕ ಜನಪರವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಬೆನ್ನಾಯಕನಹಳ್ಳಿ ಬಿ.ಬಿ.ಬಸವರಾಜು ಅಧ್ಯಕ್ಷರಾಗಿ ಚುನಾಯಿತರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಸದಸ್ಯರುಗಳ ಸಹಕಾರದಿಂದ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸದಾಸಿದ್ದ ಹಾಗೂ ಮತ ನೀಡಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರುಗಳಿಗೆ ಹಾಗೂ ಮುಖಂಡರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ಪ್ರಕಾಶ್, ಮುಖಂಡ ನಿಖಿಲ್ ರಾಜ್, ಬೆನ್ನಾಯಕನಹಳ್ಳಿ ಪಿಎಸಿಬಿಎನ್ ಮೋಹನ್ ಕುಮಾರ್, ಉಪಾಧ್ಯಕ್ಷ ಜವರಪ್ಪ, ಮುಖಂಡರಾದ ದಿವಾಕರ ಸ್ವಾಮಿ, ಸದಸ್ಯರಾದ ಅಯ್ಯಣ್ಣ, ನರಸಿಂಹಯ್ಯ, ಸ್ವಾಮಿ, ಮಮತಾ, ಬನಶಂಕರಮ್ಮ, ಸಂಘಟನೆ ಪದಾಧಿಕಾರಿಗಳಾದ ರವಿ, ಶ್ವೇತಕುಮಾರ್, ಲೋಕೇಶ್, ರೋಹನ್ ರಾಜ್, ಭೂಷಣ್, ಮರುಳಪ್ಪ, ಪಂಚಾಕ್ಷರಿ, ನಟರಾಜ್, ರೇಣು ಮತ್ತು ಚಿಕ್ಕಣ್ಣ ಸೇರಿದಂತೆ ನೂರಾರು ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.