ಸುದ್ದಿಮೂಲ ವಾರ್ತೆ
ಆನೇಕಲ್, ಅ.29 : ತಾಲ್ಲೂಕಿನ ರಾಚಮಾನಹಳ್ಳಿಯ ಬೋಧಿಸತ್ವ ಅಶೋಕ ಧ್ಯಾನಕೇಂದ್ರದಲ್ಲಿ ಭಗವಾನ್ ಬುದ್ಧರ ಪ್ರತಿಮೆ ಸ್ಥಾಪನೆ ಮತ್ತು ಧಮ್ಮ ಕಾರ್ಯಕ್ರಮ ನಡೆಯಿತು.
ಶಾಸಕ ಬಿ.ಶಿವಣ್ಣ ಮಾತನಾಡಿ, ಬುದ್ಧ ಜಗತ್ತಿಗೆ ಸನ್ಮಾರ್ಗವನ್ನು ತೋರಿಸಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ದಾರಿದೀಪವಾಗಿದ್ದಾನೆ. ಹಾಗಾಗಿ ಬೌದ್ಧ ಧರ್ಮ ಮಾನವೀಯ ಧರ್ಮವಾಗಿದ್ದು ಎಲ್ಲರೂ ಅನುಸರಿಸಬಹುದಾಗಿದೆ. ಬುದ್ಧರ ತತ್ವ ಸಿದ್ಧಾಂತಗಳಲ್ಲಿ ಮನುಕುಲದ ಅಭಿವೃದ್ಧಿಯಿದೆ. ಮೂಢನಂಬಿಕೆ, ಜಾತಿ ವ್ಯವಸ್ಥೆಗಳನ್ನು ಹೋಗಲಾಡಿಸಿ ನೆಮ್ಮದಿಯ ಜೀವನ ಸಾಗಿಸಲು ಗೌತಮ ಬುದ್ಧರ ಚಿಂತನೆಗಳು ಸಹಕಾರಿಯಾಗಿವೆ ಎಂದರು.
ಬೋಧಿದತ್ತ ಬಂತೇಜಿ ಮಾತನಾಡಿ, ಬುದ್ಧನ ಚಿಂತನೆಗಳನ್ನು ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿಯೂ ಬೋಧಿಸತ್ವ ಅಶೋಕ ಧ್ಯಾನಕೇಂದ್ರದ ಮೂಲಕ ಜನರಲ್ಲಿ ಬೌದ್ಧ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮೀ ಮಾತನಾಡಿ ಮಹಾನ್ ವ್ಯಕ್ತಿಗಳ ಆದರ್ಶವನ್ನು ಅಳವಡಿಸಿಕೊಂಡು ಬುದ್ಧ, ಅಶೋಕ, ಅಂಬೇಡ್ಕರ್ ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ಇದಕ್ಕೆ ಶಿಕ್ಷಣದ ಅವಶ್ಯಕತೆಯಿದೆ. ಎಲ್ಲರೂ ಶಿಕ್ಷಣ ಪಡೆಯುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಸುಗತಪಾಲ ಬಂತೇಜಿ, ಅನಿರುದ್ಧ ಬಂತೇಜಿ, ವಕೀಲ ಆನಂದ ಚಕ್ರವರ್ತಿ, ಮುಖಂಡರಾದ ರಾವಣ, ಬಿ.ಪಿ.ರಮೇಶ್, ಬಳ್ಳೂರು, ಮುನಿವೀರಪ್ಪ, ದೊಡ್ಡಹಾಗಡೆ ಹರೀಶ್, ತಿಮ್ಮರಾಜು, ಶ್ರೀನಿವಾಸ್, ಲಗುಮಯ್ಯ, ಬ್ಯಾಗಡದೇನಹಳ್ಳಿ ರಾಜಪ್ಪ, ತ್ರಿಪುರಸುಂದರಿ, ಬಾಡರಹಳ್ಳಿ ಲೋಕೇಶ್, ಶಂಭಯ್ಯ, ಮಂಜುಳ ರಾಮಕೃಷ್ಣ, ನಾರಾಯಣಸ್ವಾಮಿ, ಶೈಲಾ, ನೇತ್ರಾವತಿ, ಬ್ಯಾಟರಾಜು, ಡಿ.ಮಹದೇಶ್, ಗೌತಮ್ ವೆಂಕಿ, ಸುರೇಶ್ ಪೋತಾ, ವೆಂಕಟೇಶಮೂರ್ತಿ, ಕ್ರಾಂತಿಗೋವಿಂದ್, ಅರೇಹಳ್ಳಿ ಅಶ್ವಥ್, ಶೈಲ, ಸುಮಿತ್ರ, ಸಂತೋಷ್, ನಂದೀಶ್ ಇದ್ದರು.