ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.26:
ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಕಾನೂನುಗಳು ನಾಗರಿಕತೆಯ ಬೆನ್ನೆೆಲುಬಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪುಟ್ಟಮಾದಯ್ಯ ಹೇಳಿದರು.
ಅವರು ನಗರದ ಪಿಡಬ್ಯೂಡಿ ಕ್ಯಾಾಂಪಿನಲ್ಲಿರುವ ಟ್ರಾಾಫಿಕ್ ಪೊಲೀಸ್ ಠಾಣೆ ಆವರಣದಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ಹಾಗೂ ಸಿಂಧನೂರು ಪೊಲೀಸ್ ಉಪವಿಭಾಗದ ಸಹಭಾಗಿತ್ವದಲ್ಲಿ ಶುಕ್ರವಾರ ಹಮ್ಮಿಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನು ಮತ್ತು ನಾಗರಿಕತೆಯನ್ನು ಬೇರ್ಪಡಿಸಲಾಗದು. ಕಾನೂನು ಕೂಡ ನಾಗರಿಕತೆಯ ಬೆನ್ನೆೆಲುಬು ಆಗಿ ಕೆಲಸ ಮಾಡಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್, ವಾಟ್ಸಪ್, ಟ್ವೀಟರ್ ಸೇರಿ ಎಲ್ಲ ತಾಣಗಳನ್ನು ಮನುಕುಲದ ಏಳಿಗೆ ಬಯಸುವ ರೀತಿಯಲ್ಲಿ ಬಳಸಿಕೊಳ್ಳಬೇಕು. ನಿರಂತರವಾಗಿ ಇಂಟರ್ ನೆಟ್ ಬಳಕೆಯಲ್ಲಿ ತೊಡಗಿದರೆ, ಯಾವುದೇ ಪ್ರಯೋಜನವಿಲ್ಲ. ಅದರಿಂದ ದುಷ್ಪರಿಣಾಮಗಳು ಹೆಚ್ಚಾಾಗಿವೆ. ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಇಂಟರ್ ನೆಟ್ ಬಳಕೆ ನಿರ್ಬಂಧಿಸಲಾಗಿದೆ. ಮಕ್ಕಳಿಗೆ ನೆಟ್ ಸಹವಾಸ ಬೇಕಾಗಿಲ್ಲ. ಅವರು ನೆಮ್ಮದಿಯಾಗಿ ನಿದ್ರೆೆ ಮಾಡುವಷ್ಟು ಪುರುಸೊತ್ತು ಇರಬೇಕು. ಅತಿ ಹೆಚ್ಚು ಜನಸಂಖ್ಯೆೆ ಇರುವ ನಮ್ಮ ದೇಶದಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಮುನ್ನೆೆಚ್ಚರಿಕೆ ಅವಶ್ಯ: ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ದ್ವಿಿಚಕ್ರ ವಾಹನ ಓಡಿಸಲು ಅವಕಾಶ ಮಾಡಬಾರದು. ಬಹುತೇಕ ವಾಹನಗಳಿಗೆ ಇನ್ಯುರ್ಸ್ೆ ಇರುವುದಿಲ್ಲ. ಏನಾದರೂ ಅನಾಹುತ ಉಂಟಾದಾಗ ಸಾಕಷ್ಟು ಸಮಸ್ಯೆೆ ಎದುರಿಸಬೇಕಾಗುತ್ತದೆ. ಶಿಕ್ಷೆಗೆ ಗುರಿಯಾಗುತ್ತಾಾರೆ. ನಾನು ಬಹುತೇಕ ಬಾರಿ ಅಪಘಾತ ಪ್ರಕರಣ ಸಂದರ್ಭ ಇನ್ಯುರ್ಸ್ೆ ಇದೆಯಾ? ಎಂದು ಕೇಳುತ್ತಾಾನೆ. ಬಹುತೇಕ ಸಲ ಇಲ್ಲ ಸಾರ್ ಎಂಬ ಉತ್ತರ ಬರುತ್ತದೆ. ಚಿತ್ರದುರ್ಗದಲ್ಲಿ ಬಸ್ ಅಪಘಾತ ಪ್ರಕರಣದಲ್ಲಿ ಎಷ್ಟೋೋ ಸಮಸ್ಯೆೆಯಾಗಿದೆ. ಇದನ್ನೆೆಲ್ಲ ನೋಡಿಯೂ ಕೂಡ ಕಾನೂನು ಪಾಲನೆ ಅನಿವಾರ್ಯವಾಗಿದೆ. ಕಾನೂನು ಸುವ್ಯವಸ್ಥೆೆ ಹಾಗೂ ಅಪರಾಧ ಪ್ರಕರಣಗಳನ್ನು ಸಾರ್ವಜನಿಕ ಸಹಭಾಗಿತ್ವ ಮುಖ್ಯವಾಗಿರುತ್ತದೆ. ಡಿಸೆಂಬರ್ ತಿಂಗಳ ಪರ್ಯಂತ ನಡೆಸದ ಅಪರಾಧ ತಡೆ ಮಾಸಾಚರಣೆಗೆ ಶೇ.25 ರಷ್ಟು ಜನ ಸ್ಪಂದನೆ ವ್ಯಕ್ತವಾದರೂ ಶೇ.60 ರಿಂದ 70 ರಷ್ಟು ಲಿತಾಂಶ ದೊರೆಯುತ್ತದೆ. ಆ ನಿಟ್ಟಿಿನಲ್ಲಿ ನಮ್ಮ ಪೊಲೀಸರ ಪ್ರಯತ್ನಕ್ಕೆೆ ನೀವೆಲ್ಲ ಕೈ ಜೋಡಿಸಬೇಕು ಎಂದರು.
ಡಿವೈಎಸ್ಪಿಿ ಜಿ.ಚಂದ್ರಶೇಖರ ಮಾತನಾಡಿ, ಗಾಂಜಾ ಹಾಗೂ ರೋಡ್ ರೋಮಿಯೋಗಳ ನಿಗ್ರಹ ಸೇರಿ ಅನೇಕ ರೀತಿಯಲ್ಲಿ ಪೊಲೀಸ್ ಕಾರ್ಯಚಟುವಟಿಕೆ ಚುರುಕುಗೊಳಿಸಲಾಗಿದೆ. ಎಸ್ಪಿಿ ಅವರ ಮಾರ್ಗದರ್ಶನದಲ್ಲಿ ನಡೆಸುತ್ತಿಿರುವ ಕಾರ್ಯಾಚರಣೆಗೆ ಸಮಾಜದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇನ್ನಷ್ಟು ಪರಿವರ್ತನೆ ಅಗತ್ಯವಾಗಿದೆ. ಅಪ್ರಾಾಪ್ತ ವಯಸ್ಸಿಿನವರು ವಾಹನ ಚಾಲನೆ ಮಾಡುವುದನ್ನು ಪತ್ತೆೆ ಹಚ್ವಿಿ 150 ಕ್ಕೂ ಹೆಚ್ಚು ಪಾಲಕರಿಗೆ ಈ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿಿದೆ. ಇದು ಪುನರಾವರ್ತನೆ ಆಗಬಾರದು ಎಂದರು.
ಶಹರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೀರಾರೆಡ್ಡಿಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.
ಬಿಡುಗಡೆ:
ಇದೇ ವೇಳೆ ಅಪರಾಧ ತಡೆ ನಿಮಿತ್ತ ಪೊಲೀಸ್ ಇಲಾಖೆಯ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಂಘಟನೆಯ ಮುಖಂಡರಾದ ಎಚ್.ಎನ್. ಬಡಿಗೇರ್, ಚಿಟ್ಟಿಿಬಾಬು, ಪತ್ರಕರ್ತ ಯಮನಪ್ಪ ಪವಾರ ಸೇರಿ ಇತರರು ಕರ ಪತ್ರ ಬಿಡುಗಡೆಯಲ್ಲಿ ಪಾಲ್ಗೊೊಂಡರು.
ಕಾನೂನು ನಾಗರಿಕತೆಯ ಬೆನ್ನೆಲುಬು: ಎಸ್ಪಿ ಪುಟ್ಟಮಾದಯ್ಯ

