ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ.24: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕ ಹಾಗೂ ಎಸ್.ಎನ್ ಕ್ರಿಯಾ ಟ್ರಸ್ಟಿನ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಅವರ ಸ್ವಗೃಹದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ದಸರಾ ಹಬ್ಬ ಹಾಗೂ ಆಯುಧ ಪೂಜೆ ಮತ್ತು ವಿಜಯದಶಮಿ ಅಂಗವಾಗಿ ಮೊದಲಿಗೆ ಆಯುಧ ಪೂಜೆ ಮಾಡಿ ನಂತರ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಿ ಗೌರವಿಸಿ ಹಾಗು ಪುರುಷರಿಗೆ ಬಾಗಿನ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಸಮಾಜ ಸೇವಕರು ಹಾಗೂ ಎಸ್.ಎನ್ ಕ್ರಿಯಾ ಟ್ರಸ್ಟಿನ ಅಧ್ಯಕ್ಷರಾದ ಆಂಜಿನಪ್ಪ (ಪುಟ್ಟು )ರವರು ಬಾಗಿನ ಕೊಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಂಜಿನಪ್ಪ (ಪುಟ್ಟು )ಅವರು, ಮೊದಲಿಗೆ ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳು ತಿಳಿಸಿದರು ನಾಡ ದೇವತೆಯಾದ ಚಾಮುಂಡೇಶ್ವರಿ ದೇವಿ ಕರ್ನಾಟಕದ ಸಮಸ್ತ ಜನತೆಗೆ ಆಶೀರ್ವದಿಸಿ ಅವರ ಕಷ್ಟಗಳನ್ನೆಲ್ಲ ಈಡೇರಿಸಲಿ ಜನರು ಪ್ರತಿ ದಿನಾಲು ನಾವು ಬಳಸುವಂತಹ ವಾಹನಗಳು ಹಾಗೂ ವಸ್ತುಗಳನ್ನು ಇಟ್ಟು ಈ ಒಂದು ದಿನ ಪೂಜೆ ಮಾಡುವಂತಹದ್ದು ಮತ್ತೆ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ನಮ್ಮ ಪದ್ಧತಿ ಎಂದರೆ ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು. ಆ ನಿಟ್ಟಿನಲ್ಲಿ ನಮ್ಮ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಸಹಾ ಬಡವರನ್ನ ಕರೆದು ಅವರಿಗೆ ಸಹಾಯ ಮಾಡುವಂತದು ಈ ಕಾರ್ಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ದಸರಾ ಹಬ್ಬಕ್ಕೆ ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಹುಲ್ ಗೌಡ, ಮುಖಂಡರಾದ ಶಾಂತ ಕುಮಾರ್, ಪದ್ಮನಾಭ, ಎಂ.ಪಿ ವಿಶ್ವನಾಥ್, ಆನೂರ ಆನಂದ್, ಮುನಿರಾಜು, ಮುರಳಿ, ನಾಗೇಶ್ ಸುನಿಲ್, ಚರಣ್ ರಾಜ್, ಇನ್ನುಮುಂತಾದವರು ಹಾಜರಿದ್ದರು.