ಸುದ್ದಿಮೂಲ ವಾರ್ತೆ ಹೊಸಪೇಟೆ, ಜ.08:
ಸುಪ್ರೀಂಕೋರ್ಟ್ ತೀರ್ಪು ನೀಡಿ 16 ತಿಂಗಳು ಕಳೆದರೂ ಸಮ ರ್ಪಕವಾಗಿ ಒಳಮೀಸಲಾತಿ ಜಾರಿ ಮಾಡುವಲ್ಲಿ ಮುಖ್ಯಮಂತ್ರಿಿ ಸಿದ್ದರಾಮ ಯ್ಯನೇತೃತ್ವದ ಕಾಂಗ್ರೆೆಸ್ ಸರಕಾರ ಸಂಪೂರ್ಣ ವಿಲವಾಗಿದೆ ಎಂದು ಮಾದಿಗ ಸಮಗಾರ, ಡೋಹರ, ದಕ್ಕಲಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಸಂಚಾಲಕ ಹಾಗೂ ಬಿಜೆಪಿ ಮುಖಂಡ ಬ್ಯಾಾಲಹುಣ್ಸಿಿ ರಾಮಣ್ಣ ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರಿಿಂ ಕೋರ್ಟ್ ಸ್ಪಷ್ಟಪಡಿಸಿದೆ. ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ಕೇವಲ 6 ತಿಂಗಳಲ್ಲಿ ಒಳಮೀಸಲಾತಿ ಜಾರಿ ಮಾಡಿವೆ. ರಾಜಕೀಯ ಒತ್ತಡಕ್ಕೆೆ ಮಣಿದು 16 ತಿಂಗಳು ಕಳೆದರೂ ವರದಿ ಜಾರಿ ಮಾಡದೇ 10 1 ಜಾತಿಗಳಿಗೆ ಸಾಮಾಜಿಕ ನ್ಯಾಾಯವನ್ನು ಹಂಚುವಲ್ಲಿ ರಾಜ್ಯ ಸರ್ಕಾರ ವಿಲ ವಾಗಿದೆ. ಒಳ ಮೀಸಲಾತಿಯನ್ನು ಶೀಘ್ರ ಜಾರಿ ಮಾಡುವಲ್ಲಿ ಮೀನಮೇಷ ಎ ಣೆಸಿದರೆ, ರಾಜ್ಯಾಾದ್ಯಂತ ಉಗ್ರ ಹೋರಾಟ ಹಮ್ಮಿಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಮುಖಂಡರಾದ ಪೂಜಪ್ಪ, ಕಣವಿಹಳ್ಳಿಿ ಮಂಜುನಾಥ, ಎಸ್.ರವಿಕಿರಣ್, ಶ್ರೀನಿವಾಸ, ಶೇಷು, ದುರ್ಗೇಶ್, ಸ್ವೆೆಲ್ವಮಣಿ, ರಾಘವೇಂದ್ರ ಜೆ.ಬಿ ಹಾಗೂ ಇತರರಿದ್ದರು.

