ಸುದ್ದಿಮೂಲ ವಾರ್ತೆ,
ಬಳಗಾನೂರು ಏ 11 : ರಾಜ್ಯದ ಹಿತದೃಷ್ಟಿ, ಹಾಗೂ ಕ್ಷೇತ್ರದ ಅಬಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು, ರೈತನಾಯಕ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಇದರಿಂದ ರಾಜ್ಯಸೇರಿ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ, ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ರಾಜ್ಯ ವಿಧಾನ ಸಭಾಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ಶ್ರೀಬಸವೇಶ್ವರ ವೃತ್ತ ಹತ್ತಿರ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಫಲವಾಗಿ ಬಿಜೆಪಿಸರಕಾರ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ಅನುದಾನ ನೀಡಿತು. ಇವತ್ತಿಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ನಾನು ಶಾಸಕಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಬಂದ ಅನುದಾನವಾಗಿದೆ. ೫ [ಎ] ಕಾಮುವೆ ಜಾರಿ ಅಸಾದ್ಯ ಎಂದು ಕಾಂಗ್ರೆಸ್ ಮುಖಂಡರಿಗೆ ಗೊತ್ತಿದ್ದರೂ ಸಹ ಹಾಲಿಶಾಸಕ ಆರ್.ಬಸನಗೌಡ ಅವರು ವಿಧಾನಸಭೆಯಲ್ಲಿ ಪ್ರಶ್ನೆ ಕೇಳುವ ಮೂಲಕ ಜನರ ಕಣ್ಣೋರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕೀಸಿದರು.
ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇವತ್ತು ಪ್ರಧಾನಿನರೇಂದ್ರಮೋದಿ ಅವರನ್ನು ಇಡಿ ವಿಶ್ವಮೆಚ್ಚಿದೆ. ಉಪ ಚುನಾವಣೆಯಲ್ಲಿ ಆದಸೋಲು ಆಕಸ್ಮಿಕ, ಅಧಿಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜನತೆ ಗುರುತಿಸುತ್ತಾರೆ ಎಂಬ ಭರವಸೆ ಹೋದಿದ್ದೇನೆ. ಕ್ಷೇತ್ರದ ಮತದಾರರು ಅತಿ ಹೆಚ್ಚು ಮತಗಳಿಂದ ನನಗೆ ಆರ್ಶಿವಾದ ಮಾಡುತ್ತಾರೆ ಎಂಬ ಭರವಸೆ ಇದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಅನೇಕ ಅಭಿವೃದ್ದಿ ಕೆಲಸಗಳು ಹಾಗೂ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಬಸವಂತರಾಯ ಕುರಿ, ಎಂ.ದೊಡ್ಡಬಸವರಾಜ, ಚನ್ನಮಲ್ಲಿಕಾರ್ಜುನ, ಡಾ| ಬಿ.ಎಚ್ದಿವಟರ್,ಬಿಜೆಪಿಮಂಡಳ ಅಧ್ಯಕ್ಷ ಶಿವಪುತ್ರಪ್ಪಅರಳಹಳ್ಳಿ, ಬಿ.ತಿಕ್ಕಯ್ಯ, ಸಭೆಯಲ್ಲಿ ಮತನಾಡಿದರು. ಶೇಖರಪ್ಪಮೇಟಿ ಅಂದಾನೆಪ್ಪಗುಂಡಳ್ಳಿ, ಪ್ರಧಾನಕಾರ್ಯದರ್ಶಿ ಶರಣಯ್ಯಸೋಪ್ಪಿಮಠ. ಮುಖಂಡರಾದ ಡಾ|ಶಿವಶರಣಪ್ಪಇತ್ಲಿ, ಪಪಂಸದಸ್ಯ ಬಸವರಾಜಸ್ವಾಮಿ, ಗುಣಾರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮುಖಂಡರು ಪಕ್ಷದಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ನಾರಾಯಣನಗರಕ್ಯಾಂಪ್,ಲಕ್ಷ್ಮೀಕ್ಯಾಂಪ್ ಸೇರಿ ಪಟ್ಟಣದ ಅನೇಕ ವಾರ್ಡಗಳ ನೂರಾರು ಕಾಂಗ್ರೆಸ್ಕಾರ್ಯಕರ್ತರು ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಬೈಕ್ರ್ಯಾಲಿ: ಪಟ್ಟಣದ ಶ್ರೀಬಸವೇಶ್ವರನಗರದಿಂದ ಬಿಜೆಪಿ ಕಾರ್ಯಕರ್ತರು ಯುವಕರು, ಬೈಕ್ರ್ಯಾಲಿ ನಡೆಸಿ ಪಟಾಕಿ ಸಿಡಿಸುವುದರ ಮೂಲಕ ಮಾಜಿಶಾಸಕ ಪ್ರತಾಪಗೌಡಪಾಟೀಲ್ ಸೇರಿ ಬಿಜೆಪಿ ಮುಖಂಡರನ್ನು ಅದ್ದೂರಿಯಾಗಿ ಸಾಗತಿಸಿದರು.