ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.24:
ಪಟ್ಟಣದಿಂದ ಪೋತ್ನಾಾಳ ಗ್ರಾಾಮಕ್ಕೆೆ ಸಂಪರ್ಕ ಕಲ್ಪಿಿಸುವ ಮುಖ್ಯರಸ್ತೆೆ ಓವರ್ ಲೋಡ್ ಮರಳು, ಕಂಕರ್, ಮರಮ್ ಟಿಪ್ಪರ್ಗಳ ಓಡಾಟದಿಂದ ತೀವ್ರ ಹದಗೆಟ್ಟಿಿರುವ ಹಿನ್ನಲೆಯಲ್ಲಿ ವಿದ್ಯಾಾರ್ಥಿಗಳು ವಾಹನ ಸವಾರರು ಪರದಾಡುವಂತಾಗಿದೆ.
ಅದಲ್ಲದೆ ಮಾರ್ಗದ ಮಧ್ಯದಲ್ಲಿ ದಿದ್ದಗಿ ಗ್ರಾಾಮದ ಹತ್ತಿಿರ ದಿದ್ದಗಿ ಗ್ರಾಾಮಕ್ಕೆೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಪೋಲಾಗುತ್ತ ಮುಖ್ಯ ರಸ್ತೆೆಯ ಮೇಲೆ ಹರಿದು ರಸ್ತೆೆ ತೆಗ್ಗುಗಳಿಂದ ಕೂಡಿ ಕೆಸರು ಗದ್ದೆೆಯಂತಾಗಿದೆ, ಇದರಿಂದಾಗಿ ಶಾಲೆಗೆ ತೆರಳುವ ವಿದ್ಯಾಾರ್ಥಿಗಳು, ಪಾದಚಾರಿಗಳು, ದ್ವಿಿಚಕ್ರವಾಹನ ಸವಾರರು ರಸ್ತೆೆಯಲ್ಲಿ ಸಂಚರಿಸಲು ಪರಿತಪಿಸುವಂತಾಗಿದೆ. ರಾಮತ್ನಾಾಳ ಗ್ರಾಾಪಂಗೆ ಒಳಪಡುವ ಈ ಗ್ರಾಾಮದಲ್ಲಿ ಶುದ್ದನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಪೋಲಾಗುತ್ತಿಿದೆ. ಅದಲ್ಲದೆ ತೆಗ್ಗುಗಳಲ್ಲಿ ನಿಂತ ನೀರು ಒಡೆದ ಪೈಪ್ ಲೈನ್ ಮೂಲಕ ಒಳಸೇರಿ ಸರಬರಾಜುಗೊಳ್ಳುತ್ತಿಿವೆ. ಸಂಬಂಧಿಸಿದ ಗ್ರಾಾಪಂ ಅಭಿವೃದ್ಧಿಿ ಆಧಿಕಾರಿಗಳು ಗಮನಹರಿಸಿ ಪೈಪ್ ಲೈನ್ ದುರಸ್ಥಿಿಗೊಳಿಸುವಂತೆ ಸಾರ್ವಜನಿಕರು, ಪ್ರಯಾಣಿಕರು ಒತ್ತಾಾಯಿಸಿದ್ದಾಾರೆ.
ಶೀಘ್ರದಲ್ಲಿ ಪೈಪ್ಲೈನ್ ದುರಸ್ಥಿಿಗೊಳಿಸಿ, ರಸ್ತೆೆ ದುರಸ್ಥಿಿಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ರಾಮತ್ನಾಾಳ ಗ್ರಾಾಪಂ ಅಭಿವೃದ್ಧಿಿ ಅಧಿಕಾರಿ ಮೋಹಿನ್ಪಾಷಾ ತಿಳಿಸಿದ್ದಾಾರೆ.
ಹದಗೆಟ್ಟ ಬಳಗಾನೂರು-ಪೋತ್ನಾಾಳ ರಸ್ತೆ ವಿದ್ಯಾರ್ಥಿಗಳು, ವಾಹನ ಸವಾರರ ಪರದಾಟ

