ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.13:
ವಿವಿಧ ಸರ್ವೆ ನಂಬರಗಳಿಗೆ ಸೇರಿ, 6 ಎಕರೆ 4 ಗುಂಟೆ ಜಮೀನ ಶೇ 60 ರಷ್ಟು, ಮತ್ತು 4 ಎಕರೆ 21 ಗುಂಟೆಯಲ್ಲಿ ಶೇ. 60 ರಷ್ಟು, 2 ಎಕರೆ ಜಮೀನನಿನಲ್ಲಿ ಶೇ 40ರಷ್ಟು ನಿವೇಶನ ಬಿಡುಗೆಗೊಳಿಸಲು ವಿನ್ಯಾಾಸತಾಂತ್ರಿಿಕ ಅನುಮೋದನೆ ನೀಡಲು ಸಭೆಯಲ್ಲಿ ಚರ್ಚಿಸಲಾಯಿತು.
ಪಟ್ಟಣದ ಪಪಂ ಕಾರ್ಯಾಲಯದಲ್ಲಿ ಪಪಂ ಅಧ್ಯಕ್ಷ ಶಿವುಕುಮಾರ ನಾಯಕ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಸದರಿ ನಿವೇಶನಗಳಲ್ಲಿರುವ ನಾಗರಿಕ ಸೌಲಭ್ಯ,ಮತ್ತು ಉದ್ಯಾಾನವನಕ್ಕೆೆ, ಸದರಿ ಎರಡು ನಿವೇಶನಗಳನ್ನು ಹದ್ದುಬಸ್ತು ಮಾಡಿ ಮರಂ ಹಾಕಿಸಿ,ಎರಡುನಿವೇಶನಗಳನ್ನು ನೊಂದಣಿಮಾಡಿ, ಪರಿತ್ಯಾಾಜ್ಯಪತ್ರವನ್ನು, ನೊಂದಣಿಮಾಡಿಸಿದ ನಂತರವೇ ಶೇ 60 ರಷ್ಟು ಹಾಗೂ ಶೇ40 ರಷ್ಟು ನಿವೇಶನಗಳನ್ನು ಬಿಡುಗಡೆಗೊಳಿಸಲು ಸಭೆಯ ಸದಸ್ಯರು ತಿಳಿಸಿದರು.
ರೈತರಿಂದ ಆಕ್ಷೇಪಣೆ:-ನಿವೇಶನಕ್ಕೆೆ ವಿನ್ಯಾಾಸ ತಾಂತ್ರಿಿಕ ಅನುಮೋದನೆ ನೀಡುವ ಜಮೀನಿನಲ್ಲಿ ರೈತರ ಹೋಲಗದ್ದೆೆಗಳಿಗೆ ನೀರು ಹರಿಸುವ ಕಾಲುವೆ ಹಾದು ಹೋಗಿದ್ದು, ನಿವೇಶನಗಳು ರಚೆಗೊಂಡು,ಘನತ್ಯಾಾಜ್ಯ ಕಲುಷಿತ ಚರಂಡಿ ನೀರು ಕಾಲುವೆ ಸೇರಿ ರೈತರ ನೀರಾವರಿ ಭೂಮಿಹಾಳಾಗುವ ಹಿನ್ನಲೆಯಲ್ಲಿ ಮುಂದಾಗಬಹುದಾದ ಅವಘಡವನ್ನು ಎಚ್ಚರದಲ್ಲಿಟ್ಟುಕೊಂಡು ನಿವೇಶನಗಳಿಗೆ ತಾಂತ್ರಿಿಕ ಅನುಮೋದನೆ ನೀಡದಂತೆ ಮನವಿ ಮಾಡಿದ್ದಾಾರೆ. ಕೆಲವು ನಿವೇಶನ ಮಾಡಿರು ಜಮೀನಿನ ಅಭಿವೃದ್ದಿ ಹೊಂದಿದಾಗ ಮಗ್ಗುಲಲ್ಲಿ ಕುಡಿಯುವನೀರು ಸರಬರಾಜು ಮಾಡುವ ಶಾಲಾಬೋರ್ವೆಲ್ಗಳಿಗೆ ಪರಿಣಾಮಬೀರುವ ಸಾಧ್ಯತೆ ಇದ್ದು ಮುನ್ನೆೆಚ್ಚರಿಕೆ ಕ್ರಮಕೈಗೊಳ್ಳಲು ಸರ್ವಸದಸ್ಯರು ಮುಖ್ಯಾಾಧಿಕಾರಿಗೆ ತಿಳಿಸಿದರು.
ತಾಕೀತು: ಪಪಂ ಅಧಿಕಾರಿಗಳು ಸೇರಿ ಆಡಳಿತ ಮಂಡಳಿಯ ಮೇಲೆ ಬರುತ್ತಿಿರುವ ಆರೋಪಗಳಿಗೆ ತಡೆಹಾಕಿ ಎಂದು ಪುರುಷ ಸದಸ್ಯರೊಂದಿಗೆ ಮಹಿಳಾಸದಸ್ಯರು ಧ್ವನಿಗೂಡಿಸಿ ಅಧಿಕಾರಿಗಳಿಗೆ ತಿಳಿಸಿ ಮುಂದೇಹೀಗಾದಂತೆ ನೋಡಿಕೊಳ್ಳಲು ತಾಕೀತು ಮಾಡಿದರು.
ಪಪಂ ವ್ಯಾಾಪ್ತಿಿಯಲ್ಲಿ ಬರುವ ಗಾಂವಠಾಣಾ ಜಾಗ ಪರೀಶೀಲಿಸಿ ಅಳತೆಮಾಡಿ ಚಕ್ಬಂಧಿ ಸಹಿತ ಹಾಗೂ ನಕಲು ದಾಖಲಾತಿ ಸೃಷ್ಠಿಿಸಿರುವ ಆಸ್ತಿಿಗಳನ್ನು ತೆರವುಗೊಳಿಸಿ ಪಪಂ ಸ್ವಾಾಧೀನಪಡಿಸಿಕೊಳ್ಳಲು ಸರ್ವ ಸದಸ್ಯರುಒಪ್ಪಿಿಗೆ ಸೂಚಿಸಿದರು. ಸಭೆಯಲ್ಲಿ ಇನ್ನಿಿತರ ವಿಷಯಗಳು ಸುದೀರ್ಘವಾಗಿ ಚರ್ಚಿತಗೊಂಡವು.
2025-26 ನೇ ಸಾಲಿನ ಶೇ 5. ಅನುದಾನದಡಿ ವಿಕಲಾಂಗಚೇತನರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಿಸಲು ಸೂಕ್ತ ಲಾನುಭವಿಗಳ್ನು ಆಯ್ಕೆೆ ಮಾಡಲು ವಾರ್ಡಿನ ಸದಸ್ಯಗಮನಕ್ಕೆೆ ತರುವಂತೆ ಸೂಕ್ತ ಲಾನುಭವಿಯನ್ನು ಆಯ್ಕೆೆ ಮಾಡಲು ವಿಆರ್ಡಬ್ಲೂ ಸಿಬ್ಬಂದಿ ವಾರ್ಡಿನ ಸದಸ್ಯರಿಗೆ ಮಾಹಿತಿನೀಡುವಂತೆ ತಿಳಿಸಿದರು.ಹೊಸ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ತಿಳಿಸಲು ಸೂಚಿಸಿದರು.
ಪಪಂ ಉಪಾಧ್ಯಕ್ಷರು, ಪಪಂ ಸದಸ್ಯರು ಪಪಂ ನಾಮನಿರ್ದೇಶನ ಸದಸ್ಯರು ಪಪಂ ಮುಖ್ಯಾಾಧಿಕಾರಿ ಗೋಪಾಲ ನಾಯಕ, ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿಿತರಿದ್ದರು.
ಸಭೆಯಲ್ಲಿ ನೀರಿಗಾಗಿ ಮಹಿಳೆಯರ ಆಗ್ರಹ
ಸಭೆ ನಡೆಯುತಿದ್ದ ಸಂದರ್ಭದಲ್ಲಿ 1 ನೇವಾರ್ಡಿನ ಮಹಿಳೆಯರು ಪಪಂ ಮುತ್ತಿಿಗೆ ಹಾಕಿ, ನೀರುಗಂಟೆಗಳ ಮೇಲೆ ಆರೋಪಿಸುತ್ತ ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಾಯಿಸಿದರು. ಕೆಳಗಡೆ ಇದ್ದ ಪಪಂ ಇತರೆ ಅಧಿಕಾರಿ ವಾರ್ಡಿಗೆ ನೀರುಬಿಡುವ ಭರವಸೆ ನೀಡಿದ ಹಿನ್ನಲೆಯಲ್ಲಿ ಮರಳುವಾಗ ಮಹಿಳೆಯರು ಪಪಂಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತ ತೆರಳಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರು ಭೇಟಿಗೆ ಬಂದಾಗ ಮುಂದೆಬಂದು ಉತ್ತರಿಸಲು ಅಧಿಕಾರಿಗಳು ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು, ಹೋಗಲಿಲ್ಲ ಎಂದು ಸಭೆಯಲ್ಲಿ ಸ್ವಲ್ಪಗದ್ದಲ ಉಂಟಾಯಿತು.
ಬಳಗಾನೂರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ನಿವೇಶನಗಳ ಬಿಡುಗಡೆಗೆ ಷರತ್ತು ಅನ್ವಯಿಸಿದ ಸದಸ್ಯರು

