ಸುದ್ದಿಮೂಲ ವಾರ್ತೆ
ಚಿಂತಾಮಣಿ,ನ.02 : ಸುಪ್ರಸಿದ್ಧ ಭಕ್ತಿಯ ತಾಣ ಹಾಗೂ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಸಂಗಮವಾಗಿರುವ ತಾಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಹಜರತ್ ಸೈಯದ್ಜ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾದ ಗಂಧೋತ್ಸವ ನ.6 ರಂದು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ದರ್ಗಾ ಕಮಿಟಿಯ ಅಧ್ಯಕ್ಷರಾದ ಅಮೀರ್ ಜಾನ್ ಹೇಳಿದರು.
ದರ್ಗಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಧೋತ್ಸವ ಕಾರ್ಯಕ್ರಮಕ್ಕಾಗಿ ಕಮಿಟಿ ವತಿಯಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗಂಧೋತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳು ಸ್ವಚ್ಛತೆ ಹಾಗೂ ಶಾಂತಿಗೆ ಸಹಕರಿಸಬೇಕು. ಉರುಸ್ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯುವಕರು ಬೈಕ್ ವೀಲಿಂಗ್ ಮಾಡಿದರೆ ಅಂತಹ ಅವರ ವಿರುದ್ಧ ಪೊಲೀಸ ಇಲಾಖೆ ಕಠಿಣ ಕ್ರಮ ಜರುಗಿಸುತ್ತದೆ ಎಂದು ತಿಳಿಸಿದರು.
ಗಂಧೋತ್ಸವ ವಕ್ಫ್ ಬೋರ್ಡ್ ಮ್ಯಾನೇಜಿಂಗ್ ಕಮಿಟಿ ಅಧ್ಯಕ್ಷರ ಹಾಗೂ ಮುಜಾವರಗಳ ಮನೆಯಿಂದ ಸಂಜೆ 6 ಗಂಟೆಗೆ ಮೆರವಣಿಗೆ ಮುಖಾಂತರ ಹೊರಡಿ ಪೀರಾನೀ ಮಾ ದರ್ಗಾ ತಲುಪುತ್ತದೆ. ನಂತರ ಊರಿನ ಪ್ರಮುಖ ಬೀದಿಗಳ ಮೂಲಕ ಬಂದು ದರ್ಗಾ ಗೆ ಅರ್ಪಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದರ್ಗಾ ಕಾರ್ಯದರ್ಶಿ ದಾದಾಪೀರ್, ಮೊಹಮ್ಮದ್ ಆಸೀಫ್,ಮುಜಾವರ್ನಿ, ಜಾಮ್ ತಬರೇಜ್,ಮುಜಾವರ್ ಎಸ್ ಮೌಲಾ ಅಲಿ, ಆನಂದ್,ಜಿಲಾನ್ ಸೇರಿದಂತೆ ಮತ್ತಿತರರು ಇದ್ದರು.