ಸುದ್ದಿಮೂಲ ವಾರ್ತೆ
ಬೆಂಗಳೂರು ಜು 3 : ಭಾರತದ ಅಗ್ರ ಬೈಕರ್ಗಳಲ್ಲಿ ಒಬ್ಬರಾದ ಬೆಂಗಳೂರಿನ ರಾಜೇಂದ್ರ ಆರ್., ಭಾನುವಾರ ನಡೆದ ಎಫ್ಎಂಎಸ್ಸಿಐ ರೇ ಭಾರತೀಯ ರಾಷ್ಟ್ರೀಯ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್ಶಿಪ್ ದಕ್ಷಿಣ ವಲಯ ಸುತ್ತಿನಲ್ಲಿ ಪ್ರಶಸ್ತಿ ಗಳಿಸಿದ್ದಾರೆ.
550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ ಅತ್ಯುತ್ತಮ ಸಮಯದೊಂದಿಗೆ ಮೊದಲ ಸ್ಥಾನ ಪಡೆದರು. ನಗರದ ಹೊರವಲಯದ ಸರ್ಜಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ 10 ಕಿಲೋ ಮೀಟರ್ ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿ ಅಚ್ಚರಿ ಮೂಡಿಸಿದರು.
ಟಿ20 ಮಾದರಿ ಎಂದೇ ಕರೆಸಿಕೊಳ್ಳುವ ಸ್ಪ್ರಿಂಟ್ ರೇಸ್ನಲ್ಲಿ ಭಾರತದ ಅಗ್ರ ಬೈಕರ್ಗಳು ಕಣಕ್ಕಿಳಿದಿದ್ದರು. , ಸುಮಾರು 120 ಬೈಕರ್ಗಳು ಸ್ಪರ್ಧಿಸಿದ್ದರು. ಸುಹೇಲ್ ಅಹ್ಮದ್ ಮೂರು ಬಾರಿ ಪೋಡಿಯಂ ಮೇಲೆ ಕಾಣಿಸಿಕೊಂಡರು. ಮೊದಲು 550 ಸಿಸಿ ವರೆಗಿನ ವಿಭಾಗದ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಸುಹೇಲ್, ಆ ಬಳಿಕ ಬುಲೆಟ್ ವಿಭಾಗದಲ್ಲಿ 2ನೇ ಹಾಗೂ 261 ಸಿಸಿ ಯಿಂದ 400ಸಿಸಿ ವರೆಗಿನ ರೇಸ್ನಲ್ಲಿ 3ನೇ ಸ್ಥಾನ ಪಡೆದರು.