ಸುದ್ದಿಮೂಲ ವಾರ್ತೆ ಬಳ್ಳಾಾರಿ, ನ.28:
ಬಡಜನರ ಸ್ವಾಾವಲಂಬನೆ ಬದುಕಿಗೆ ಬ್ಯಾಾಂಕ್ಗಳು ಸಹಕಾರಿಯಾಗಿ ನಿಲ್ಲಬೇಕು ಎಂದು ಬಳ್ಳಾಾರಿ ಲೋಕಸಭಾ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಹೇಳಿದ್ದಾರೆ.
ಶುಕ್ರವಾರ ನಗರದ ಜಿಪಂ ನ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬಳ್ಳಾಾರಿ ಜಿಲ್ಲಾ ಮಟ್ಟದ ಲೀಡ್ ಬ್ಯಾಾಂಕ್ನ ತ್ರೈಮಾಸಿಕ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಕರು ಸ್ವಯಂ ಉದ್ಯೋೋಗ ಕೈಗೊಳ್ಳಲು ಬ್ಯಾಾಂಕ್ನವರ ಸರಿಯಾದ ಮಾರ್ಗದರ್ಶನ ಹಾಗೂ ಸಹಕಾರ ಅಗತ್ಯವಾಗಿದೆ. ಬ್ಯಾಾಂಕ್ ಗಳ ವಿಶ್ವಾಾಸಾರ್ಹತೆ ಹೆಚ್ಚಾಾಗುವ ರೀತಿಯಲ್ಲಿ ಬ್ಯಾಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಸಮಸ್ಯೆೆಗಳಿಗೆ ಸ್ಪಂದಿಸಿ ನಡೆದುಕೊಳ್ಳಬೇಕು ಎಂದರು.
ರೈತರಿಗೆ ಸಾಲ ನೀಡುವಾಗ ವಿನಾ ಕಾರಣ ವಿಳಂಬ ಮಾಡಬಾರದು ಹಾಗೂ ಅವರು ಸಹಾಯಧನಕ್ಕಾಾಗಿ ಸಲ್ಲಿಸುವ ಅರ್ಜಿಗಳನ್ನು ಸಹ ಯಾವುದೇ ಕಾರಣವಿಲ್ಲದೇ ತಿರಸ್ಕಾಾರ ಮಾಡುತ್ತಿಿದ್ದೀರಿ ಇದು ಸರಿಯಾದ ನಡೆ ಅಲ್ಲ ಎಂದರು.
ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆೆ ಸಿಎಸ್ಆರ್ ಅನುದಾನ ನೀಡಬೇಕು. ಜಿಲ್ಲೆಯಲ್ಲಿ ಡಿಸಿ, ಜಿಪಂ ಸಿಇಒ ಅವರ ಆದೇಶದ ಮೇರೆಗೆ ಅನುದಾನ ಬಳಕೆಯಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಾಂಕ್ ಆ್ ಇಂಡಿಯಾ ಬೆಂಗಳೂರು ಎಜಿಎಂ ಅರುಣ್ ಕುಮಾರ್, ಕೆನರಾ ಬ್ಯಾಾಂಕ್ ನ ಪ್ರಾಾದೇಶಿಕ ವ್ಯವಸ್ಥಾಾಪಕ ಅರುಣ್ ಕುಮಾರ್ ಎ.ಜಿ., ಲೀಡ್ ಬ್ಯಾಾಂಕ್ ಮ್ಯಾಾನೇಜರ್ ಗಿರೀಶ್ ವಿ.ಕುಲಕರ್ಣಿ, ನಬಾರ್ಡ್ನ ಎಜಿಎಂ ಯುವರಾಜ ಕುಮಾರ್ ಆರ್.ಎಸ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಾಂಕ್ಗಳ ಅಧಿಕಾರಿಗಳು ಹಾಜರಿದ್ದರು.
ಬಡಜನರ ಸ್ವಾಾವಲಂಬನೆ ಬದುಕಿಗೆ ಬ್ಯಾಾಂಕ್ಗಳು ಸಹಕಾರಿ : ಸಂಸದ ಈ.ತುಕಾರಾಮ್

