ಸುದ್ದಿಮೂಲ ವಾರ್ತೆ ಬೆಂಗಳೂರು, ೆ.09:
ಕೆನಡಾದಲ್ಲಿ ಬೆಂಗಳೂರು ಮೂಲದ ಟೆಕಿಯೊಬ್ಬರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆೆ ಮಾಡಲಾಗಿದೆ.
ನೆಲಮಂಗಲ ತಾಲೂಕಿನ ತ್ಯಾಾಮಗೊಂಡ್ಲು ಗ್ರಾಾಮದ ನಿವಾಸಿ ಚಂದನ್ ಕುಮಾರ್ (37) ಮೃತಪಟ್ಟವರೆಂದು ಗುರುತಿಸಲಾಗಿದೆ. ಮಗನ ಹತ್ಯೆೆ ಸುದ್ದಿ ಕೇಳಿ ಬೆಂಗಳೂರಿನಲ್ಲಿ ನೆಲೆಸಿರುವ ಇಡೀ ಕುಟುಂಬವು ಆಘಾತಗೊಂಡಿದೆ.
ಕೆನಡಾದ ವುಡ್ ಬೈನ್ ಶಾಪಿಂಗ್ ಮಾಲ್ನ ಪಾರ್ಕಿಂಗ್ನಲ್ಲಿ ೆ.7ರ ಮಧ್ಯಾಾಹ್ನ ಗುಂಡಿನ ದಾಳಿ ನಡೆದಿದೆ. ಈ ವೇಳೆ ಕಾರಿನಲ್ಲಿದ್ದ ಚಂದನ್ ಕುಮಾರ್ ಅವರ ಮೇಲೂ ಗುಂಡು ಹಾರಿಸಿದ್ದರು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆೆಗೆ ಸಾಗಿಸುವ ಮಾರ್ಗ ಮಧ್ಯೆೆದಲ್ಲಿಯೇ ಮೃತಪಟ್ಟಿಿದ್ದಾರೆ ಎಂದು ಟೊರೆಂಟೋ ಪೊಲೀಸರು ತಿಳಿಸಿದ್ದಾರೆ. ಆದರೆ, ಹತ್ಯೆೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ನೆಲಮಂಗಲ ತಾಲೂಕಿನ ತ್ಯಾಾಮಗೊಂಡ್ಲು ಗ್ರಾಾಮದ ನಿವೃತ್ತ ಶಿಕ್ಷಕ ನಂದಕುಮಾರ್ ಪುತ್ರ ಚಂದನ್ ಕುಮಾರ್ ಅವರು ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಿಯಾಗಿ ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿಿದ್ದರು.
ಚಂದನ್ ಕುಮಾರ್ ಹತ್ಯೆೆಯಾಗಿರುವ ಬಗ್ಗೆೆ ಕುಟುಂಬಸ್ಥರಿಗೆ ಭಾನುವಾರ ರಾತ್ರಿಿ 10 ಗಂಟೆಗೆ ಕೆನಡಾ ಪೊಲೀಸರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿಿದೆ. ಇದ್ದ ಒಬ್ಬನೇ ಮಗನನ್ನ ಕಳೆದುಕೊಂಡ ಪೋಷಕರು ಕಣ್ಣೀರು ಹಾಕಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಮೃತ ಚಂದನ್ ಕುರ್ಮಾ ಪೋಷಕರು, ನನ್ನ ಮಗ ಅಮೆರಿಕಾದಲ್ಲಿ ಕೆಲಸ ಮಾಡಬೇಕು ಎಂದು ಬಯಸಿದ್ದು. ಆದರೆ, ಅಲ್ಲಿ ಕೆಲಸ ಸಿಗದಿರುವುದರಿಂದ ಕೆನಡಾಕ್ಕೆೆ ಹೋಗಿದ್ದ. ಮದುವೆ ಮಾಡಿಕೊಳ್ಳುವಂತೆ ಹಲವು ಸಲ ಹೇಳಿದ್ದೆವು. ಮದುವೆ ಮಾಡಿಕೊಂಡಿದ್ದರೆ ಆತ ಭಾರತದಲ್ಲಿಯೇ ಇರುತ್ತಿಿದ್ದ. ಆತನ ಸಾವು ದಿಗ್ಭ್ರಮೆ ಮೂಡಿಸಿದೆ. ಮಗನ ಪ್ರಾಾರ್ಥಿವ ಶರೀರವನ್ನು ಭಾರತಕ್ಕೆೆ ಕಳುಹಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆೆ ಮನವಿ ಮಾಡಿದ್ದೇವೆ, ಆತನ ಜನ್ಮಭೂಮಿಯಲ್ಲಿ ಅಂತ್ಯಸಂಸ್ಕಾಾರ ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಕೆನಡಾದಲ್ಲಿ ಕನ್ನಡಿಗನ ಬರ್ಬರ ಹತ್ಯೆ

