ಸುದ್ದಿಮೂಲ ವಾರ್ತೆ ಬೀದರ್, ಜ.20:
2024-25ನೇ ಸಾಲಿನ ಗಾಂಧಿ ಗ್ರಾಾಮ ಪುರಸ್ಕಾಾರಕ್ಕೆೆ ಬೀದರ್ ತಾಲ್ಲೂಕಿನ ಬರೂರ್ ಗ್ರಾಾಮ ಪಂಚಾಯತ್ ಆಯ್ಕೆೆಯಾಗಿರುವುದನ್ನು ವಿರೋಧಿಸಿ ಮರಖಲ್ ಗ್ರಾಾಮ ಪಂಚಾಯತ್ ವತಿಯಿಂದ ನಡೆಸಲಾದ ಪ್ರತಿಭಟನೆಯನ್ನು ಬರೂರ್ ಗ್ರಾಾಮ ಪಂಚಾಯತ್ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಬರೂರ್ ಗ್ರಾಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಚುನಾಯಿತ ಪ್ರತಿನಿಧಿಗಳು ಪತ್ರಿಿಕಾ ಪ್ರಕಟಣೆ ಹೊರಡಿಸಿದ್ದು, ಗಾಂಧಿ ಗ್ರಾಾಮ ಪುರಸ್ಕಾಾರ ಆಯ್ಕೆೆ ಪ್ರಕ್ರಿಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಪಂಚತಂತ್ರ 2.0ಆನ್ಲೈ ವ್ಯವಸ್ಥೆೆಯ ಮೂಲಕ ಪ್ರಶ್ನೋೋತ್ತರ ಹಾಗೂ ಅಂಕಗಳ ಆಧಾರದಲ್ಲಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತೀ ಗ್ರಾಾಮ ಪಂಚಾಯತಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಸ್ಥಳೀಯ ಪರಿಶೀಲನೆ ನಡೆಸಿದ ಬಳಿಕವೇ ಅಂಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕಾ ಪಂಚಾಯತ್ ಬಸವಕಲ್ಯಾಾಣ ಹಾಗೂ ತಾ.ಪಂ. (ಆಡಳಿತ) ಹುಮನಾಬಾದದ ಕಾರ್ಯನಿರ್ವಾಹಕ ಅಧಿಕಾರಿ ರಮ್ಯಾಾ ಆರ್. ಐ.ಎಂ.ಎಸ್. (ಪರೀಕ್ಷಾರ್ಥಿ) ಅವರನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿತ್ತು. ಅವರು ಬರ್ರೂ ಹಾಗೂ ಮರಖಲ್ ಎರಡೂ ಗ್ರಾಾಮ ಪಂಚಾಯತ್ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಬರೂರ್ ಗ್ರಾಾಮ ಪಂಚಾಯತ್ಗೆ179 ಅಂಕಗಳು ಹಾಗೂ ಮರಖಲ್ ಗ್ರಾಾಮ ಪಂಚಾಯತ್ಗ್ 144 ಅಂಕಗಳನ್ನು ನೀಡಿದ್ದರು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಹೆಚ್ಚು ಅಂಕಗಳನ್ನು ಪಡೆದ ಬರೂರ್ ಗ್ರಾಾಮ ಪಂಚಾಯತ್ನ್ನು ಗಾಂಧಿ ಗ್ರಾಾಮ ಪುರಸ್ಕಾಾರಕ್ಕೆೆ ಆಯ್ಕೆೆ ಮಾಡಿ, ಜಿಲ್ಲಾ ಪಂಚಾಯತ್ ಬೀದರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರಕ್ಕೆೆ ಶಿಾರಸ್ಸು ಮಾಡಿದ್ದಾರೆ. ಇದಾದರೂ ಸಹ ಮರಖಲ್ ಗ್ರಾಾಮ ಪಂಚಾಯತ್ನ ಕೆಲವು ಅಧಿಕಾರಿಗಳು, ಆಡಳಿತ ಸದಸ್ಯರು ಹಾಗೂ ಸಂಘಟನೆಗಳು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಜಿಲ್ಲಾ ಪಂಚಾಯತ್ ಕಚೇರಿಯ ಮುಂದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಸುಳ್ಳು ಸಂದೇಶವನ್ನು ಹರಡಿದ್ದಾರೆ ಎಂದು ಬರೂರ್ ಗ್ರಾಾ.ಪಂ. ಆರೋಪಿಸಿದೆ.
ಯಾವುದೇ ಒತ್ತಡಕ್ಕೆೆ ಮಣಿದು ಮೇಲಾಧಿಕಾರಿಗಳು ಗಾಂಧಿ ಗ್ರಾಾಮ ಪುರಸ್ಕಾಾರದಿಂದ ಬರ್ರೂ ಹೆಸರನ್ನು ಕೈಬಿಟ್ಟರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬರ್ರೂ ಗ್ರಾಾಮ ಪಂಚಾಯತ್ ಆಡಳಿತ ಮಂಡಳಿಯ ಪರವಾಗಿ ಸದಸ್ಯರಾದ ಎಂ.ಡಿ.ಬಾಬಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆ ವಿವಾದ : ಮರಖಲ್ ಗ್ರಾ.ಪಂ. ಪ್ರತಿಭಟನೆಗೆ ಬರೂರ್ ಆಡಳಿತ ಮಂಡಳಿ ಖಂಡನೆ

