ಸುದ್ದಿಮೂಲ ವಾರ್ತೆ ಸಿಂಧನೂರು, ಜ.05:
ಹಿರಿಯರು, ಐದು ಬಾರಿ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ ಅವರು ತಮಗೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದ ಅವರ ಸಣ್ಣತನದ ರಾಜಕಾರಣವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಆರೋಪಿಸಿದರು.
ನಗರದ ಬಸ್ ನಿಲ್ದಾಾಣದಲ್ಲಿ ಆಯೋಜಿಸಿದ್ದ ಕೆಕೆಆರ್ಡಿಬಿಯಿಂದ ಮಂಜೂರಾಗಿ ಬಂದಿದ್ದ 14 ಬಸ್ಗಳ ಉದ್ಘಾಾಟನೆ ಹಾಗೂ ಶಾಸಕರೊಂದಿಗೆ ವಿದ್ಯಾಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ನೀಡದೇ ಅಪಮಾನ ಮಾಡಿದ ಹಿನ್ನಲೆಯಲ್ಲಿ ತಮ್ಮ ಜನಸ್ಪಂದನಾ ಕಾರ್ಯಾಲಯದಲ್ಲಿ ತುರ್ತು ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು.
ತಾವು ಪರಿಷತ್ ಶಾಸಕರಾದ ನಂತರ ಕ್ಷೇತ್ರದ ಜನತೆಯ, ವಿದ್ಯಾಾರ್ಥಿಗಳ, ಯುವ ಜನರ, ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾಾ ಬಂದಿದ್ದೇನೆ. ಬಸ್ಗಳ ಕೊರತೆಯಿಂದ ಸರಿಯಾದ ಸಮಯಕ್ಕೆೆ ವಿದ್ಯಾಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತಿಿಲ್ಲ ಎನ್ನುವ ಸಮಸ್ಯೆೆಯ ಕುರಿತು ಅಧಿವೇಶನದಲ್ಲಿ ಮಾತನಾಡಿದ್ದೇನೆ. ನಮ್ಮ ಸರಕಾರ ವಿದ್ಯಾಾರ್ಥಿಗಳ ಅನುಕೂಲಕ್ಕಾಾಗಿ 14 ಬಸ್ಗಳನ್ನು ನೀಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿಪೋ ವ್ಯವಸ್ಥಾಾಪಕ ಹೊನ್ನಪ್ಪ ನಮ್ಮ ಕಛೇರಿಗೆ ಬಂದು ಆಹ್ವಾಾನಿಸಿದ ಹಿನ್ನಲೆಯಲ್ಲಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆೆ. ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ನಡೆದುಕೊಂಡ ರೀತಿ, ವರ್ತನೆ ಸರಿಯಾಗಿಲ್ಲ. ಸರಕಾರಿ ಕಾರ್ಯಕ್ರಮದಲ್ಲಿ ಶಿಷ್ಠಾಾಚಾರ ಉಲ್ಲಂಘನೆಯಾಗಿದೆ. ಸರಕಾರದ ಬಸ್ಗಳು ನಿಮ್ಮ ಮನೆಯಿಂದ ತಂದ ಬಸ್ಗಳಲ್ಲ. ನೀವು ಶಾಸಕರು, ನಾನು ಶಾಸಕ. ನೀವು ಅಧಿಕಾರಿಗಳ ಮೂಲಕ ಹಗೆತನ ತೋರಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೋಮನಗೌಡ ಬಾದರ್ಲಿ, ಶಿವಕುಮಾರ ಜವಳಿ ಇದ್ದರು.
ನನ್ನ ಮುಗಿಸಲು ಯತ್ನ: ಹಂಪನಗೌಡ ಬಾದರ್ಲಿ ಅವರೇ ನೀವು ಕಾಂಗ್ರೆೆಸ್ ಪಕ್ಷದ ಶಾಸಕರು. ಪಕ್ಷದಿಂದ ಸ್ಪರ್ಧಿಸದಿದ್ದರೆ ನೀವು ಠೇವಣಿ ಕಳೆದುಕೊಳ್ಳುತ್ತಿಿದ್ದಿರಿ. ನಿಮಗೆ ತಾಕತ್ತು ಇದ್ದರೆ ಪಕ್ಷ ಬಿಟ್ಟು ಹೋಗಿ ನಿಮ್ಮ ಸಾಮರ್ಥ್ಯ ಗೊತ್ತಾಾಗುತ್ತದೆ. ನಿಮ್ಮಿಿಂದ ಪಕ್ಷ ಹಾಗೂ ಸರಕಾರ ಇಲ್ಲ. ಸರಕಾರಿ ಕಾರ್ಯಕ್ರಮದಲ್ಲಿ ನನಗೆ ಮಾಡಿದ ಅಗೌರವ ಇಡೀ ವಿಧಾನ ಪರಿಷತ್ಗೆ ಮಾಡಿದ ಅಗೌರವವಾಗಿದೆ. ರೈತನ ಮಗನಿಗೆ ಮಾಡಿದ ಅವಮಾನವಾಗಿದೆ. ನನ್ನ ಬೆಳವಣಿಗೆ ಸಹಿಸಲು ನಿಮ್ಮಿಿಂದ ಸಾಧ್ಯವಾಗುತ್ತಿಿಲ್ಲ. ನನ್ನ ಮುಗಿಸಲು ವಿಪಕ್ಷಗಳೊಂದಿಗೆ ಕೈ ಜೋಡಿಸಿದ್ದೀರಿ. ಹಗೆತನ ಇದ್ದರೆ ನೇರವಾಗಿ ಮಾಡಿ ಎಂದು ಸವಾಲೆಸೆದರು.
ಹೊಂದಾಣಿಕೆ ರಾಜಕಾರಣ : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆೆಸ್ ಕಾರ್ಯಕರ್ತರ ಪರಿಶ್ರಮದಿಂದ ನೀವು ಗೆದ್ದಿದ್ದೀರಿ. ವಿಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿಿದ್ದೀರಿ. ನಿಮ್ಮ ಮೇಲಿನ ಅನೇಕ ಆರೋಪಗಳನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆೆ ತಂದಿದ್ದೇನೆ. ಐದು ಬಾರಿ ಶಾಸಕರಾಗಿ ಕ್ಷೇತ್ರಕ್ಕೆೆ ತಾಂತ್ರಿಿಕ ಕಾಲೇಜುಗಳಾಗಲಿ, ಕೈಗಾರಿಕೆಗಳಾಗಲಿ ತಂದಿಲ್ಲ. ಎಸ್ಸಿಿ-ಎಸ್ಟಿ ಮಂಜೂರಾಗಿದ್ದ ಬೋರ್ವೆಲ್ಗಳನ್ನು ತಡೆಹಿಡಿಯಲು ಪತ್ರ ಬರೆದಿದ್ದು, ನೀವು ಯಾವ ಸಮಾಜದ ಪರವಾಗಿದ್ದೀರಿ? ನಾನು ಪರಿಷತ್ ಶಾಸಕನಾದ ನಂತರ ಏನೇನು ಕೆಲಸಗಳಾಗಿವೆ ಎನ್ನುವದು ಕ್ಷೇತ್ರದ ಜನತೆಗೆ ಗೊತ್ತಿಿದೆ. ನೀವು ಹಾಗೂ ನಾನು ಮಾಡಿದ ಕೆಲಸಗಳ ಬಗ್ಗೆೆ ಬರಹಿಂಗ ಚರ್ಚೆಗೆ ಬನ್ನಿಿ ಎಂದು ಸವಾಲೆಸೆದ ಬಸನಗೌಡ, ನನ್ನ ಪಕ್ಷನಿಷ್ಠೆೆ ಗುರುತಿಸಿ ಎಮ್ಎಲ್ಸಿ ಮಾಡಿದೆ. ನಾನು ನೇರವಾಗಿ ನಿಮ್ಮಿಿಂದಲೇ ಉತ್ತರ ಬಯಸುವೆ. ನಿಮ್ಮ ಕುಟುಂಬದ ಸದಸ್ಯರಿಂದಾಗಲಿ, ನಿಮ್ಮ ಹಿಂಬಾಲಕರಿಂದಾಗಲಿ ಬೇಕಿಲ್ಲ ಎಂದರು.
ಭಯದ ವಾತಾವರಣ : ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಭಯಭೀತರನ್ನಾಾಗಿ ಮಾಡುವ ಕೆಲಸ ನಡೆದಿದೆ. ಕಾನೂನಿನ ಕೆಲಸ ಮಾಡಲು ಬಿಡುತ್ತಿಿಲ್ಲ. ಅಧಿಕಾರಿಗಳು ನೀವು ಏನು ಮಾಡುತ್ತಿಿದ್ದೀರಿ ಎನ್ನುವದು ನನಗೆ ಗೊತ್ತಿಿದೆ. ಜನತೆಗೆ ಸರಕಾರದ ಮೇಲೆ ನಂಬಿಕೆ, ವಿಶ್ವಾಾಸವಿದೆ. ಸಂವಿಧಾನ, ಕಾನೂನಿಡಿ ಕೆಲಸ ಮಾಡಲು ಮತ್ತೊೊಮ್ಮೆೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಶಾಸಕರು ಅಧಿಕಾರಿಗಳ ಮೂಲಕ ಕಾನೂನು ಬಾಹೀರ ಚಟುವಟಿಕೆಗಳನ್ನು ಮಾಡಿಸುತ್ತಿಿದ್ದಾಾರೆ. ಮುಂದಿನ ದಿನಗಳಲ್ಲಿ ನನ್ನ ಕಾರ್ಯಕರ್ತರ ಮೇಲೆ ಗುಂಡಾಗಿರಿ ನಡೆದರೆ ಸಹಿಸುವದಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಹಂಪನಗೌಡರಿಂದ ಸಣ್ಣತನದ ರಾಜಕಾರಣ – ಬಸನಗೌಡ ಬಾದರ್ಲಿ

